Advertisement

Bhutan; ಹಸುರು ಅಡಿಕೆ ಆಮದಿಗೆ ಕೇಂದ್ರ ಸರಕಾರ ಸಮ್ಮತಿ

12:53 AM Sep 20, 2024 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರ ಭೂತಾನ್‌ನಿಂದ ಹಸುರು ಅಡಿಕೆ ಆಮದು ಮಾಡಲು ಅನುಮತಿ ನೀಡಿದೆ. ಜತೆಗೆ ಅದಕ್ಕೆ ಕನಿಷ್ಠ ಆಮದು ಸುಂಕ ಪಾವತಿ ಮಾಡುವ ಅಗತ್ಯವಿಲ್ಲವೆಂದೂ ತಿಳಿಸಿದೆ. ಅಸ್ಸಾಂನ ದಾರಂಗ, ಒಡಿಶಾದ ಹತಿಸಾರ್‌ ಮೂಲಕ ಆಮದು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿದೇಶ ವ್ಯಾಪಾರ ಮಹಾನಿರ್ದೇಶನಾಲಯ (DGFT) ತಿಳಿಸಿದೆ.

Advertisement

ಈಗ ಇರುವ ಹೆಚ್ಚುವರಿ ಸ್ಥಳವಲ್ಲದೆ ಭೂತಾನ್‌ ಮೂಲಕವೂ ಕೂಡ 17,000 ಟನ್‌ ಹಸುರು ಅಡಿಕೆ ಆಮದು ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 2022ರ ಸೆಪ್ಟಂಬರ್‌ನಲ್ಲಿ ಕೇಂದ್ರ ಸರಕಾರ ಕನಿಷ್ಠ ಆಮದು ಬೆಲೆ ನಿಗದಿ ಮಾಡದೆ ಅಡಿಕೆ ಆಮದಿಗೆ ಅವಕಾಶ ಮಾಡಿಕೊಟ್ಟಿತ್ತು. 2017ರಲ್ಲಿ ದೇಶ­ದಲ್ಲಿನ ಬೆಳೆಗಾರರ ಹಿತ ಕಾಪಾಡಲು ಪ್ರತಿ ಕೆಜಿಗೆ 251 ರೂ. ಮೊತ್ತವನ್ನು ಕೇಂದ್ರ ನಿಗದಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next