Advertisement

ಬಿಡಾಡಿ ದನಗಳ ಹಾವಳಿ ತಡೆಗೆ ಆಗ್ರಹಿಸಿ ಮನವಿ

02:51 PM Dec 18, 2019 | Suhan S |

ಮುಂಡಗೋಡ: ಪಟ್ಟಣದ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ತಪ್ಪಿಸುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ರಾಮಸೇನೆಯವರು ಪಪಂ ಮುಖ್ಯಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣದ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗುತ್ತಿದ್ದು ರಾತ್ರಿಯಲ್ಲಿ ರಸ್ತೆಗಳ ಮೇಲೆ ಮಲಗುತ್ತವೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಾರೆ ಹಾಗೂ ವೇಗವಾಗಿ ಬರುವ ವಾಹನಗಳು ದನಕರುಗಳಿಗೆ ಡಿಕ್ಕಿ ಹೊಡೆದು ದನಕರುಗಳು ಸಾಯುತ್ತಿವೆ ಮತ್ತೆ ಕೆಲವು ಗಾಯಗೊಳ್ಳುತ್ತಿವೆ. ಆದ್ದರಿಂದ ಪಪಂದವರು ಕೂಡಲೆ ಪಟ್ಟಣದಲ್ಲಿರುವ ಬಿಡಾಡಿ ದನಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ಪ್ರಕಾಶ ಬಡಿಗೇರ, ರಾಮಸೇನೆ ಅಧ್ಯಕ್ಷ ಷಣ್ಮುಖ ಕೋಳುರ, ಅಯ್ಯಪ್ಪ ಭಜಂತ್ರಿ, ಭರತ ಹದಳಗಿ, ರಾಘವೇಂದ್ರ ಶಿರಾಲಿ, ವಿಶ್ವನಾಥ ನಾಯರ, ಭಗವಂತ ಗುಡಕರ, ಗಣೇಶ ಗಾಣಿಗೇರ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next