Advertisement

ಭುಸಾರಂಗ ಶ್ರೀ ಮುಖವಾಡ ಬಯಲು

03:15 PM Jul 29, 2017 | |

ವಿಜಯಪುರ: ಬಸವಾದಿ ಶಿವ ಶರಣರ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ 30 ದಿನಗಳ ಹಿಂದಷ್ಟೇ ಅಭಿಮಾನದಿಂದ ಲಿಖೀತ ಪತ್ರ ಬರೆದಿದ್ದ ಸಿಂದಗಿ ಪ್ರಭುಸಾರಂಗದೇವ ಶ್ರೀಗಳಿಗೆ ತಿಂಗಳಲ್ಲಿಯೇ ಬಸವಣ್ಣ ಹಾಗೂ ಲಿಂಗಾಯತ ತತ್ವದ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದರೊಂದಿಗೆ
ಶ್ರೀಗಳ ಮುಖವಾಡ ಬಯಲಾಗಿದೆ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ಪ್ರತ್ಯುತ್ತರ ನೀಡಿದ್ದಾರೆ.

Advertisement

ಈ ಕುರಿತು ಲಿಖೀತ ಹೇಳಿಕೆ ಬಿಡುಗಡೆ ಮಾಡಿರುವ ಸಚಿವ ಎಂ.ಬಿ. ಪಾಟೀಲ, ಬಸವಾದಿ ಶರಣರ ತತ್ವಾದರ್ಶದ ಆಧಾರದ ಮೇಲೆ ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂದು ಹೇಳಿಕೆ ನೀಡಿದ್ದೇನೆ. ನಾನು ಬಸವಾದಿ ಶರಣರ ತತ್ವಗಳ ಆಧಾರದ ಮೇಲೆ ಅದನ್ನು ಒಪ್ಪುವ ವೀರಶೈವ ಸೇರಿದಂತೆ ಎಲ್ಲರನ್ನೂ ಒಳಗೊಂಡು ಈ ತತ್ವಗಳ ಆಧಾರದ ಮೇಲೆ ಲಿಂಗಾಯತ ಧರ್ಮ ಪ್ರತ್ಯೇಕವಾಗಬೇಕು ಎಂಬುದು ನನ್ನ ಸ್ಪಷ್ಟ ನಿಲುವು. ಇದರಲ್ಲಿ ಯಾವುದೇ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಪ್ರಭುಸಾರಂಗ ಶ್ರೀಗಳು ಜೂ. 26ರಂದು ಸ್ವಯಂ ನನಗೆ ಬಸವಾ  ಶರಣರ
ಕುರಿತು ಪ್ರೀತಿ, ಅಭಿಮಾನದ ಪತ್ರ ಬರೆದಿದ್ದರು. ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದೀರಿ, ನಿಮಗೆ ಅಭಿನಂದನೆಗಳು. ನಮ್ಮ ಇಡಿ ಜನಾಂಗ ನಿಮ್ಮನ್ನು ಶ್ಲಾಘಿಸುತ್ತದೆ ಎಂದು ಪ್ರಶಂಸಿಸಿದ್ದರು. ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಹಾಕುವುದು,
ಕೂಡಲಸಂಗಮ ಕ್ಷೇತ್ರದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಮುಂದಾಗಿರುವುದು ಅತ್ಯಂತ ಅಭಿಮಾನದ ಸಂಗತಿ ಎಂದು ಶ್ರೀಗಳು ಹೊಗಳಿದ್ದರು ಎಂದು ಶ್ರೀಗಳು ತಮಗೆ ಬರೆದಿದ್ದ ಪತ್ರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
 
ಕೇವಲ 30 ದಿನಗಳ ಹಿಂದೆ ಬಸವಾದಿ ಶರಣರ ಕುರಿತು ಹೊಂದಿದ್ದ ಅಭಿಮಾನ ಇದೀಗ ಇದ್ದಕ್ಕಿಂದಂತೆ ಬದಲಾಗಿದೆ. ಪರಿಣಾಮ ನನ್ನ ವಿರುದ್ಧ ಜು. 27ರಂದು ಬಹಳ ಕಟುವಾಗಿ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ. ಇದು ಶ್ರೀಗಳ ದ್ವಂಧನೀತಿ ತೋರಿದೆ. ಅಂತರಂಗದಲ್ಲಿ, ಪತ್ರದಲ್ಲಿ ಬಸವಣ್ಣ ಶ್ರೇಷ್ಠ ಎನ್ನುವ ಶ್ರೀಗಳು, ಬಹಿರಂಗದಲ್ಲಿ ಪತ್ರಿಕೆಗಳಿಗೆ ತದ್ವಿರುದ್ದ ಹೇಳಿಕೆ ನೀಡಿರುವುದು ಶ್ರೀಗಳ ಮುಖವಾಡ ಕಳಚಿಸಿದೆ ಎಂದು ತಿರುಗೇಟು ನೀಡಿದ್ದಾರೆ.

ಬಸವ ನಾಡಿನಲ್ಲೇ ಹುಟ್ಟಿರುವ ಪ್ರಭುಸಾರಂಗ ಶ್ರೀಗಳು ಮತ್ತು ನಾನು ಬಸವಣ್ಣನ ತವರಿನಲ್ಲೇ ಅವರ ತತ್ವಗಳಿಗೆ ಅಪಚಾರ ಆಗುವ ರೀತಿಯಲ್ಲಿ ಮಾತನಾಡುವ, ನಡೆದುಕೊಳ್ಳುವ ಯಾರೂ ಸಹ ಇಲ್ಲಿರಲು ಅರ್ಹರಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಕಟುವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next