ನವದೆಹಲಿ: ಸತತ ಆರು ಗಂಟೆಗಳ ಶಸ್ತ್ರ ಚಿಕಿತ್ಸೆಯ ಬಳಿಕ 20 ವರ್ಷದ ಮಹಿಳೆಯ ದೇಹದಿಂದ ಬರೋಬ್ಬರಿ 16 ಕಿ.ಗ್ರಾಂ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.
ಭೋಪಾಲ್ ನ ಖಾಸಗಿ ಆಸ್ಪತ್ರೆಯ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದ್ದು ಮಹಿಳೆಯ ಆರೋಗ್ಯ ಸ್ಥಿಮಿತದಲ್ಲಿದೆ ಎಂದು ವರದಿ ತಿಳಿಸಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಆಸ್ಪತ್ರೆಯ ನಿರ್ವಾಹಣಾ ಅಧಿಕಾರಿ ಚಂದೋಲಿಯಾ, ಒಂದು ಬಹುದೊಡ್ಡ ಗಡ್ಡೆಯನ್ನು ಮಹಿಳೆಯ ದೇಹದಿಂದ ಹೊರತೆಗೆಯುವಲ್ಲಿ ವೈದ್ಯರ ತಂಡ ಯಶಸ್ವಿಯಾಗಿದ್ದು. ಶಸ್ತ್ರ ಚಿಕಿತ್ಸೆಯ ಬಳಿಕ ಮಹಿಳೆ ಆರೋಗ್ಯವಂತಳಾಗಿದ್ದಾಳೆ ಎಂದಿದ್ದಾರೆ.
ಇದನ್ನೂ ಓದಿ:ಮೊದಲ ಏಕದಿನ: ಟಾಸ್ ಗೆದ್ದ ಇಂಗ್ಲೆಂಡ್, ಟೀಂ ಇಂಡಿಯಾದಲ್ಲಿ ಇಬ್ಬರು ಹೊಸಮುಖ
ಕಳೆದ 2 ದಿನಗಳ ಹಿಂದೆ ಮಹಿಳೆಯೊಬ್ಬಳು ತಮ್ಮ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಯಲ್ಲಿ ಬಹುದೊಡ್ಡ ಗಾತ್ರದ ಗಡ್ಡೆ ಕಂಡುಬಂದಿದೆ. ಈ ಗಡ್ಡೆಯನ್ನು ಹೊಂದಿದ್ದ ಮಹಿಳೆ 48 ಕಿ.ಗ್ರಾಂ ತೂಕವನ್ನು ಹೊಂದಿದ್ದಳು, ಗಡ್ಡೆಯ ಕಾರಣದಿಂದಾಗಿ ಈಕೆ ನಡೆದಾಡಲು ಹಾಗೂ ಆಹಾರ ಸೇವಿಸಲು ಕಷ್ಟ ಪಡುತ್ತಿದ್ದಳು ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಗಡ್ಡೆಯನ್ನು ಅಂಡಾಶಯದ ಗಡ್ಡೆ ಎಂದು ಗುರುತಿಸಲಾಗಿದೆ ಅಲ್ಲದೆ ಇಷ್ಟು ದೊಡ್ಡ ಗಾತ್ರದ ಗಡ್ಡೆಯನ್ನು ಆಕೆಯ ದೇಹದಿಂದ ಹೊರತೆಗೆಯುವುದು ಒಂದು ದೊಡ್ಡ ಶಸ್ತ್ರ ಚಿಕಿತ್ಸೆಯಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದು, ಮಹಿಳೆಯು ಸಮಯಕ್ಕೆ ಸರಿಯಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಹಿನ್ನೆಲೆಯಲ್ಲಿ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇಲ್ಲದೆ ಹೋಗಿದ್ದರೆ ಆಕೆಯ ಸ್ಥಿತಿ ಗಂಭೀರವಾಗುವ ಸಾಧ್ಯತೆಗಳಿದ್ದವು ಎಂದು ತಿಳಿಸಿದ್ದಾರೆ.