Advertisement

Bidar;15.50 ಕೋಟಿ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ

03:53 PM Mar 10, 2024 | Team Udayavani |

ಬೀದರ: ಔರಾದ ತಾಲೂಕಿನ ವನಮಾರಪಳ್ಳಿ ಬಳಿ ಆಂಧ್ರದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 15.96 ಕೋಟಿ ರೂ. ಮೌಲ್ಯದ 1596 ಕೆ.ಜಿ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿಕೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಅತ್ಯಧಿಕವಾಗಿ ಗಾಂಜಾ ಜಪ್ತಿ ಮಾಡಿದ ಘಟನೆ ಇದಾಗಿದೆ.

Advertisement

ಖಚಿತ ಮಾಹಿತಿ ಮೇರೆಗೆ ಕೇಂದ್ರ ಸರ್ಕಾರದ ಎನ್‌.ಸಿಬಿ ಮತ್ತು ಜಿಲ್ಲಾ ಪೊಲೀಸರ ತಂಡ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಪಾರ ಮೌಲ್ಯದ ಗಾಂಜಾ ಜಪ್ತಿ ಮಾಡಿದೆ. ಲಾರಿ ಚಾಲಕ ಮಾರ್ಗ ಬದಲಿಸಿ ಕರ್ನಾಟಕ ದೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಚೆಕ್‌ ಪೋಸ್ಟ್‌ ಬಳಿ ಪರಿಶೀಲಿಸಿದಾಗ ಸದರಿ ಲಾರಿಯಲ್ಲಿ ನಿಷೇಧಿತ ಗಾಂಜಾ ಪತ್ತೆಯಾಗಿದೆ.ಲಾರಿಯನ್ನು ವಶಕ್ಕೆ ಪಡೆದು,ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಎನ್‌.ಸಿ.ಬಿ ಪ್ರಕರಣ ದಾಖಲಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next