ನವದೆಹಲಿ: ವಿಜ್ಞಾನ ಮತ್ತು ಮುಂದುವರಿದ ತಂತ್ರಜ್ಞಾನದಿಂದಾಗಿ ನಮ್ಮ ಬದುಕನ್ನು ಸಾಕಷ್ಟು ಸುಲಭಗೊಳಿಸುವಲ್ಲಿ ಸಹಕಾರಿಯಾಗಿದೆ. ವಿಶಿಷ್ಟವಾದ ವಿಜ್ಞಾನದ ಪ್ರಯೋಗಗಳು ಮತ್ತು ಹೊಸ, ಹೊಸ ಸಂಶೋಧನೆಗಳ ಮೂಲಕ ಅದ್ಭುತ ಕೊಡುಗೆಗಳು ದೊರೆಯುತ್ತಿರುತ್ತದೆ.
ಇದನ್ನೂ ಓದಿ:ಟಿಕೆಟ್ ಸಿಕ್ಕಾಗ ಪಟಾಕಿ ಹೊಡೆದವರು ಅಪ್ಪಿತಪ್ಪಿ ಜಯ ಗಳಿಸಿದರೆ ಬಾಂಬ್ ಬೀಳಬಹುದು: ಸೊರಕೆ
ಇತ್ತೀಚೆಗೆ ಮಿಸ್ಟರ್ ಕ್ಯೂ ಹೆಸರಿನ ಯೂಟ್ಯೂಬರ್ ಶೇರ್ ಮಾಡಿರುವ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದು ಸುಳ್ಳಲ್ಲ. ಈ ಯುವಕ ತಯಾರಿಸಿರುವ ಆಯತಾಕಾರದ(Square) ಚಕ್ರವನ್ನೊಳಗೊಂಡಿರುವ ಸೈಕಲ್ ವಿಡಿಯೋ ಇದೀಗ ವೈರಲ್ ಆಗಿದೆ.
ಇದು ಸಾಮಾನ್ಯ ಸೈಕಲ್ ನಂತೆ ಇದ್ದರೂ ಕೂಡಾ, ಒಂದು ಬದಲಾವಣೆಯೊಂದಿಗೆ ವಿಶಿಷ್ಟ ಕಲ್ಪನೆಯೊಂದಿಗೆ ತಯಾರಿಸಲಾಗಿದೆ. ಈ ಪರಿಕಲ್ಪನೆ ನೂತನವಾಗಿದ್ದು, ಆಯತಾಕಾರದ ಸೈಕಲ್ ನಲ್ಲಿ ಸುಲಭವಾಗಿ ಸವಾರಿ ಮಾಡಬಹುದಾಗಿದೆ.ಇದೊಂದು ಕುತೂಹಲಕಾರಿ ಆವಿಷ್ಕಾರಗಳಲ್ಲಿ ಒಂದಾಗಿದೆ ಎಂಬ ಕ್ಯಾಪ್ಶನ್ ನೀಡಲಾಗಿದೆ.
ಆಯತಾಕಾರದ ಸೈಕಲ್ ವಿಡಿಯೋವನ್ನು ಈಗಾಗಲೇ ಸುಮಾರು ಮೂರು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಹಲವಾರು ಮಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ. ಯೂಟ್ಯೂಬ್, ಟ್ವಿಟರ್, ಫೇಸ್ ಬುಕ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದು, ವಿಶಿಷ್ಟ ಕಲ್ಪನೆಯ ಸೈಕಲ್ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಸುಲಭವಾಗಿ ಸವಾರಿ ಮಾಡಲು ಇಷ್ಟೊಂದು ಕಷ್ಟಪಡಬೇಕಾಗಿದೆಯೇ ಎಂದು ಪ್ರಶ್ನಿಸಿದ್ದಾರೆ.