ನವ ದೆಹಲಿ : ವಾಹನ ಸಂಚರಿಸುವಾಗ ಜನರು ನ್ಯಾವಿಗೇಶನ್ ಆಪ್ ಬಳಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಇಂತಹ ಜನರಿಗಾಗಿ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದೆ. ಇದಕ್ಕಾಗಿ ಶೀಘ್ರದಲ್ಲಿಯೇ ನಿಮಗೆ ಮೇಡ್ ಇನ್ ಇಂಡಿಯಾ ಭುವನ್ ಆ್ಯಪ್ ನಿಮಗೆ ಸಿಗಲಿದೆ. ದೇಶ ಹಾಗೂ ಜಾಗತಿಕಮಟ್ಟದಲ್ಲಿ ತನ್ನದೇ ಆದ ವಿಶೇಷ ಗುರುತನ್ನು ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organization) ಈ ಆ್ಯಪ್ ನ ಅಭಿವೃದ್ದಿ ಕೆಲಸವನ್ನು ಆರಂಭಿಸಿದೆ. ಇದಕ್ಕಾಗಿ ಸಂಸ್ಥೆ MapmyIndia(ಮ್ಯಾಪ್ ಮೈ ಇಂಡಿಯಾ) ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಈ ಎರಡು ಸಂಸ್ಥೆಗಳು ಸೇರಿ ಸ್ವದೇಶಿ ಮ್ಯಾಪಿಂಗ್ ಸೊಲುಶನ್ ಗಳಾಗಿರುವ VEDAS, MOSDAC ಹಾಗೂ ಭುವನ್ ಗೆ ಬಲ ತುಂಬಲಿವೆ.
ಓದಿ : ಶ್ರೀರಾಮಮಂದಿರ ನಿರ್ಮಾಣ ಭಾವನಾತ್ಮಕ ವಿಚಾರ: ಕೇಂದ್ರ ಸಚಿವ ಸದಾನಂದ ಗೌಡ
ಇಸ್ರೋ “ಭುವನ್” V/s ಗೂಗಲ್ ಮ್ಯಾಪ್…!?
ಎರಡು ಸಂಸ್ಥೆಗಳು ಜತೆಗೂಡಿ ಇಂಡಿಯಾ ಮೇಡ್ ಪೋರ್ಟಲ್ ಹಾಗೂ geospatial services(ಜಿಯೋಸ್ಪೇಷಿಯಲ್ ಸೇವೆಗಳು) ಆರಂಭಿಸಲಿವೆ. ಆತ್ಮ ನಿರ್ಭರ ಭಾರತ ಅಭಿಯಾನದ ಅಡಿ ಈ ಹೆಜ್ಜೆ ಇಡಲಾಗುತ್ತಿದೆ. ಗೂಗಲ್ ಮ್ಯಾಪ್ ಮಾದರಿಯಲ್ಲೇ ನಿಮಗೆ ಭಾರತದಲ್ಲಿ ತಯಾರಾದ ಆಪ್ ಸಿಗಲಿದೆ ಎಂದು ಮ್ಯಾಪ್ ಮೈ ಇಂಡಿಯಾ (MapmyIndia) ಸಂಸ್ಥೆಯ ಸಿ ಇ ಒ ರೋಹನ್ ವರ್ಮಾ ಹೇಳಿಕೆ ನೀಡಿದ್ದಾರೆ. ಎನ್ನುವಲ್ಲಿಗೆ ಭಾರತ ಸಂಪೂರ್ಣ ಡಿಜಿಟಲೈಸೇಶನ್ ಹಾಗೂ ಸ್ವದೇಶಿ ಬಳಕೆಯತ್ತ ಮುಖ ಮಾಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಡಿಪಾರ್ಟ್ಮೆಂಟ್ ಆಫ್ ಸ್ಪೇಸ್ ಅಡಿ ಬರುವ ಇಸ್ರೋ, ಸಿಇ ಇನ್ಫೋ ಸಿಸ್ಟಂ ಪ್ರೈವೆಟ್ ಲಿಮಿಟೆಡ್ ಜೊತೆಗೆ ಒಡಂಬಡಿಕೆಗೆ ಸಹಿ ಹಾಕಿದೆ. ಸಿಇ ಇನ್ಫೋ ಸಿಸ್ಟಂ ಪ್ರೈವೆಟ್ ಲಿಮಿಟೆಡ್ ಕಂಪನಿ ಮ್ಯಾಪ್ ಮೈ ಇಂಡಿಯಾ (MapmyIndia) ವನ್ನು ನಿಯಂತ್ರಿಸುತ್ತದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಓದಿ : ‘One Rupee Clinic’ ಡಾ. ರಾಮ್ ಚಂದಾನಿ ಅವರ ಹೊಸ ಪ್ರಯತ್ನ..!
ಇತ್ತೀಚೆಗೆ ಬಳಕೆಗೆ ಬಂದ “ಕೂ ಆ್ಯಪ್” ಕೂಡ ತೀವ್ರ ಪೈಪೋಟಿ ನೀಡಲು ಇದೇ ರೀತಿಯ ಪ್ರಯೋಗ ನಡೆಸುತ್ತಿದೆ. ಸ್ವದೇಶಿ ಕೂ ಆ್ಯಪ್, ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಆಪ್ ಇನ್ನೋವೇಶನ್ ಚಾಲೆಂಜ್ (Aatmanirbhar App Invotaion Challenge) ಗೆದ್ದಿದೆ. ಇದರ ಜನಪ್ರಿಯತೆಯು ತುಂಬಾ ಬೆಳೆದಿದ್ದು, ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಯೂ ಕೂಡ ಖುದ್ದು ಪ್ರಧಾನಿಗಳೇ ಇದನ್ನು ಶ್ಲಾಘಿಸಿದ್ದಾರೆ. ಇದರ ನಂತರ ಕೇಂದ್ರ ಸಚಿವ ಪ್ರಕಾಶ್ ಜಾವಡ್ಕೇರ್, ಕೇಂದ್ರ ಸಚಿವ ಪಿಯೂಷ್ ಗೋಯಲ್, ಸೇರಿದಂತೆ ದೇಶದ ಅನೇಕ ಸಚಿವರು ಮತ್ತು ಗಣ್ಯರು ‘ಕೂ ಆಪ್’ ಅನ್ನು ಬಳಸಲಾರಂಭಿಸಿದ್ದಾರೆ.
ಓದಿ : ಅಮೆರಿಕ,ಹಾಂಗ್ ಕಾಂಗ್ ಮಾರುಕಟ್ಟೆಗೆ ರಜೆ: 52.000 ಗಡಿ ದಾಟಿದ ಮುಂಬಯಿ ಷೇರುಪೇಟೆ ಸೂಚ್ಯಂಕ