Advertisement

ಕೊಟ್ಟಿಗೆಹಾರ: ಬಿಡಾಡಿ ದನಗಳ ಹಾವಳಿ ;ಬಿಡಾಡಿ ದನಗಳ ಕಡಿವಾಣಕ್ಕೆ ಸಾರ್ವಜನಿಕರ ಒತ್ತಾಯ

03:16 PM Feb 16, 2022 | Team Udayavani |

ಕೊಟ್ಟಿಗೆಹಾರ: ವಿಲ್ಲುಪುರಂ-ಮಂಗಳೂರು ರಾಷ್ಟಿçಯ ಹೆದ್ದಾರಿಯ ಕೊಟ್ಟಿಗೆಹಾರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ವರ್ತಕರು ಕಿರಿಕಿರಿ ಅನುಭವಿಸುವಂತಾಗಿದೆ.

Advertisement

ಇಲ್ಲಿನ ರಸ್ತೆಯಲ್ಲಿ 30ಕ್ಕೂ ಅಧಿಕ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಅತಿ ಹೆಚ್ಚು ಬಿಡಾಡಿ ದನಗಳು ಮಾಲೀಕರಿದ್ದರೂ ಅವುಗಳನ್ನು ಮೇಯಿಸಲು ಹೊಲಗಳಿಗೆ ಬಿಡದೇ ಅವುಗಳು ರಸ್ರೆ, ಬಸ್ ನಿಲ್ದಾಣ, ಅಂಗಡಿ ಬಾಗಿಲುಗಳ ಮುಂದೆ ಮಲಗಿ ಆಶ್ರಯ ಪಡೆಯುತ್ತಿವೆ. ಅಂಗಡಿ, ಬಸ್ ನಿಲ್ದಾಣದಲ್ಲಿ ಮಲಗಿ ಸಗಣಿ ಹಾಕಿ ಗಂಜಲವನ್ನು ಹಾಕಿ ಇಡೀ ಸ್ಥಳವನ್ನೇ ಕಲುಷಿತಗೊಳಿಸುತ್ತಿವೆ.

ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಂತೂ ದನಗಳ ಗಂಜಲದಿಂದ ಬಸ್ ನಿಲ್ದಾಣ ಗಲೀಜಾಗಿದೆ. ಅಂಗಡಿ,ಮುಗ್ಗಟ್ಟುಗಳ ವರ್ತಕರಿಗೆ ಬೆಳಿಗ್ಗೆ ಸಗಣಿ, ಗಂಜಲ ಎತ್ತಿ ಸ್ವಚ್ಚಗೊಳಿಸುವುದೇ ಒಂದು ಕಾಯಕವಾಗಿದೆ. ಅಲ್ಲದೇ ವಾಹನಗಳು ವೇಗವಾಗಿ ಸಂಚಾರಿಸುವ ವೇಳೆ ರಸ್ತೆಯಲ್ಲಿ ಅತ್ತಿತ್ತ ಓಡಾಡಿ ಬೈಕು,ಕಾರು,ಬಸ್ಸುಗಳ ಮುಂದೆ ಬಂದು ಅಪಘಾತಗಳಿಗೂ ಎಡೆಮಾಡಿಕೊಡುತ್ತಿವೆ, ದ್ವಿಚಕ್ರ ಸವಾರರಂತೂ ಜೀವವನ್ನು ಕೈಯಲ್ಲೇ ಇಟ್ಟು ವಾಹನವನ್ನು ಚಲಾಯಿಸಬೇಕಿದೆ. ರಸ್ತೆಯಲ್ಲಿ ಓಡಾಡುವ ಬಿಡಾಡಿ ದನಗಳಿಗೆ ಪಶು ಇಲಾಖೆ ವತಿಯಿಂದ ವಿಮೆ ಮಾಡಿ ಕಿವಿಗೆ ಗುರುತು ಪಟ್ಟಿ ಕೂಡ ಹಾಕಿದ್ದು ಆ ಕಿವಿ ಪಟ್ಟಿಗಳ ಮೂಲಕ ಬಿಡಾಡಿ ದನಗಳ ವಿಳಾಸ ಪತ್ತೆ ಹಚ್ಚಿ ಸಂಬAಧಿಸಿದವರಿಗೆ ಎಚ್ಚರಿಕೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.

ಪ್ರತಿನಿತ್ಯ ಸುಮಾರು ಬಿಡಾಡಿ ದನಗಳು ಕೊಟ್ಟಿಗೆಹಾರ ಪೇಟೆಯ ರಸ್ತೆ ಮಧ್ಯದಲ್ಲಿ ಮಲಗುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬಿಡಾಡಿ ದನಗಳ ಹಾವಳಿಗೆ ಕಡೀವಾಣ ಹಾಕಬೇಕುಸಂಜಯ್ ಗೌಡ ಕೊಟ್ಟಿಗೆಹಾರ, ಗ್ರಾಮಸ್ಥ,

Advertisement

Udayavani is now on Telegram. Click here to join our channel and stay updated with the latest news.

Next