Advertisement

ಬೈಕ್‌ ರಾಲಿ: ಹೆಲ್ಮೆಟ್‌ ಧರಿಸದ ಭೋಪಾಲ್‌ ಸಂಸದನಿಗೆ ದಂಡ

04:51 PM Jan 18, 2018 | udayavani editorial |

ಭೋಪಾಲ್‌: ಭೋಪಾಲ್‌ ಸಂಸತ್‌ ಸದಸ್ಯ ಆಲೋಕ್‌ ಸಂಜಾರ್‌ ಅವರು ರಾಲಿಯೊಂದರಲ್ಲಿ ಹೆಲ್ಮೆಟ್‌ ಧರಿಸದೆ ಬೈಕ್‌ ಓಡಿಸದ ಕಾರಣಕ್ಕೆ ಅವರಿಗೆ 250 ರೂ. ದಂಡ ಹೇರಲಾಗಿದೆ. ದಂಡ ಪಾವತಿಸಿದ ಅವರು ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

Advertisement

ಕಳೆದ ವಾರ ರಾಜ್ಯಾದ್ಯಂತ ಏಕಾತ್ಮ ಯಾತ್ರೆ ನಡೆದಿತ್ತು. ಓಂಕಾರೇಶ್ವರದಲ್ಲಿ 108 ಅಡಿ ಎತ್ತರದ ಆದಿ ಶಂಕರಾಚಾರ್ಯರ ಮೂರ್ತಿ ಸ್ಥಾಪನೆಗಾಗಿ ಲೋಹ ಸಂಗ್ರಹಣೆಯ ಅಭಿಯಾನ ಅದಾಗಿತ್ತು. ಈ ಸಂಬಂಧ ನಡೆದ ರಾಲಿಯಲ್ಲಿ ಆಲೋಕ್‌ ಸಂಜಾರ್‌ ಅವರು ಮಧ್ಯ ಭೋಪಾಲ್‌ ಶಾಸಕ ಸುರೇಂದ್ರ ನಾಥ್‌ ಸಿಂಗ್‌ ಅವರೊಂದಿಗೆ ಭಾಗವಹಿಸಿದ್ದರು. 

ಬೈಕ್‌ ರಾಲಿಯಲ್ಲಿ ಸಂಸದ ಆಲೋಕ್‌ ಸಂಜಾರ್‌ ಹೆಲ್ಮೆಟ್‌ ಧರಿಸದೆ ಬೈಕ್‌ ಓಡಿಸಿದ ಕಾರಣಕ್ಕೆ ದಂಡನೆಗೆ ಗುರಿಯಾದರು. 

Advertisement

Udayavani is now on Telegram. Click here to join our channel and stay updated with the latest news.

Next