Advertisement
ಅಮಿತಾ ಪೊಳಲಿ ದೇವೇಂದ್ರನಾಗಿ ಸೊಗಸಾದ ಮಾತುಗಾರಿಕೆ, ಕುಣಿತಗಳಿಂದ ಮನಗೆದ್ದರೆ, ಆಶಿತಾ ಸುವರ್ಣರವರ ನರಾಕಾಸುರನ ಪಾತ್ರ ಅಬ್ಬರದ ಸುಂದರ ರಂಗಚಲನೆ, ಗಂಭೀರ ಧ್ವನಿಯ ಸ್ಪಷ್ಟವಾದ ಮಾತುಗಳಿಂದ ವೀರರಸದ ಸಮರ್ಥ ಅಭಿವ್ಯಕ್ತಿ ಎನಿಸಿತು. ಮುರಾಸುರನಾಗಿ ಚರಣ್‌ರಾಜ್ ಕೆಲವೇ ನಿಮಿಷಗಳ ಅವಧಿಯ ಪಾತ್ರವಾದರೂ ಚೆಂದದ ಅಭಿನಯದಿಂದ ರಂಗವನ್ನು ತುಂಬಿದರು. ತಾರನಾಥ ವರ್ಕಾಡಿ ಹಾಗೂ ಅವರ ಪುತ್ರಿ ಆಜ್ಞಾಸೋಹಮ್‌ರವರ ಜೋಡಿ ಶ್ರೀಕೃಷ್ಣ- ಸತ್ಯಭಾಮರಾಗಿ ಸು#ಟವಾದ ಹಾಸ್ಯ-ಲಾಸ್ಯ ಭರಿತ ಸಂಭಾಷಣೆ ಮತ್ತು ಮೋಹಕವಾದ ನಾಟ್ಯಗಾರಿಕೆಗಳಿಂದ ಪ್ರಮುಖ ಆಕರ್ಷಣೆ ಎನಿಸಿತು. ಭಾವಾಭಿನಯ ಪ್ರಾಸಬದ್ಧ ನುಡಿಗಳಿಂದ, ತಾತ್ವಿಕ ಚಿಂತನ ಲಹರಿಗಳಿಂದ ವರ್ಕಾಡಿ ರಂಜಿ ಸಿ ದರೆ ಸಂತಸ, ಕುತೂಹಲ, ಭಯ, ಹಠ, ವೀರತನ ಹೀಗೆ ಸರ್ವಭಾವಗಳನ್ನೂ ಮುದ್ದು ಮಾತುಗಳು ನೃತ್ಯಾಭಿನಯಗಳ ಮೂಲಕ ತೋರ್ಪಡಿಸಿದ ಸತ್ಯಭಾಮಾ ಪಾತ್ರಧಾರಿ ಆಜ್ಞಾಸೋಹಮ್ ತಾನು ಪ್ರತಿಭಾವಂತ ಕಲಾವಿದೆ ಎಂಬುದನ್ನು ಸಾಬೀತು ಪಡಿಸಿದರು. ಚಿಕ್ಕಚೊಕ್ಕ ಅಚ್ಚುಕಟ್ಟಾದ ಯಕ್ಷಗಾನ ದಯಾನಂದ ಕೋಡಿಕಲ್ ಭಾಗವತಿಗೆ ಸುಮಧುರ, ಉಳಿದ ಹಿಮ್ಮೇಳಗಳೂ ಪೂರಕ ಮತ್ತಷ್ಟು ಪಾತ್ರಗಳ ಸೇರ್ಪಡೆ, ಅಂತ್ಯದಲ್ಲಿ ಮಂಗಳ ನೃತ್ಯವಂದನ ಅಗತ್ಯವಿದೆ ಎಂದೆನಿಸಿತು.
Advertisement
ಅಚ್ಚುಕಟ್ಟಾಗಿ ಅಬ್ಬರಿಸಿದ ಭೌಮಾಸುರ
06:38 PM Feb 21, 2020 | mahesh |
Advertisement
Udayavani is now on Telegram. Click here to join our channel and stay updated with the latest news.