Advertisement
ಪತ್ರಕರ್ತ ಅರಕಲಗೂಡು ಜಯಕುಮಾರ್ ‘ಮರಳಿ ಬಾ ಮನ್ವಂತರವೇ’ ಚಲನಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಾಹಿತಿ – ಕವಿ ರೂಪ ಹಾಸನ ಇದೇ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಗೀತ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ ರಾಂಗೋಪಾಲ್ ವರ್ಮಾ ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದ ಆನೆಂ ವೆಂಕಟರಾವ್, ಛಾಯಾಗ್ರಹಣ ಹಾಗೂ ಡಿಓಪಿ ಹೊಣೆ ಹೊತ್ತಿದ್ದಾರೆ.
Related Articles
Advertisement
ಬೀದರ್ ನಿಂದ ಸಿನಿಮಾ ಕ್ಷೇತ್ರಕ್ಕೆ ಸುಲಕ್ಷಾ ಕೈರಾ ಭರವಸೆಯ ಕೊಡುಗೆಯಾಗಿದ್ದಾರೆ. ಇವರ ಜೋಡಿಯಾಗಿ ಹಾಸನ ಜಿಲ್ಲೆಯ ಅರಕಲಗೂಡಿನ ಹೊಸ ಪ್ರತಿಭೆ ಆರ್ಯನ್ ಕನ್ನಡ ಚಿತ್ರರಂಗಕ್ಕೆ ನಾಯಕರಾಗಿ ಪರಿಚಯವಾಗುತ್ತಿದ್ದಾರೆ. ಕಿರು ತೆರೆಯಲ್ಲಿ ಸದ್ದು ಮಾಡಿರುವ ಬಾಲ ನಟಿ ರೀತುಸಿಂಗ್ (ಸಿಹಿ) ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರಾಮನಗರ ಜಿಲ್ಲೆಯ ಕೆಂಗಲ್ ವೀರಾಂಜನೇಯ ದೇಗುಲದ ಆವರಣದಲ್ಲಿ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ದೇಗುಲ ಟ್ರಸ್ಟ್ ಅಧ್ಯಕ್ಷ ಚಂದ್ರು ಹಾಗೂ ಉದ್ಯಮಿ ಜಗದೀಶ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. ನಾಯಕ-ನಾಯಕಿ ಮದುವೆ ದೃಶ್ಯಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿ ಕೊಳ್ಳಲಾಯಿತು. ಕೊಪ್ಪಳ ಜಿಲ್ಲೆಯ ಸಂಗಮೇಶ್ ಗದ್ದಿ ಸಹ ನಿರ್ದೇಶನ, ಮಹೇಶ ಉಣಚಗೇರಿ, ಯುವ ಪತ್ರಕರ್ತೆ ಸಾನಿಯಾ ಶಿವಮೊಗ್ಗ ಸಹಾಯಕ ನಿರ್ದೇಶಕರಾಗಿದ್ಧಾರೆ. ಅನಂತ ಆರ್ಯನ್ ಸಂಗೀತ, ಉದಯ ಜಗಳೂರು ಸಂಕಲನ ಮಾಡುತ್ತಿದ್ದಾರೆ. ಬೆಂಗಳೂರು, ಚನ್ನಪಟ್ಟಣ ತಾಲೂಕಿನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ.
ಚಿತ್ರದ ತಾರಾಗಣದಲ್ಲಿ ಸುಲಕ್ಷಾ ಕೈರಾ , ಆರ್ಯನ್, ಬಾಲ ನಟಿ ರೀತು ಸಿಂಗ್ , ಮೂಗು ಸುರೇಶ್, ಮಯೂರ್, ಶ್ರೀ ಪರಿಣೀತಿ, ಸಾನಿಯಾ, ಜ್ಯೋತಿಕಾ, ಅನ್ನಪೂರ್ಣ, ಎಚ್ ಎಲ್ ಜನಾರ್ಧನ್, ಜಿ ಆರ್ ಜಗದೀಶ್ ಮತ್ತಿತರರು ಇದ್ದಾರೆ.