ಬೀದರ: ರಾಜ್ಯ ಸಹಕಾರ ಮಹಾ ಮಂಡಳ ಮತ್ತು ಸಹಕಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿಬಂಧಕರ ಅಧೀನದಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮತ್ತು ಸಹಕಾರ ಅಭಿವೃದ್ಧಿ ಅಧಿಕಾರಿಗಳಿಗಾಗಿ ಮೂರು ದಿನಗಳ ಅಧ್ಯಯನ ಪ್ರವಾಸ ಕಾರ್ಯಕ್ರಮವನ್ನು ನಗರದ ಸಹಾರ್ದ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ರಾಜ್ಯ ಸಹಕಾರ ಮಹಾ ಮಂಡಳ ವ್ಯವಸ್ಥಾಪಕ ನಿರ್ದೇಶಕ ಅರುಣಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳು ಈ ತರಬೇತಿ ಪಡೆದು ಸ್ವ ಸಹಾಯ ಸಂಘಗಳಿಗೆ ಭೇಟಿ ನೀಡಿ, ಅದರ ಕಾರ್ಯವೈಖರಿ ತಿಳಿದುಕೊಳ್ಳಬೇಕು.
ಬೀದರ ಜಿಲ್ಲೆ ಚಿಕ್ಕದಾದರೂ ಸಹ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಸಹಾರ್ದ ತರಬೇತಿ ಕೇಂದ್ರದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಹಕಾರಿಗಳು ಹಾಗೂ ಸಹಕಾರೇತರ ತರಬೇತಿ ಪಡೆದು ಸದುಪಯೋಗ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಭಾಗಾರೆಡ್ಡಿ ಚಿನ್ನಾರೆಡ್ಡಿ, ಸಹಕಾರ ಸಂಘಗಳ ಉಪನಿಬಂಧಕ ವಿಶ್ವನಾಥ ಮಲಕೂಡ, ಡಿಸಿಸಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕಾರ್ಜುನ ಮಹಾಜನ, ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಹತ್ತಿ ಸೇರಿದಂತೆ ಯೂನಿಯನ್ ಸಿಬ್ಬಂದಿಗಳು, ವಿವಿಧ ಜಿಲ್ಲೆಗಳ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮತ್ತು ಸಹಕಾರ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
ಸಹಾರ್ದ ಕೇಂದ್ರದ ನಿರ್ದೇಶಕ ಸುಬ್ರಹ್ಮಣ್ಯಂ ಪ್ರಭು ಸ್ವಾಗತಿಸಿದರು. ಮಹಾಮಂಡಳ ಎಸ್ಟೇಟ್ ಅಧಿಕಾರಿ ಲಕ್ಷ್ಮೀಕಾಂತ ಕಟ್ಟಿಮನಿ ನಿರೂಪಿಸಿದರು. ಸಲಹೆಗಾರ ಪಿ. ರುದ್ರಪ್ಪ ವಂದಿಸಿದರು.