ಬೆಂಗಳೂರು: ಕಬ್ಬನ್ ಪಾರ್ಕ್ ಉದ್ಯಾನದ ಹಡ್ಸನ್ ವೃತ್ತದ ಬಳಿ ತೋಟಗಾರಿಕೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ನಿರ್ಮಿಸಿರುವ ಪ್ರವೇಶದ್ವಾರವನ್ನು ಬುಧವಾರ ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಉದ್ಘಾಟಿಸಿದರು.
ಇನ್ಮುಂದೆ ಕಬ್ಬನ್ ಪಾರ್ಕ್ ಉದ್ಯಾನದಲ್ಲಿ ಪ್ರವಾಸಿಗರಿಗಾಗಿ ಸೈಕಲ್ ಸೇವೆ ಆರಂಭವಾಗಿದೆ. ಪ್ರವಾಸಿಗರು ಮುಂಗಡ ಶುಲ್ಕ 500 ರೂ. ಮತ್ತು ಅಗತ್ಯ ದಾಖಲೆ ನೀಡಿ ಸೈಕಲ್ ಅನ್ನು ಬಾಡಿಗೆ ಪಡೆದು ಉದ್ಯಾನ ಸುತ್ತಬಹುದು ಎಂದು ತಿಳಿಸಿದ್ದಾರೆ.
ಕಬ್ಬನ್ ಪಾರ್ಕ್ ಉದ್ಯಾನ ಸುತ್ತಲು ಸೈಕಲ್ ಬಾಡಿಗೆ ಪಡೆಯಬೇಕಾದರೆ 500 ರೂಪಾಯಿ ಭದ್ರತಾ ಠೇವಣಿ ನೀಡಬೇಕು. ಮೊದಲ ಮೂರು ಗಂಟೆ ಅವಧಿಗೆ 50 ರೂಪಾಯಿ ಹಾಗೂ 3ರಿಂದ 6ಗಂಟೆ ಅವಧಿಗೆ 100 ರೂಪಾಯಿ ಶುಲ್ಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವೇಶದ್ವಾರ ಉದ್ಘಾಟನಾ ಸಮಾರಂಭದಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.