Advertisement

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

07:52 PM Oct 06, 2024 | Team Udayavani |

ಬೀದರ: ತೊಗರಿ ಹೊಲದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ, ಕಿತ್ತು ಹಾಕಿರುವ ಘಟನೆ ರವಿವಾರ(ಅ6) ಕರ್ನಾಟಕ – ಮಹಾರಾಷ್ಟ್ರ ಗಡಿ ಗ್ರಾಮ ಉಜಳಂಬದಲ್ಲಿ ನಡೆದಿದೆ.

Advertisement

ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಹುಮನಾಬಾದ್ ಡಿವೈಎಸ್ಪಿ ಮತ್ತು ಸಿಪಿಐ ನೇತೃತ್ವದ ತಂಡ ದಾಳಿ ನಡೆಸಿದೆ. 3.7 ಎಕರೆ ಜಮೀನಿನಲ್ಲಿ ತೊಗರಿ ಬೆಳೆಯಲಾಗಿದ್ದು, ಮಧ್ಯದಲ್ಲಿ ಗಾಂಜಾ ಗಿಡಗಳನ್ನು ನೆಡಲಾಗಿದ್ದು, 6 ಅಡಿಯಷ್ಟು ಎತ್ತರ ಬೆಳೆದಿದ್ದವು. ಸರ್ಕಾರಿ ಪಂಚನಾಮ ನಡೆಸಿ, ಈವರೆಗೆ 700 ಕ್ಕಿಂತ ಅಧಿಕ ಗಿಡಗಳನ್ನು ಕಿತ್ತು ಹಾಕಲಾಗಿದೆ. ಇನ್ನೂ ಕಾರ್ಯಚರಣೆಯನ್ನು ಮುಂದುವರೆಸಲಾಗಿದ್ದು, 2 ಕ್ವಿಂಟಾಲ್ ಗಾಂಜಾ ಬೆಳೆ ಇರುವ ಅಂದಾಜು ಇದೆ.

ಬಸವಂತ‌ ಎಂಬುವರಿಗೆ ಈ ಜಮೀನು ಸೇರಿದೆ. ಸದರಿ ಹೊಲ ಕರ್ನಾಟಕದ‌ ಸರ್ವೇ ನಂಬರ್ ಸೇರಿದ್ದರೆ, ಮಾಲಕರು ಮಹಾರಾಷ್ಟ್ರದವರು ಆಗಿದ್ದಾರೆ. ಸ್ಥಳಕ್ಕೆ ಜಿಲ್ಲಾ‌ ಎಸ್.ಪಿ‌ ಪ್ರದೀಪ ಗುಂಟಿ ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next