Advertisement

ಪೇದೆಗೆ ಸೋಂಕು; ಠಾಣೆ ಸೀಲ್‌ಡೌನ್‌

11:25 AM Jun 29, 2020 | Naveen |

ಬೀದರ: ನಗರದ ಗಾಂಧಿ ಗಂಜ್‌ ಪೊಲೀಸ್‌ ಠಾಣೆಯ ಪೇದೆಗೆ ಕೋವಿಡ್ ಸೋಂಕು ವಕ್ಕರಿಸಿರುವ ಹಿನ್ನಲೆಯಲ್ಲಿ ರವಿವಾರ ಪೊಲೀಸ್‌
ಠಾಣೆಯನ್ನು ತಾತ್ಕಾಲಿಕವಾಗಿ ಸೀಲ್‌ಡೌನ್‌ ಮಾಡಲಾಗಿದೆ ಪೇದೆ ಗಂಟಲು ದ್ರವ ಮಾದರಿ ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದೆ.

Advertisement

ಸಿಬ್ಬಂದಿಯ ಸಂಪರ್ಕದಲ್ಲಿದ್ದ ಠಾಣೆಯ 30 ಜನ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಪತ್ತೆ ಮಾಡಿ ಕ್ವಾರಂಟೈನ್‌ದಲ್ಲಿ ಇಡಲಾಗಿದೆ ಎಂದು ಎಸ್‌ಪಿ ಡಿ.ಎಲ್‌. ನಾಗೇಶ ತಿಳಿಸಿದ್ದಾರೆ. ಗಾಂಧಿ ಗಂಜ್‌ ಪೊಲೀಸ್‌ ಠಾಣೆಯ ಕಾರ್ಯಚಟುವಟಿಕೆಗಳು ಎಲ್ಲವೂ ನಗರದ ಮಾರ್ಕೆಟ್‌ ಠಾಣೆಯ ಕಟ್ಟಡದಿಂದ ಕಾರ್ಯ ನಿರ್ವಹಿಸಲ್ಪಡುವುದು. ಹಾಗಾಗಿ ಸಾರ್ವಜನಿಕರು ತಮ್ಮ ಯಾವುದೇ ಅಹವಾಲು ಅಥವಾ ದೂರುಗಳನ್ನು ಅಲ್ಲಿಯೇ ನೀಡಬಹುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next