ಲಕ್ನೊ / ವಾರಣಾಸಿ : ದೇಶದ ದೈತ್ಯ ಕಂಪೆನಿ ರಿಲಯನ್ಸ್ ಇಂಡಸ್ಟ್ರಿಯ ಕಾರ್ಯ ನಿರ್ವಾಹಕ ನಿರ್ದೇಶಕಿ ನೀತಾ ಅಂಬಾನಿ ಅವರನ್ನು ಸಂದರ್ಶಕ ಉಪನ್ಯಾಸಕಿಯಾಗಿ ನೇಮಿಸಿಕೊಳ್ಳುವ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದ ಪ್ರಸ್ತಾಪ ಇದೀಗ ಪ್ರತಿಭಟನೆಗೆ ಕಾರಣವಾಗಿದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಉಪ ಕುಲಪತಿ ರಾಕೇಶ್ ಭಟ್ನಾಗರ್ ಅವರ ಮನೆಯ ಎದುರು ವಿಶ್ವವಿದ್ಯಾಲಯದ ಸುಮಾರು 40 ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮಾಡಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್, ನೀತಾ ಅಂಬಾನಿಯವರಿಗೆ ಅಂತಹ ಯಾವುದೇ ಆಹ್ವಾನ ಬಂದಿಲ್ಲ ಎಂದು ತಿಳಿಸಿದೆ.
ಓದಿ : ಉಪಚುನಾವಣೆ : ಲೋಕಸಭೆಗೆ ಜೆಡಿಎಸ್ ಡೌಟು: ವಿಧಾನಸಭೆ ಸ್ಪರ್ಧೆಗೆ ರೆಡಿ?
ಕಳೆದ ಶುಕ್ರವಾರದಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮಹಿಳಾ ಅಭಿವೃದ್ಧಿ ಕೇಂದ್ರ, ರಿಲಯನ್ಸ್ ಒಡತಿ ನೀತಾ ಅಂಬಾನಿಯವರನ್ನು ಸಂದರ್ಶಕ ಉಪನ್ಯಾಸಕಿಯಾನ್ನಾಗಿ ನೇಮಕ ಮಾಡಿಕೊಳ್ಳುವುದರ ಬಗ್ಗೆ ಪ್ರಸ್ತಾಪ ಮಾಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
ರಿಲಯನ್ಸ್ ಇಂಡಸ್ಟ್ರಿಯ ಕಾರ್ಯ ನಿರ್ವಾಹಕ ನಿರ್ದೆಶಕಿ ನೀತಾ ಅಂಬಾನಿಯವರನ್ನು ಬನಾರಸ್ ಹಿಂದೂ ವಿಶ್ವ ವಿದ್ಯಾಲಯ ಸಂದರ್ಶಕ ಉಪನ್ಯಾಸಕಿಯನ್ನಾಗಿ ನೇಮಿಸಿಕೊಳ್ಳಲು ಪ್ರಸ್ತಾಪವನ್ನು ನೀಡಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ. ಇದುವರೆಗೆ ಅಂತಹ ಯಾವುದೇ ಆಹ್ವಾನವನ್ನು ನೀತಾ ಅಂಬಾನಿಯವರು ಸ್ವೀಕರಿಸಿಲ್ಲ ಎಂದು ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ನ ವಕ್ತಾರ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ಐ ಗೆ ತಿಳಿಸಿದ್ದಾರೆ.
ಇನ್ನು, ನೀತಾ ಅಂಬಾನಿಯವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಮಹಿಳಾ ಅಬಿವೃದ್ಧಿ ಕೇಂದ್ರಕ್ಕೆ ಸಂದರ್ಶಕ ಉಪನ್ಯಾಸಕಿಯನ್ನಾಗಿ ನೇಮಕ ಮಾಡಿಕೊಳ್ಳುವುದರ ಬಗ್ಗೆ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿಗೆ ಪ್ರಸ್ತಾಪವನ್ನು ಸಲ್ಲಿಸಲಾಗಿದೆ. ನೀತಾ ಅಂಬಾನಿ ಅನುಭವಿ ಮಹಿಳಾ ಉದ್ಯಮಿ, ಅವರು ಸಂದರ್ಶಕ ಉಪನ್ಯಾಸಕಿಯಾಗಿ ಬಂದರೆ, ಪೂರ್ವಾಂಚಲ್ ನ ಮಹಿಳೆಯರು ಅವರ ಅನುಭವವನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಮಹಿಳಾ ಅಭಿವೃದ್ಧಿ ಕೇಂದ್ರದ ಸಮಿತಿಯ ಸಂಚಾಲಕಿ ನಿಧಿ ಶರ್ಮಾ ಪಿಟಿಐ ಸುದ್ದಿ ಸಂಸ್ಥೆಗೆ ನಿಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆದಾಗ್ಯೂ, ಈ ಚಿಂತನೆಯನ್ನು ವಿಶ್ವ ವಿದ್ಯಾಲಯದ ಕೆಲವು ವಿದ್ಯಾರ್ಥಿಗಳು ಆಕ್ಷೇಪಿಸಿದ್ದಾರೆ.
(
ಬಿಎಚ್‌ಯು ಪ್ರಾಧ್ಯಾಪಕರೊಬ್ಬರು ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿರುವ ದೃಶ್ಯ)
ನೀತಾ ಅಂಬಾನಿಯವರನ್ನು ಹೊರತಾಗಿ ಹಲವಾರು ಮಹಿಳೆಯರು ಭಾರತದಲ್ಲಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಿದ ಹಲವರಿದ್ದಾರೆ. ಅವರಲ್ಲಿ ಯಾರನ್ನಾದರೂ ಸಂದರ್ಶಕ ಉಪನ್ಯಾಸಕಿಯನ್ನಾಗಿ ನೇಮಕಮಾಡಿಕೊಳ್ಳಬಹುದು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶುಭಮ್ ತಿವಾರಿ ಪಿಟಿಐ ಗೆ ತಿಳಿಸಿದ್ದಾರೆ.
ಓದಿ : ಪರಿಸರ ಜಾಗೃತಿಗಾಗಿ ಕುಡ್ಲದ ಯುವಕನಿಂದ ಮಂಗಳೂರು To ಮಣಿಪುರದವರೆಗೆ ಸೈಕಲ್ ಪಯಣ