Advertisement

ಬೀದರ್‌: ಸಿಪಿಐ ಮತ್ತು ಪಿಎಸ್‌ಐ ಸೇರಿ 15 ಪೊಲೀಸರು ಕ್ವಾರಂಟೈನ್ ಗೆ

08:05 PM May 24, 2020 | Sriram |

ಬೀದರ್‌: ಜೂಜಾಟ ಅಡ್ಡೆ ಮೇಲೆ ದಾಳಿ ವೇಳೆ ಕೋವಿಡ್ 19 ಸೋಂಕಿತನ ದ್ವಿತೀಯ ಸಂಪರ್ಕಕ್ಕೆ ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಚಿಟಗುಪ್ಪ ಠಾಣೆಯ ಓರ್ವ ಸಿಪಿಐ ಮತ್ತು ಇಬ್ಬರು ಪಿಎಸ್‌ಐ ಸೇರಿ 15 ಜನ ಪೊಲೀಸ್‌ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

Advertisement

ಈ ಬಗ್ಗೆ ಎಸ್‌ಪಿ ಡಿ.ಎಲ್ ನಾಗರಾಜ ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ಚಿಟಗುಪ್ಪ ಠಾಣೆ ಪೊಲೀಸರು ಶುಕ್ರವಾರ ತಾಲೂಕಿನ ಗ್ರಾಮವೊಂದರಲ್ಲಿ ಜೂಜಾಟ ನಿರತ ಅಡ್ಡೆ ಮೇಲೆ ದಾಳಿ ನಡೆಸಿ 12 ಜನರನ್ನು ಬಂಧಿಸಿದ್ದರು. ಇವರಲ್ಲಿ ಇಬ್ಬರು ಬೀದರ್‌ ನ ಬಸವ ನಗರದಲ್ಲಿ ಪತ್ತೆಯಾಗಿರುವ ಕೋವಿಡ್  19 ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು. ಇದರಿಂದ ಪೊಲೀಸರು ದ್ವಿತೀಯ ಸಂಪರ್ಕಕ್ಕೆ ಬಂದಂತಾದ ಹಿನ್ನಲೆಯಲ್ಲಿ ಪೊಲೀಸ ಅಧಿಕಾರಿಗಳು ಸೇರಿ 15 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next