Advertisement

Himachal ಬಂಡಾಯ-ಸರ್ಕಾರಕ್ಕೆ ಪತನ ಭೀತಿ- ಹೂಡಾ, ಡಿಕೆಶಿಗೆ ಬಿಕ್ಕಟ್ಟು ಶಮನ ಹೊಣೆಗಾರಿಕೆ

11:04 AM Feb 28, 2024 | Team Udayavani |

ನವದೆಹಲಿ: ರಾಜ್ಯಸಭೆ ಚುನಾವಣೆಯಲ್ಲಿ ಹಿಮಾಚಲಪ್ರದೇಶದ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಆರು ಶಾಸಕರು ಮತ್ತು ಮೂವರು ಪಕ್ಷೇತರರು ಬಿಜೆಪಿ ಪರ ಅಡ್ಡಮತದಾನ ಮಾಡಿದ ಪರಿಣಾಮ ಸರ್ಕಾರ ಪತನ ಭೀತಿ ಎದುರಿಸುತ್ತಿದ್ದು, ಬಂಡಾಯ ಶಾಸಕರು ಮುಖ್ಯಮಂತ್ರಿ ಬದಲಾವಣೆಗೆ ಪಟ್ಟು ಹಿಡಿದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Interview:ನಾವು ಹಿಂದೂಗಳಪರ ಎಂದು ಬೊಬ್ಬೆ ಹಾಕುವ ಬಿಜೆಪಿಯೇ ಹುಂಡಿಗೆ ಮೊದಲು ಕೈ ಹಾಕಿದ್ದು!

ಹಿಮಾಚಲ ಪ್ರದೇಶದ ಕಾಂಗ್ರೆಸ್‌ ಪಕ್ಷದ ಬಿಕ್ಕಟ್ಟು ಶಮನಕ್ಕಾಗಿ ಹಿರಿಯ ಕಾಂಗ್ರೆಸ್‌ ಮುಖಂಡರಾದ ಭೂಪೇಂದ್ರ ಸಿಂಗ್‌ ಹೂಡಾ ಮತ್ತು ಡಿಕೆ ಶಿವಕುಮಾರ್‌ ಅವರಿಗೆ ಹೊಣೆಗಾರಿಕೆ ನೀಡಿದ್ದು, ಇಬ್ಬರು ಹಿಮಾಚಲದತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿ ವಿವರಿಸಿದೆ.

ಜೀ ನ್ಯೂಸ್‌ ಮೂಲಗಳ ಪ್ರಕಾರ, ಹಿಮಾಚಲಪ್ರದೇಶ ಮುಖ್ಯಮಂತ್ರಿ ಸುಖ್‌ ವಿಂದರ್‌ ಸಿಂಗ್‌ ಸುಖು ವಿರುದ್ಧ ಹಲವಾರು ಶಾಸಕರು ಬಂಡಾಯ ಎದ್ದಿದ್ದು, ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿಪಕ್ಷ ಬಿಜೆಪಿ ಅಧಿಕಾರದ ಗದ್ದುಗೆ ಏರಲು ಮುಂದಾಗಿರುವುದಾಗಿ ತಿಳಿಸಿದೆ.

68 ಸದಸ್ಯಬಲದ ಹಿಮಾಚಲ ವಿಧಾನಸಭೆಯಲ್ಲಿ ಒಂಬತ್ತು ಶಾಸಕರು ಅಡ್ಡಮತದಾನ ಮಾಡಿದ ಪರಿಣಾಮ ಕಾಂಗ್ರೆಸ್‌ ಬಲ 34ಕ್ಕೆ ಕುಸಿಯಲಿದೆ. ವಿಧಾನಸಭೆಯಲ್ಲಿ ಬಹುಮತಕ್ಕೆ ಕಾಂಗ್ರೆಸ್‌ ಗೆ 35 ಸದಸ್ಯರ ಬೆಂಬಲ ಅಗತ್ಯವಿದೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡ ಅಭಿಷೇಕ್‌ ಮನು ಸಿಂಘ್ವಿ ವಿರುದ್ಧ ಕಾಂಗ್ರೆಸ್‌ ನ ಆರು ಶಾಸಕರು ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿ ಹರ್ಷ ಮಹಾಜನ್‌ ಜಯಗಳಿಸುವಂತಾಗಿತ್ತು.

Advertisement

ಏತನ್ಮಧ್ಯೆ 25ಶಾಸಕರನ್ನು ಹೊಂದಿರುವ ಬಿಜೆಪಿ, ಮೂವರು ಪಕ್ಷೇತರರ ಬೆಂಬಲ (ಆರು ಕಾಂಗ್ರೆಸ್‌ ಬಂಡಾಯ ಶಾಸಕರು ಸೇರಿ)ದೊಂದಿಗೆ ಹಿಮಾಚಲದಲ್ಲಿ ಹೊಸ ಸರ್ಕಾರ ರಚಿಸಲು ಕಸರತ್ತು ನಡೆಸಿದೆ. ಮತ್ತೊಂದೆಡೆ ಹಿಮಾಚಲ ಪ್ರದೇಶ ಮಾಜಿ ಸಿಎಂ, ಬಿಜೆಪಿ ಮುಖಂಡ ಜೈರಾಮ್‌ ಠಾಕೂರ್‌ ಬುಧವಾರ (ಫೆ.28) ಬೆಳಗ್ಗೆ ರಾಜ್ಯಪಾಲ ಶಿವಪ್ರತಾಪ್‌ ಶುಕ್ಲಾ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next