ಹೊಸದಿಲ್ಲಿ: ಕಳೆದ ವರ್ಷದ ಸಂಸತ್ತಿನ ಹೊಗೆ ಬಾಂಬ್ ಪ್ರಕರಣದ ಪ್ರಮುಖ ಆರೋಪಿ, ಕರ್ನಾಟಕದ ಡಿ. ಮನೋರಂಜನ್ ಕ್ಯೂಬಾದ ಕ್ರಾಂತಿಕಾರಿ ಚೆ ಗುವೇರಾ ಅವರಿಂದ ಪ್ರಭಾವಿತ ನಾಗಿದ್ದ. ಲೋಕಸಭೆಯಲ್ಲಿ ಹೊಗೆ ಬಾಂಬ್ ಎಸೆಯುವ ನಿರ್ಧಾರವು 2018ರಲ್ಲಿ ಕಾಸೊವೊ ಸಂಸತ್ತಿನಲ್ಲಿ ವಿಪಕ್ಷ ನಾಯಕರು ಅಶ್ರುವಾಯು ಶೆಲ್ ಸಿಡಿಸಿದ ಘಟನೆಯಿಂದ ಪ್ರೇರಿತವಾಗಿದೆ ಎಂದು ದಿಲ್ಲಿ ಪೊಲೀಸರು ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ತಿಳಿಸಲಾಗಿದೆ.
ಕಾಸೊವೊ ಸಂಸತ್ ಘಟನೆಯ ರೀತಿಯಲ್ಲೇ ಲೋಕಸಭೆಯಲ್ಲಿ ಹೊಗೆ ಬಾಂಬ್ ಸ್ಫೋಟಿಸಿ ರಾಷ್ಟ್ರದ ಗಮನ ಸೆಳೆಯುವ ಮತ್ತು ಪ್ರಚಾರ ಪಡೆಯುವ ಹುನ್ನಾರವನ್ನು ಡಿ.ಮನೋರಂಜನ್ ಮತ್ತು ಆತನ ಸಹಚರರು ನಡೆಸಿದ್ದರು.
ಈ ಆರೋಪಿಗಳಿಗೆ ಯಾವುದೇ ಸಂಘಟನೆಯ ಬೆಂಬಲ ಇರುವುದು ಅಥವಾ ಸಂಸತ್ ದಾಳಿ ನಡೆಸುವ ಯಾವುದೇ ಬೃಹತ್ ಸಂಚಿನ ಭಾಗವಾಗಿದ್ದಿರುವುದು ತನಿಖೆ ವೇಳೆ ಪತ್ತೆಯಾಗಿಲ್ಲ. ಲೋಕಸಭೆಯಲ್ಲಿ ಹೊಗೆ ಬಾಂಬ್ ಎಸೆದ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ಅವರ ಬಳಿ ಯಾವುದೇ ಯೋಜನೆಗಳು ಇರಲಿಲ್ಲ. ಹಾಗಿದ್ದೂ ಈ ಘಟನೆಯ ಎಲ್ಲ ಆರೋಪಿಗಳ ವಿರುದ್ಧ ಯುಎಪಿಎ ಅಡಿ ಕೇಸ್ ದಾಖಲಿಸಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಲಡಾಖ್ ಡೈರೀಸ್ ಬರೆಯುತ್ತಿದ್ದ: ಈ ಗುಂಪಿಗೆ ಯಾವುದೇ ವಿದೇಶಗಳ ಸಂಪರ್ಕ ಇರುವುದು ಇದುವರೆಗೂ ಸಾಬೀತಾಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದ ಗುಂಪೊಂದು, ರಾಷ್ಟ್ರದ ಗಮನ ಸೆಳೆದು ಪ್ರಚಾರ ಕ್ಕಾಗಿ ನಡೆಸಿದ ಕೃತ್ಯವಾಗಿದೆ. ಹೀಗೆ ಮಾಡುವು ದರಿಂದ, ಸರ್ಕಾರ ಬೀಳುವ ಮಟ್ಟಿಗೆ ಪರಿಣಾ ಮ ಬೀರಬಹುದು ಎಂದು ಅಂದಾಜಿಸಿದ್ದರು. ಚೆ ಗುವೆರಾರ ಮೋಟರ್‌ಸೈಕಲ್ ಡೈರೀಸ್ ರೀತಿಯಲ್ಲೇ ಆರೋಪಿ ಮನೋರಂಜನ್ ಲಡಾಖ್ ಡೈರೀಸ್ ಬರೆಯುತ್ತಿದ್ದ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಆರೋಪಪಟ್ಟಿಯಲ್ಲಿ ಏನಿದೆ?
-ಹೊಗೆ ಬಾಂಬ್ ಆರೋಪಿಗಳಿಗೆ ವಿದೇಶ ಸಂಪರ್ಕ ಪತ್ತೆಯಾಗಿಲ್ಲ
– ದೇಶದ ಗಮನ ಸೆಳೆಯುವುದೇ ಇವರ ಉದ್ದೇಶವಾಗಿತ್ತು
– ಚೆ ಗುವೆರಾ ಮೋಟಾರ್‌ಸೈಕಲ್ ಡೈರೀಸ್ ರೀತಿ ಮನೋರಂಜನ್ ಲಡಾಖ್ ಡೈರೀಸ್ ಬರೆಯುತ್ತಿದ್ದ
– ಈತನ ನಾಯಕತ್ವಕ್ಕೆ ಉಳಿದ ಆರೋಪಿಗಳೂ ಸೈ ಎಂದಿದ್ದರು