Advertisement

ಭವನ ನಿರ್ಮಾಣಕ್ಕೆ ಭೂಮಿಪೂಜೆ

01:00 PM Jun 16, 2020 | mahesh |

ಮೊಳಕಾಲ್ಮೂರು: ಹಿಂದುಳಿದ ತಾಲೂಕಿನಲ್ಲಿ ಆಯ್ದ ಹಿಂದುಳಿದ ನಿರ್ಗತಿಕ ಹಾಗೂ ಅನಾಥ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ದೃಷ್ಟಿಯಿಂದ ನಿರ್ಮಾಣವಾಗಲಿರುವ ಸಂಸ್ಕಾರ ಭವನ ಇಡೀ ಹಿಂದೂ ಸಮುದಾಯಕ್ಕೆ ಪ್ರಯೋಜನವಾಗುವಂತಹ ಭವನವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್‌ ಕರ್ನಾಟಕ ದಕ್ಷಿಣ ಕಾರ್ಯದರ್ಶಿ ಜಿ. ಬಸವರಾಜ್‌ ಆಶಿಸಿದರು.

Advertisement

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರವರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನೀಡಿರುವ 25 ಲಕ್ಷ ರೂ. ಅನುದಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಶ್ರೀರಾಮ ಸೇವಾ ಟ್ರಸ್ಟ್‌ ವತಿಯಿಂದ ಪಟ್ಟಣದ ಮಾರುತಿ ಬಡಾವಣೆಯಲ್ಲಿ ನಿರ್ಮಾಣವಾಗಲಿರುವ ಸಂಸ್ಕಾರ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಶಿಕ್ಷಣ, ಸಂಸ್ಕಾರ, ಸೇವೆಯ ಧ್ಯೇಯದೊಂದಿಗೆ ಶ್ರೀರಾಮ ಸೇವಾ ಟ್ರಸ್ಟ್‌ ಸುಮಾರು ಸತತವಾಗಿ 6 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಅದರ ಭಾಗವಾಗಿ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಟ್ರಸ್ಟ್‌ಗೆ ಸೇರಿರುವ ಖಾಲಿ ನಿವೇಶನದಲ್ಲಿ 25
ಲಕ್ಷ ರೂ. ಅನುದಾನದಲ್ಲಿ ಸಂಸ್ಕಾರ ಭವನ ನಿರ್ಮಾಣವಾಗಲಿದೆ. ಈ ಸಂಸ್ಕಾರ ಭವನ ಕೇವಲ ಟ್ರಸ್ಟ್‌ಗೆ ಸೇರಿದ ಭವನವಾಗದೆ ಇಡೀ ಹಿಂದೂ ಸಮುದಾಯಕ್ಕೆ ಪ್ರಯೋಜನವಾಗುವ ಸಂಸ್ಕಾರ ಭವನವಾಗಬೇಕಾಗಿದೆ. ಈ ನಿವೇಶನದ ಮುಂಭಾಗದಲ್ಲಿ ಭವ್ಯವಾದ ಶ್ರೀರಾಮನ ಮಂದಿರ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ
ಶಂಕುಸ್ಥಾಪನೆ ನೆರವೇರಿಸುವುದಾಗಿ ತಿಳಿಸಿದರು.

ವಿಶ್ವ ಹಿಂದೂ ಪರಿಷತ್‌ ತಾಲೂಕು ಅಧ್ಯಕ್ಷ ಡಿ.ಎಂ. ಈಶ್ವರಪ್ಪ, ವಿಭಾಗ ಕಾರ್ಯದರ್ಶಿ ಷಡಾಕ್ಷರಪ್ಪ, ಶ್ರೀರಾಮ ಸೇವಾ ಟ್ರಸ್ಟ್‌ ಕಾರ್ಯದರ್ಶಿ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಡಾ| ಪಿ.ಎಂ. ಮಂಜುನಾಥ, ಪೊಲೀಸ್‌ ವೃತ್ತ ನಿರೀಕ್ಷಕ ಗೋಪಾಲ್‌ ನಾಯ್ಕ, ಪಿಎಸ್‌ಐ ಎಂ.ಕೆ. ಬಸವರಾಜ್‌, ಪಪಂ ಸದಸ್ಯರಾದ ಪಿ. ಲಕ್ಷ್ಮಣ,
ಕೆ. ತಿಪ್ಪೇಸ್ವಾಮಿ, ಮಂಜಣ್ಣ, ಮುಖಂಡರಾದ ಪಿ.ಎಂ. ಚಂದ್ರಶೇಖರ, ಚಂದ್ರಶೇಖರ ಗೌಡ, ಡಿಶ್‌ ರಾಜು, ಶಿವಕುಮಾರ್‌, ಭೀಮಣ್ಣ, ಅರ್ಜುನ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next