Advertisement

ಬೀದರ್ ನಲ್ಲಿ ಮತ್ತೆ ನಾಲ್ವರ ಸಾವು! 88 ಹೊಸ ಪ್ರಕರಣ ಪತ್ತೆ

09:09 PM Aug 01, 2020 | sudhir |

ಬೀದರ್ : ಗಡಿ ಜಿಲ್ಲೆ ಬೀದರ್ ನಲ್ಲಿ ಶನಿವಾರ ನಾಲ್ವರು ಸೋಂಕಿತರನ್ನು ಬಲಿ ಪಡೆಯುವ ಮೂಲಕ ಕೋವಿಡ್- 19 ಮತ್ತೆ ಅಬ್ಬರಿಸಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 79ಕ್ಕೆ ಏರಿಕೆ ಕಂಡಿದೆ. ಇನ್ನೊಂದೆಡೆ 88 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Advertisement

ಬೀದರ್ ತಾಲೂಕಿನ ಕಮಠಾಣಾ ಗ್ರಾಮದ 65 ವರ್ಷದ ವ್ಯಕ್ತಿಯು ಬೇದಿ, ತೀವ್ರ ಉಸಿರಾಟದ ತೊಂದರೆಯಿಂದ ಬಳಲಿ ಸತ್ತಿದ್ದಾರೆ. ಔರಾದ ತಾಲೂಕಿನ ಎಕಲಾರ ಗ್ರಾಮದ 70 ವರ್ಷದ ವ್ಯಕ್ತಿಯು ತೀವ್ರ ಉಸಿರಾಟದ ತೊಂದರೆ, ಕಮಲನಗರ ತಾಲೂಕಿನ ಮುರ್ಕಿ ಗ್ರಾಮದ 40 ವರ್ಷದ ವ್ಯಕ್ತಿಯು ಶೀತ, ಶಕ್ತಿ ಹೀನತೆ, ತೀವ್ರ ಉಸಿರಾಟದ ಹಿನ್ನಲೆ ಮೃತಪಟ್ಟಿದ್ದರೆ, ಬೀದರ ನಗರದ 62 ವರ್ಷದ ವ್ಯಕ್ತಿಯು ಉಸಿರಾಟದ ಜತೆಗೆ ಹೊಟ್ಟೆ ಬೇನೆ, ಡಾಯರಿಯಾ ಸಮಸ್ಯೆ ಕಾರಣ ಸಾವನ್ನಪ್ಪಿದ್ದಾರೆ. ಮೃತ ನಾಲ್ವರಲ್ಲಿಯೂ ಕೋವಿಡ್- 19 ಸೋಂಕು ಇರುವುದು ದೃಢಪಟ್ಟಿತ್ತು.

ಜಿಲ್ಲೆಯಲ್ಲಿ ಶನಿವಾರ ಪತ್ತೆಯಾಗಿರುವ 88 ಹೊಸ ಸೋಂಕಿನ ಪ್ರಕರಣಗಳಲ್ಲಿ ಬೀದರ್ ತಾಲೂಕಿನಲ್ಲಿಯೇ ಅತಿ ಹೆಚ್ಚು 50 ಕೇಸ್‌ಗಳು ಸೇರಿವೆ. ಇನ್ನುಳಿದಂತೆ ಔರಾದ ತಾಲೂಕಿನಲ್ಲಿ 15, ಬಸವಕಲ್ಯಾಣ ತಾಲೂಕಿನಲ್ಲಿ 11, ಹುಮನಾಬಾದ ತಾಲೂಕಿನಲ್ಲಿ 6, ಭಾಲ್ಕಿ ತಾಲೂಕಿನಲ್ಲಿ 4 ಮತ್ತು ಹೊರ ರಾಜ್ಯದ 2 ಪ್ರಕರಣಗಳು ದೃಡಪಟ್ಟಿವೆ.

ಹೊಸ ಸೋಂಕಿತರು ಸೇರಿ ಜಿಲ್ಲೆಯಲ್ಲಿ ಈಗ ಪಾಸಿಟಿವ್ ಪ್ರಕರಣಗಳು 2263 ಆದಂತಾಗಿದೆ. ಈ ಪೈಕಿ 79 ಜನ ಸಾವನ್ನಪ್ಪಿದ್ದಾರೆ. ಇಂದು 61 ಮಂದಿ ಚಿಕಿತ್ಸೆಯಿಂದ ಗುಣಮುಖಾಗಿ ಬಿಡುಗಡೆಯಾಗಿದ್ದು, ಒಟ್ಟಾರೆ ಇದುವರೆಗೆ 1544 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 636 ಸೋಂಕಿತರು ಕೋವಿಡ್- 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 50,732 ಜನರ ಗಂಟಲು ದ್ರವ ಮಾದರಿಯ ಪರೀಕ್ಷೆಯ ನಡೆಸಲಾಗಿದ್ದು, ಅದರಲ್ಲಿ 47,803 ಮಂದಿಯದ್ದು ನೆಗೆಟಿವ್ ಬಂದಿದ್ದರೆ ಇನ್ನೂ 666 ಜನರ ಪರೀಕ್ಷೆ ವರದಿ ಬರುವುದು ಬಾಕಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next