Advertisement

ಬಿಡದಿ ಪುರಸಭೆ: 68 ಮಂದಿ ಸ್ಪರ್ಧೆ

02:29 PM Dec 19, 2021 | Team Udayavani |

ರಾಮನಗರ: ತಾಲೂಕಿನ ಬಿಡದಿ ಪುರಸಭೆಯ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರಗಳ ಪರಿಶೀಲನೆ ಮುಗಿದಿದ್ದು, ಶನಿವಾರ ನಾಮಪತ್ರಗಳನ್ನು ವಾಪಸ್ಸು ಪಡೆಯಲು ಅವಕಾಶ ನೀಡಿತ್ತು. ಈ ಅವಕಾಶವನ್ನು ಬಳಸಿಕೊಂಡು 5 ಉಮೇದುವಾರರು ತಮ್ಮ ನಾಮ ಪತ್ರಗಳನ್ನು ವಾಪಸ್ಸು ಪಡೆದುಕೊಂಡಿದ್ದಾರೆ.

Advertisement

ಪುರಸಭೆಯ 23 ವಾರ್ಡುಗಳ ಚುನಾವಣೆ ಯಲ್ಲಿ ಒಟ್ಟು 78 ನಾಮ ಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರಗಳ ಪರಿಶೀಲನೆಯ ವೇಳೆ 5 ನಾಮ ಪತ್ರಗಳು ತಿರಸ್ಕೃತಗೊಂಡಿದ್ದವು. 73 ನಾಮಪತ್ರಗಳುಕ್ರಮಬದ್ಧವಾಗಿ ದ್ದವು. ಶನಿವಾರ 5 ಮಂದಿ ಪಕ್ಷೇತರ ಅಭ್ಯರ್ಥಿಗಳು ತಮ್ಮ ನಾಮಪತ್ರಹಿಂಪಡೆದಿದ್ದು, 68 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.

ಹಲಸಿನಮರದ ದೊಡ್ಡಿ 2ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಆರ್‌.ಲಲಿತಾ, ಕೇತಗಾನ ಹಳ್ಳಿ 7ನೇ ವಾರ್ಡಿನಿಂದ ರುದ್ರೇಶ್‌, 10ನೇ ವಾರ್ಡಿನಿಂದ ಅರ್ಜಿ ಹಾಕಿದ್ದ ಬಿ.ಎನ್‌.ರಂಜನಿ, 11ನೇವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಕೆ.ಪೆದ್ದಾಂ ರೆಡ್ಡಿ ಹಾಗೂ 23ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಎಚ್‌.ಸಿ.ತ್ಯಾಗರಾಜು ಅವರುಗಳು ನಾಮಪತ್ರ ವಾಪಸ್‌ ಪಡೆದುಕೊಂಡಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳ ವಿವರ:

ಪುರಸಭೆಯ 1ನೇ ವಾರ್ಡ್‌ನಿಂದ ಎನ್‌. ಕುಮಾರ್‌- ಕಾಂಗ್ರೆಸ್‌, ಡಾ.ಭರತ್‌ ಕೆಂಪಣ್ಣ-ಜೆಡಿಎಸ್‌, ಸಿ.ಕುಮಾರ್‌-ಬಿಜೆಪಿ, ನಿಖೀಲ್‌ಸಜ್ಜೆಲಿಂಗಯ್ಯ-ಪಕ್ಷೇತರ2ನೇ ವಾರ್ಡಿನಲ್ಲಿ ಚಂದ್ರಕಲಾ ನಾಗೇಶ್‌ -ಕಾಂಗ್ರೆಸ್‌, ಮನು.ಸಿಆರ್‌-ಜೆಡಿಎಸ್‌. 3ನೇ ವಾರ್ಡಿನಿಂದ ಕವಿತಾ ಜೆ.ಕುಮಾರ್‌-ಕಾಂಗ್ರೆಸ್‌, ಮಂಜುಳ-ಜೆಡಿಎಸ್‌. 4ನೇ ವಾರ್ಡಿನಲ್ಲಿ ಬಾಲಕೃಷ್ಣ.ಕೆ.ಪಿ-ಕಾಂಗ್ರೆಸ್‌, ರಮೇಶ್‌ ಕೆ.ಎಸ್‌-ಜೆಡಿಎಸ್‌, ಬಿ.ರವಿ-ಬಿಜೆಪಿ. 5ನೇ ವಾರ್ಡಿನಿಂದ ದಿವ್ಯಾ ರವಿಕುಮಾರ್‌ -ಕಾಂಗ್ರೆಸ್‌, ಲಲಿತ ನರಸಿಂಹಯ್ಯ-ಜೆಡಿಎಸ್‌, ನೇತ್ರಾವತಿ.ಆರ್‌-ಬಿಜೆಪಿ, ಪದ್ಮ.ಕೆ.ಎಸ್‌-ಪಕ್ಷೇತರ. 6ನೇ ವಾರ್ಡ್‌ನಿಂದ ಹೊಂಬಯ್ಯ-ಕಾಂಗ್ರೆಸ್‌,ರವಿಕುಮಾರ್‌-ಜೆಡಿಎಸ್‌, ಎಂ.ಎನ್‌.ದಿನೇಶ್‌ -ಬಿಜೆಪಿ. ವಾರ್ಡ್‌ ಸಂಖ್ಯೆ 7ರಿಂದ ಅನಂತ-ಕಾಂಗ್ರೆಸ್‌, ಸೋಮಶೇಖರ್‌-ಜೆಡಿಎಸ್‌, ರಾಮಚಂದ್ರೇಗೌಡ-ಬಿಜೆಪಿ. 8ನೇ ವಾರ್ಡಿನಿಂದ ವೈ.ರಮೇಶ್‌-ಕಾಂಗ್ರೆಸ್‌, ದೇವರಾಜು.ಆರ್‌-ಜೆಡಿಎಸ್‌, ಬಿ.ಎನ್‌ .ಪ್ರಸನ್ನಕುಮಾರ್‌-ಬಿಜೆಪಿ, ನಾಗೇಂದ್ರ-ಆಮ್‌ಆದ್ಮಿ ಪಾರ್ಟಿ. ವಾರ್ಡ್‌ ನಂಬರ್‌ 9ರಿಂದ ಬಿ.ಆರ್‌.ಮಂಜುನಾಥ್‌-ಕಾಂಗ್ರೆಸ್‌, ಬಿ.ಜಿ.ಲೋಹಿತ್‌ ಕುಮಾರ್‌-ಜೆಡಿಎಸ್‌, ರೇವಣ್ಣ.ಬಿ-ಬಿಜೆಪಿ,ಶಿವಣ್ಣ-ಆಮ್‌ ಆದ್ಮಿ ಪಾರ್ಟಿ. ವಾರ್ಡ್‌ ಸಂಖ್ಯೆ 10ರಿಂದ ಟಿ.ಎನ್‌.ರಜನಿಶಿವಕುಮಾರ್‌-ಕಾಂಗ್ರೆಸ್‌, ಆಯಿಷಾ ಖಲೀಲ್‌ -ಜೆಡಿಎಸ್‌, ಸವಿತ.ಬಿ-ಬಿಜೆಪಿ.11ನೇ ವಾರ್ಡಿನಿಂದ ಕೆ.ಎಚ್‌.ವೆಂಕಟೇಶಯ್ಯ-ಕಾಂಗ್ರೆಸ್‌, ಎಂ.ಎನ್‌.ಹರಿಪ್ರಸಾದ್‌-ಜೆಡಿಎಸ್‌, ಲೋಕೇಶ್‌.ಟಿ.ಕೆ-ಬಿಜೆಪಿ,ಜೆ.ಜಗನ್ನಾಥ್‌-ಪಕ್ಷೇತರ. 12ನೇ ವಾರ್ಡ್‌ನಿಂದ ಟಿ.ಜಗದೀಶ್‌-ಕಾಂಗ್ರೆಸ್‌, ರಾಕೇಶ್‌.ಪಿಸ್ವಾಮಿ-ಜೆಡಿಎಸ್‌, ಶಿವಣ್ಣ-ಬಿಜೆಪಿ, ಬಿ.ಎನ್‌.ನಾಗರಾಜು-ಆಮ್‌ಆದ್ಮಿ ಪಾರ್ಟಿ, ಶಿವಣ್ಣ-ಎಸ್‌. ಎನ್‌-ಪಕ್ಷೇತರ. 13ನೇ ವಾರ್ಡಿನಿಂದಸಿ.ಉಮೇಶ್‌-ಕಾಂಗ್ರೆಸ್‌, ಪುಟ್ಟಮಾದಯ್ಯ.ಬಿ.ಎಂ-ಜೆಡಿಎಸ್‌,ರೇಣುಕಯ್ಯ.ಎಚ್‌.ವಿ-ಬಿಜೆಪಿ.14ನೇ ವಾರ್ಡಿನಿಂದ ನವೀನ್‌ ಕುಮಾರ್‌. ಎಂ-ಕಾಂಗ್ರೆಸ್‌, ಬಿ.ಪಿ.ನಾಗರತ್ನಮ್ಮ-ಜೆಡಿಎಸ್‌.ವಾರ್ಡ್‌ ನಂಬರ್‌ 15 ರಿಂದಕೆ.ಸಿ.ಬಿಂದಿಯಾ-ಕಾಂಗ್ರೆಸ್‌, ಬಿ.ಎನ್‌. ತೇಜಸ್ವಿನಿ-ಜೆಡಿಎಸ್‌, ವಾರ್ಡ್‌ ಸಂಖ್ಯೆ 16ರಿಂದಮಹಿಮಾ(ಪದ್ಮ)-ಕಾಂಗ್ರೆಸ್‌, ಗಾಯಿತ್ರಿ.ವೈ-ಜೆಡಿಎಸ್‌, ಬಿ.ಎನ್‌.ಉಷಾ-ಪಕ್ಷೇತರ, ವೀಣಾ ನಾಗರಾಜು-ಪಕ್ಷೇತರ,ವಾರ್ಡ್‌ ನಂಬರ್‌ 17ರಿಂದ ಕೆ.ಶ್ರೀನಿವಾಸ- ಕಾಂಗ್ರೆಸ್‌, ರಾಮಕೃಷ್ಣಯ್ಯ-ಜೆಡಿಎಸ್‌, 18ನೇವಾರ್ಡ್‌ನಿಂದ ಭಾಗ್ಯಮ್ಮ-ಕಾಂಗ್ರೆಸ್‌, ಸರಸ್ವತಮ್ಮ-ಜೆಡಿಎಸ್‌,19ನೇ ವಾರ್ಡಿನಿಂದ ಪದ್ಮಾವತಿ-ಕಾಂಗ್ರೆಸ್‌, ರಮ್ಯ.ಎಂ.ಜಿ-ಜೆಡಿಎಸ್‌, 20ನೇ ವಾರ್ಡ್‌ನಿಂದ ವಿಜಯಲಕ್ಷ್ಮೀ-ಕಾಂಗ್ರೆಸ್‌, ಎಲ್ಲಮ್ಮ-ಜೆಡಿಎಸ್‌, 21ನೇ ವಾರ್ಡಿನಿಂದ ಬಿ.ರಾಮಚಂದ್ರಯ್ಯ-ಕಾಂಗ್ರೆಸ್‌, ಎನ್‌.ಶ್ರೀಧರ್‌-ಜೆಡಿಎಸ್‌,ಸಿದ್ಧರಾಜು-ಬಿಜೆಪಿ,22ನೇ ವಾರ್ಡ್‌ನಿಂದ ಮಹಾಲಕ್ಷ್ಮೀ.ಎಂ.ಜೆ-ಕಾಂಗ್ರೆಸ್‌, ಭಾನುಪ್ರಿಯ ಎಚ್‌.ಆರ್‌-ಜೆಡಿಎಸ್‌, 23ನೇ ವಾರ್ಡ್‌ನಿಂದ ವೆಂಕಟಾಚಲಯ್ಯ-ಕಾಂಗ್ರೆಸ್‌,ಎಚ್‌.ನಾಗರಾಜು- ಜೆಡಿಎಸ್‌, ಅರ್ಜುನ್‌.ಎಚ್‌. ಎಸ್‌-ಪಕ್ಷೇತರ

Advertisement

 

Advertisement

Udayavani is now on Telegram. Click here to join our channel and stay updated with the latest news.

Next