Advertisement

ಮುಸ್ಕಾನ್‌ ಲೈಬ್ರೆರಿ: ಸ್ಲಂ ಬಾಲೆಯ ಯಶಸ್ವಿ ಗ್ರಂಥಾಲಯ

08:30 AM Aug 05, 2017 | Team Udayavani |

ಭೋಪಾಲ್‌: ನಗರದ ಕೊಳಗೇರಿಯೊಂದರಲ್ಲಿ ವಾಸಿಸುತ್ತಿರುವ 5ನೇ ತರಗತಿ ಬಾಲಕಿಯೊಬ್ಬಳು ತನ್ನ ಮನೆಯಲ್ಲಿಯೇ ಪುಟ್ಟದೊಂದು ಗ್ರಂಥಾಲಯ ತೆರೆದು ಇತರ ಮಕ್ಕಳಿಗೆ ಓದಲು ಅನುಕೂಲ ಮಾಡಿಕೊಟ್ಟಿದ್ದಾಳೆ. ಮುಸ್ಕಾನ್‌ ಆಹಿರ್ವಾರ್‌ ಎಂಬಾಕೆಯೇ ಗ್ರಂಥಾಲಯ ತೆರೆದಿರುವ ಬಾಲಕಿ. ದುರ್ಗಾ ನಗರದ ತನ್ನ ಮನೆಯಲ್ಲಿ ಗ್ರಂಥಾಲಯ ತೆರೆದಿದ್ದು, ಇದಕ್ಕೆ ‘ಬಾಲ್‌ ಪುಸ್ತಕಾಲಯ’ ಎಂದು ಹೆಸರಿಟ್ಟಿದ್ದಾಳೆ. ಈಕೆ ಕಳೆದ ವರ್ಷ ಕೇವಲ 25 ಶೈಕ್ಷಣಿಕ ಪುಸ್ತಕಗಳನ್ನು ಇರಿಸುವ ಮೂಲಕ ಗ್ರಂಥಾಲಯವನ್ನು ಆರಂಭಿಸಿದಳು. ಈಗ ಪುಸ್ತಕಗಳ ಸಂಖ್ಯೆ 1,000ಕ್ಕೆ ತಲುಪಿದೆ.

Advertisement

ಮತ್ತೂಂದು ಸಂತೋಷದ ವಿಷಯವೆಂದರೆ, ಈಕೆಯ ಈ ಕಾರ್ಯವನ್ನು ಮಧ್ಯಪ್ರದೇಶ ಸರ್ಕಾರ ಗುರುತಿಸಿದೆ. ಸುಸಜ್ಜಿತವಾದ ಗ್ರಂಥಾಲಯವನ್ನು ನಿರ್ಮಿಸುವ ಸಲುವಾಗಿ ರಾಜ್ಯದ ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ 2 ಲಕ್ಷ ರೂ. ಚೆಕ್‌ ನೀಡಿದ್ದಾರೆ. ಅಲ್ಲದೇ ಗ್ರಂಥಾಲಯಕ್ಕಾಗಿಯೇ 1 ಕೋಣೆಯನ್ನು ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ‘ಕಳೆದ ಜು.7ರಂದು ಮುಸ್ಕಾನ್‌ ತಂದೆ ನಿಧನರಾದರು. ನನ್ನ ತಂದೆ ನಿಧನವಾದ ಬಳಿಕ ಗ್ರಂಥಾಲಯ ನಡೆಸುವ ಯೋಚನೆಯಿಂದ ದೂರ ಸರಿದೆ. ಅದರೆ ಸರ್ಕಾರವೇ ಪ್ರೋತ್ಸಾಹ ನೀಡುತ್ತಿರುವ ಕಾರಣ ಗ್ರಂಥಾಲಯವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ, ಇನ್ನೂ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವೆ’ ಎಂದು ಹೇಳಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next