Advertisement

Udupi ಅಟ್ಲಾಂಟಾದಲ್ಲಿ ಶ್ರೀಕೃಷ್ಣ ಮಂದಿರಕ್ಕೆ ಭೂಮಿಪೂಜೆ

11:30 PM Nov 07, 2023 | Team Udayavani |

ಉಡುಪಿ: ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿಪ್ರಸಾರ ದೀಕ್ಷೆಯನ್ನು ಹೊಂದಿರುವ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕಾದ ಅಟ್ಲಾಂಟಾ ನಗರದಲ್ಲಿ ಭಕ್ತ ಜನರ ಸಹಕಾರದೊಂದಿಗೆ ಬೃಹತ್‌ ಶ್ರೀಕೃಷ್ಣ ಮಂದಿರ ನಿರ್ಮಾಣಕ್ಕಾಗಿ ಖರೀದಿಸಿರುವ 6 ಎಕ್ರೆ ಜಾಗದಲ್ಲಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು.

Advertisement

ಇಲ್ಲಿ ಶ್ರೀಕೃಷ್ಣನ ಬೃಹತ್‌ ಮಂದಿರ ನಿರ್ಮಾಣವಾಗಲಿದೆ. ಶ್ರೀಪಾದರು ಮುಂದಿನ ಶ್ರೀಕೃಷ್ಣನ ಪರ್ಯಾಯ ಮುಗಿಸಿ ಮರಳಿ ಬರುವಷ್ಟರಲ್ಲಿ ಶ್ರೀಕೃಷ್ಣ ಪ್ರತಿಷ್ಠೆಯ ಮೂಲಕ ಮಂದಿರದ ವಿದ್ಯುಕ್ತ ಉದ್ಘಾಟನೆಯ ಸಂಕಲ್ಪವನ್ನು ಇಲ್ಲಿನ ಭಕ್ತರು ಇರಿಸಿಕೊಂಡಿದ್ದಾರೆ.

ಸಂಕಲ್ಪಿತ ಶ್ರೀಕೃಷ್ಣ ಮಂದಿರದ ಗರ್ಭಗುಡಿಯ ಕೆಳಗಡೆ 700 ಶ್ಲೋಕಗಳನ್ನು ಕೆತ್ತಿಸಿದ ಇಟ್ಟಿಗೆಗಳನ್ನು ಭಕ್ತರ ಹೆಸರಿನಲ್ಲಿ ಇರಿಸಲಾಗುವುದು. ತನ್ಮೂಲಕ ಶ್ರೀಪಾದರ ಕೋಟಿಗೀತಾ ಲೇಖನ ಯೋಜನೆಯ ಸ್ಮಾರಕವಾಗಿ ಅಮೆರಿಕಾದಲ್ಲಿ ಈ ಮಂದಿರ ಮೂಡಿ ಬರಲಿದೆ.

ಶ್ರೀಪಾದರು ಅಮೆರಿಕಾದಲ್ಲಿ ಸ್ಥಾಪಿಸಿರುವ 11 ಮಠಗಳಲ್ಲಿ ಇದು ಆರನೇ ಶಾಖಾ ಮಠವಾಗಿದ್ದು ಇದೀಗ ಸಣ್ಣ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭೂಮಿ ಪೂಜೆಯ ವೈದಿಕ ಕಾರ್ಯಕ್ರಮಗಳನ್ನು ಉಡುಪಿಯ ಹೆರ್ಗ ವೇದವ್ಯಾಸ ಭಟ್‌ ನೆರವೇರಿಸಿದರು.

ಮಠದ ಪ್ರಧಾನ ಅರ್ಚಕ ಜಯ ಪ್ರಸಾದ್‌ ಅಮ್ಮಣ್ಣಾಯ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಯೋಜನೆಯ ವಿವರವನ್ನು ಪ್ರಧಾನ ಕಾರ್ಯದರ್ಶಿ ಪ್ರಸನ್ನಾಚಾರ್ಯ ನೀಡಿದರು.

Advertisement

ವಿ| ಕೇಶವ ರಾವ್‌ ತಡಿಪಾತ್ರಿ, ಬಾಲಕೃಷ್ಣ ಭಟ್‌, ಹರೀಶ್‌ ಭಟ್‌, ಅಜಯ್‌, ಮುರಳಿ, ಶ್ರೀಕಾಂತ್‌ ಹಾಗೂ ಭಕ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next