Advertisement

ಭ್ರಾಮರಿ ಯಕ್ಷನೃತ್ಯ ಕಲಾ ನಿಲಯ ದಹಿಸರ್‌:ವಾರ್ಷಿಕೋತ್ಸವ

03:33 PM Feb 19, 2019 | Team Udayavani |

ಮುಂಬಯಿ: ಸನಾತನ ಧರ್ಮಗಳು ಸ್ಥಿರಸ್ಥಾಯಿಯಾಗಲು ವೇದ ಪುರಾಣ ಮಹಾಕಾವ್ಯಗಳು ಸೂಕ್ಷ್ಮತೆಯನ್ನು ಅರಿಯಲು ಯಕ್ಷಗಾನ ಬಯಲಾಟ ಸಮರ್ಥ ಮಾಧ್ಯಮವಾಗಿದೆ. ಜ್ಞಾನದ ಪ್ರಥಮ ಪಾಠ ಶಾಲೆಯಾದ ಈ ಕ್ಷೇತ್ರವನ್ನು ಸಂರಕ್ಷಿಸಲು ಭಾÅಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೆಬಲ್‌ ಟ್ರಸ್ಟ್‌ನ ಎಲ್ಲಾ 9 ಶಾಖೆಗಳ ಸುಮಾರು 2500 ಮಂದಿ ಕಲಾವಿದರ ಯಕ್ಷಸೈನ್ಯ ಸಜ್ಜಾಗಿದೆ. ಇದು ಶಾಶ್ವತ ಭದ್ರಬುನಾದಿಗೆ ಅಡಿಪಾಯವಾಗಿದೆ ಎಂದು ಭ್ರಾಮರಿ ಯಕ್ಷನೃತ್ಯ ಕಲಾನಿಲಯ ಚಾರಿಟೇಬಲ್‌ ಟ್ರಸ್ಟ್‌ನ ಗೌರವಾಧ್ಯಕ್ಷ ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ ನುಡಿದರು.

Advertisement

ಫೆ. 16ರಂದು ಸಂಜೆ ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದಲ್ಲಿ ಭಾÅಮರಿ ಯಕ್ಷನೃತ್ಯ ಕಲಾ ನಿಲಯ ಚಾರಿಟೆಬಲ್‌ ಟ್ರಸ್ಟ್‌ ಇದರ ದಹಿಸರ್‌ ವಿಭಾಗದ 3ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮಕ್ಕಳು ಕಡಿಮೆ ಅಂಕ ಗಳಿಸುತ್ತಾರೆ ಎಂಬ ಭ್ರಮೆ ಹೆಚ್ಚಿನ ಪಾಲಕರಲ್ಲಿದೆ. ಆದರೆ ಭಾÅಮರಿ ಯಕ್ಷನೃತ್ಯ ನಿಲಯದಲ್ಲಿ ತರಬೇತಿ ಪಡೆದ ಮಕ್ಕಳು ಉತ್ತಮ ದರ್ಜೆಯಲ್ಲಿ ತೇರ್ಗಡೆ  ಹೊಂದಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಪುಟಾಣಿಗಳನ್ನು ಅವರ ಅಭಿರುಚಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಇದರಿಂದ ವಾತ್ಸಲ್ಯಭರಿತ ಸಮಾಜದ ನಿರ್ಮಾಣ ಸಾಧ್ಯ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮುಂಬಯಿ ಬಿಲ್ಲವರ ಅಸೋಸಿಯೇಶನ್‌ ಉಪಾಧ್ಯಕ್ಷ ಶ್ರೀನಿವಾಸ ಕರ್ಕೇರ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆಯ ಸಂ ದೇಶದೊಂದಿಗೆ ಕಾರ್ಯವೆಸಗುವ ಮುಂಬಯಿ ಬಿಲ್ಲವರ ಅಸೋಸಿ ಯೇಶನ್‌ ಮಾನವ ಸಂಬಂಧಗಳನ್ನು ಬೆಳೆಸುವ ಸಂಸ್ಥೆಯಾಗಿದೆ. ಜಾತಿ, ಮತ, ಭೇದಗಳಿಲ್ಲದೆ ಪ್ರತಿಭಾವಂತ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಶ್ರೀ ನಾರಾಯಣ ಗುರು ಸಾಹಿತ್ಯ ಪ್ರಶಸ್ತಿ ಮತ್ತು ಯಕ್ಷಗಾನ ಕಲಾ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಬಿಲ್ಲವ ಸಂಘಟನೆಯ ರೂವಾರಿ ಜಯ ಸಿ. ಸುವರ್ಣರ ಮಾರ್ಗದರ್ಶನದಂತೆ ಕರ್ನಾಟಕದ ವಿಭಿನ್ನ ಕಲಾ ಪ್ರಕಾರಗಳಿಗೆ ಬಿಲ್ಲವ ಭವನದ ಸಭಾಗೃಹ ಹೆಚ್ಚಿನ ಸೌಲಭ್ಯದೊಂದಿಗೆ ಪ್ರೋತ್ಸಾಹಿಸುತ್ತಿದೆ. ಕಲಾವಿದರ ಮಕ್ಕಳ ವಿದ್ಯಾಭ್ಯಾಸಕ್ಕೆ  ಹೆಚ್ಚಿನ ಆರ್ಥಿಕ ನೆರವು ನೀಡಿ ಕಲಾವಿದರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಲು ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದರು.

ಯಕ್ಷಗುರು ಮತ್ತು ಟ್ರಸ್ಟಿ ಕಟೀಲು ಸದಾನಂದ ಶೆಟ್ಟಿ ಅವರು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿದರು. ಗೌರವ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ಮನೋರಮಾ ಎನ್‌. ಶೆಟ್ಟಿ, ಬಂಟ್ಸ್‌ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್‌ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಎ. ಶೆಟ್ಟಿ, ವೈಟ್‌ ಲಿಫ್ಟರ್‌, ಛತ್ರಪತಿ ಶಿವಾಜಿ ಪ್ರಶಸ್ತಿ ವಿಜೇತ ಉದಯ ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ, ಪೊವಾಯಿ ಕನ್ನಡ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ, ಟ್ರಸ್ಟ್‌ನ ಅಧ್ಯಕ್ಷೆ ಸುಶೀಲಾ ಶೆಟ್ಟಿ ಅವರು ಮಾತನಾಡಿ ಶುಭಹಾರೈಸಿದರು.

ಸಮಾರಂಭದಲ್ಲಿ  ಯಕ್ಷಗಾನಕ್ಕೆ ಮಹತ್ತರ ಕೊಡುಗೆ ನೀಡಿದ ಸಂಘಟಕ ರಘುನಾಥ್‌ ಎನ್‌. ಶೆಟ್ಟಿ ಅವರಿಗೆ ಯಕ್ಷ ಭಾÅಮರಿ ಪ್ರಶಸ್ತಿ ಪ್ರದಾನಿಸಲಾಯಿತು. ದಿ| ಅಚ್ಯುತ ಎಂ. ಶೆಟ್ಟಿಗಾರ್‌ ಅವರಿಗೆ ಮರಣೋತ್ತರ ಭ್ರಮರ ಕಲಾ ಪೋಷಕ ಪ್ರಶಸ್ತಿಯನ್ನು ಅವರ ಪತ್ನಿ ಮೋಹಿನಿ ಶೆಟ್ಟಿಗಾರ್‌ ಅವರಿಗೆ ಪ್ರದಾನಿಸಲಾಯಿತು. ಭ್ರಮರಾ ವನಿತಾ ಪ್ರಶಸ್ತಿಯನ್ನು ಸರಿತಾ ಎಂ. ಶೆಟ್ಟಿ, ಭ್ರಮರಾ ಕಲಾ ಪ್ರಶಸ್ತಿಯನ್ನು ಮೋಹಿನಿ ಪಿ. ಶೆಟ್ಟಿ ಅವರಿಗೆ ನೀಡಿ ಸಮ್ಮಾನಿಸಲಾಯಿತು. ಭ್ರಮರ ಚೇತನ ಪುರಸ್ಕಾರವನ್ನು ಶ್ಲೋಕ್‌ ಎಸ್‌. ಶೆಟ್ಟಿ ಮತ್ತು ಸುಶಾಂತ್‌ ಬಿ. ಶೆಟ್ಟಿ ಅವರಿಗೆ ನೀಡಿ ಅಭಿನಂದಿಸಲಾಯಿತು.

Advertisement

ಯಕ್ಷಗುರುವ ಕಟೀಲು ಸದಾನಂದ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿ ಕೃಷ್ಣರಾಜ್‌ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಚಾರ್‌ಕೋಪ್‌ ಕನ್ನಡಿಗರ ಬಳಗದ ಮಹಿಳಾ ವಿಭಾಗದ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ದಹಿಸರ್‌ ವಿಭಾಗದ ಮುಖ್ಯಸ್ಥೆ ಸ್ಮಿತಾ ಎಸ್‌. ಶೆಟ್ಟಿ, ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್‌ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಂಸ್ಥೆಯ ಕಲಾವಿದರಿಂದ ಅಮರ ಶಿಲ್ಪಿ ವೀರ ಕಲ್ಕುಡ ತುಳು ಯಕ್ಷಗಾನ ಪ್ರದರ್ಶನಗೊಂಡಿತು. 

ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next