Advertisement

BJP; ಯು ಟರ್ನ್ ಹೊಡೆದ ಪವನ್ ಸಿಂಗ್: ಕಣಕ್ಕಿಳಿಯುವುದಾಗಿ ಹೇಳಿಕೆ!

03:23 PM Mar 13, 2024 | Team Udayavani |

ಕೋಲ್ಕತಾ: ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ್ದ ಭೋಜ್ ಪುರಿ ನಟ, ಖ್ಯಾತ ಗಾಯಕ ಪವನ್ ಸಿಂಗ್ ಅವರು ಯು ಟರ್ನ್ ಹೊಡೆದಿದ್ದು, ಕಣಕ್ಕಿಳಿಯುತ್ತೇನೆ ಎಂದು ಎಕ್ಸ್ ನಲ್ಲಿ ಬುಧವಾರ ಪೋಸ್ಟ್ ಮಾಡಿದ್ದಾರೆ.

Advertisement

ಲೋಕಸಭೆ ಚುನಾವಣೆಗೆ ಬಿಜೆಪಿ 195 ಅಭ್ಯರ್ಥಿಗಳ ಹೆಸರಲ್ಲಿ ಪವನ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.ಮರು ದಿನವೇ ಕೆಲವು ಕಾರಣಗಳಿಂದ ನಾನು ಕಣಕ್ಕಿಳಿಯುವುದಿಲ್ಲ ಎಂದು ಪವನ್ ಸಿಂಗ್ ಹೇಳಿದ್ದರು.

ಆದರೆ ಈಗ ”ನನ್ನ ಸಮಾಜ, ಜನತೆ, ಜನತೆ ಹಾಗೂ ತಾಯಿಗೆ ನೀಡಿದ ಭರವಸೆ ಈಡೇರಿಸಲು ಚುನಾವಣೆಗೆ ಸ್ಪರ್ಧಿಸುತ್ತೇನೆ.ನಿಮ್ಮ ಆಶೀರ್ವಾದ ಮತ್ತು ಸಹಕಾರವನ್ನು ನಿರೀಕ್ಷಿಸುತ್ತೇನೆ. ಜೈ ಮಾತಾ ದಿ” ಎಂದು ಪೋಸ್ಟ್ ಮಾಡಿದ್ದಾರೆ.

38 ರ ಹರೆಯದ ಜನಪ್ರಿಯ ಪವನ್ ಸಿಂಗ್ ಅವರು ಹಾಲಿ ಸಂಸದರಾಗಿರುವ ಟಿಎಂಸಿ ನಾಯಕ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರೂಂದಿಗೆ ಸ್ಪರ್ಧಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next