Advertisement

ಭುವನೇಶ್ವರಿ ದೇವಿ ರಜತ ಮೂರ್ತಿ ಮೆರವಣಿಗೆಗೆ ಚಾಲನೆ

02:38 PM Oct 18, 2021 | Team Udayavani |

ಮಾನ್ವಿ: ಪಟ್ಟಣದ ಕಲ್ಮಠದ ಮುಕ್ತಾಗುಚ್ಚ ಬೃಹನ್ಮಠದಲ್ಲಿ 46ನೇ ವರ್ಷದ ದಸರಾ ಮಹೋತ್ಸವ ಅಂಗವಾಗಿ ನಡೆದ ಶ್ರೀದೇವಿ ಪುರಾಣದ ಮಹಾಮಂಗಲ ಕಾರ್ಯಕ್ರಮದ ಅಂಗವಾಗಿ ಭಾನುವಾರ ಬೆಳಗ್ಗೆ ಕಲ್ಮಠದ ಆವರಣದಲ್ಲಿ ಶ್ರೀ ಭುವನೇಶ್ವರಿ ಭವ್ಯವಾದ ರಜತ ಮೂರ್ತಿಯ ಮೆರವಣಿಗೆಗೆ ಕಲ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯರು ಚಾಲನೆ ನೀಡಿದರು.

Advertisement

ಶ್ರೀ ವಿರೂಪಾಕ್ಷ ಪಂಡಿತರಾಧ್ಯ ಶಿವಾಚಾರ್ಯರು ಸ್ವಾಮಿಗಳು, ಶ್ರೀ ಉಗರಗೋಳ ಶ್ರೀಗಳು, ಕಲ್ಯಾಣ ಮಠದ ಶ್ರೀ ಕಲ್ಯಾಣ ಸ್ವಾಮಿಗಳು, ನೀಲಗಲ್‌ ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರ ನೇತೃತ್ವದಲ್ಲಿ ಮೆರವಣಿಗೆಯು ನಗರದ ಬಸವ ವೃತ್ತ, ಪಂಪಾವೃತ್ತ, ಪ್ರವಾಸಿ ಮಂದಿರದ ವೃತ್ತದ ಮೂಲಕ ಸಾಗಿ ತುಂಗಭದ್ರಾ ಕಾಲುವೆಯಲ್ಲಿ ಗಂಗಾಪೂಜೆ ನೆರವೇರಿಸಿ ನಂತರ ನೂರಾರು ಸುಮಂಗಲೆಯರಿಂದ ಕಳಸ ಕುಂಭದೊಂದಿಗೆ ಬಿಚ್ಚಾಲಿ ಸಂಸ್ಥಾನ ಮಠದ ಗಜಲಕ್ಷ್ಮೀ ಮೇಲೆ ಬಾಲ ದೇವಿಯರ ಉತ್ಸವ ವಿವಿಧ ಜನಪದ ಕಲಾ ತಂಡಗಳೊಂದಿಗೆ ಸರ್ವಧರ್ಮ ಗುರುಗಳ ಭಾವಚಿತ್ರ, ಸ್ಥಬ್ಧಚಿತ್ರಗಳೊಂದಿಗೆ, ನಂದಿಧ್ವಜ ಕುಣಿತ, ಡೊಳ್ಳು, ಬ್ಯಾಂಡ್‌ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆಯೊಂದಿಗೆ ಪಟ್ಟಣದ ಮುಖ್ಯ ವೃತ್ತಗಳ ಮೂಲಕ ಸಾಗಿ ನಗರ ದೇವತೆ ಶ್ರೀ ಚೌಡೇಶ್ವರಿ ದೇವಿಗೆ ಗಂಗೆಯನ್ನು ತಂದ ಸುಮಂಗಲಿಯರಿಂದ ಅಭಿಷೇಕ ನಡೆಸಲಾಯಿತು.

ಉತ್ಸವದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕರಾದ ಬ್ಯಾಗವಾಟ ಬಸವನಗೌಡ, ಹಂಪಯ್ಯ ಸಾಹುಕಾರ, ಗಂಗಾಧರ ನಾಯಕ, ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಪುರಸಭೆ ಉಪಾಧ್ಯಕ್ಷ ಶುಕುಮುನಿ ಹಾಗೂ ವಿವಿಧ ಮಠಾಧೀಶರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next