Advertisement

ಬೀದರ್ ಒಂದೇ ದಿನ 11 ಪಾಸಿಟಿವ್ ಪ್ರಕರಣ: ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ

08:56 AM May 14, 2020 | sudhir |

ಬೀದರ್ : ಗಡಿ ನಾಡು ಬೀದರ್ ಜಿಲ್ಲೆಗೆ ಕಿಲ್ಲರ್ ಕೋವಿಡ್ ಸೋಂಕು ಬೆಂಬಿಡದೇ ಕಾಡುತ್ತಿದ್ದು, ಬುಧವಾರ ಒಂದೇ ದಿನ 11 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿರುವುದು ಜಿಲ್ಲೆ ಜನರನ್ನು ಆತಂಕ ಹೆಚ್ಚಿಸಿದೆ. ಎಲ್ಲ 11 ಸೋಂಕಿತರು ಕಂಟೈನ್ಮೆಂಟ್ ಝೋನ್ ಸಂಪರ್ಕವೇ ಕಾರಣ ಎಂದು ದೃಢಪಡಿಸಿರುವುದು ಬೀದರನಲ್ಲಿ ಸಮುದಾಯ ಪ್ರಸರಣ ಹಂತ ತಲುಪಿಸಿದೆಯೇ ಎಂಬ ಅನುಮಾನ ಕಾಡುವಂತೆ ಮಾಡಿದೆ.

Advertisement

ಕಳೆದ ಮೂರು ದಿನಗಳಿಂದ ಸೋಂಕಿನ ಪ್ರಕರಣಗಳು ವರದಿಯಾಗುತ್ತಿರುವುದು ಜನರಲ್ಲಿ ಭೀತಿ ಹೆಚ್ಚಿಸಿದರೆ, ಜಿಲ್ಲಾಡಳಿಕ್ಕೆ ತಲೆ ನೋವು ಆಗಿ ಪರಿಣಮಿಸಿದೆ. ಸೋಮವಾರ ಮತ್ತು ಮಂಗಳವಾರ ಎರಡೆರಡು ಪ್ರಕರಣಗಳು ಕಾಣಿಸಿಕೊಂಡಿದ್ದವು. ಒಟ್ಟಾರೆ ಜಿಲ್ಲೆಯಲ್ಲಿ ಈಗ ಪಾಸಿಟಿವ್ ಗಳ ಸಂಖ್ಯೆ 41 ಕ್ಕೆ ಏರಿಕೆಯಾಗಿದೆ.

ಹೊಸ 11 ಪ್ರಕರಣಗಳಲ್ಲಿ 9 ಮಹಿಳೆಯರು ಆಗಿದ್ದರೆ, 2 ಪುರುಷರು ಸೇರಿದ್ದಾರೆ. ಅಷ್ಟೇ ಅಲ್ಲ ಐದು ಜನರು 14 ರಿಂದ 20 ವರ್ಷದ ಒಳಗಿನವರು ಆಗಿರುವುದು ಆಘಾತ ಹೆಚ್ಚಿಸಿದೆ.

30 ವರ್ಷದ ಪಿ- 931, 26 ವರ್ಷದ 932, 19 ವರ್ಷದ ಪಿ-935, 36 ವರ್ಷದ ಪಿ-936, 17 ವರ್ಷದ ಪಿ-937, 36 ವರ್ಷದ ಪಿ- 938, 31 ವರ್ಷದ ಪಿ-939, 15ವರ್ಷದ ಪಿ-940, 16 ವರ್ಷದ ಪಿ-941, 14 ವರ್ಷದ ಪಿ- 942 ಮತ್ತು 35 ವರ್ಷದ ಪಿ-943 ರೋಗಿಯಲ್ಲಿ ಸೋಂಕು ಇರುವುದನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೇಟಿನ್ ನಲ್ಲಿ ದೃಢಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next