Advertisement

ಕೋವಿಡ್ ಹಾಟ್‌ ಸ್ಪಾಟ್‌ ಆಗುತ್ತಿರುವ ಭಿವಂಡಿ

01:00 PM Jun 24, 2020 | Suhan S |

ಥಾಣೆ, ಜೂ. 23: ಧಾರಾವಿಯ ಬಳಿಕ ಈಗ ಭಿವಂಡಿ ಕೋವಿಡ್ ಹಾಟ್‌ಸ್ಪಾಟ್‌ ಆಗುತ್ತಿದೆಯೇ ಎಂಬ ಅನುಮಾನ ಮೂಡಲು ಪ್ರಾರಂಭಿಸಿದೆ. ಭಿವಂಡಿಯ ಹಲವು ಪ್ರದೇಶಗಳಲ್ಲಿ ಸೋಂಕು ವೇಗವಾಗಿ ಹಬ್ಬುತ್ತಿದೆ. ಇದ್ಗಾ ನಗರ, ಮಿಲ್ಟಾನಗರ, ನಾಡಿನಾಕಾ, ಪದ್ಮನಗರ ಮತ್ತು ಕಾಮತ್‌ಘರ್‌ ಆರೋಗ್ಯ ಕೇಂದ್ರಗಳು ಸೋಂಕಿನ ತಾಣಗಳಾಗಿದ್ದು, ಕಳೆದ 3 ದಿನಗಳಲ್ಲಿ 423 ಹೊಸ ಸೋಂಕಿತರು ಪತ್ತೆಯಾಗಿದ್ದು, 13 ಮಂದಿ ಸಾಲನ್ನಪ್ಪಿದ್ದಾರೆ. ಸೋಮವಾರ ಬಿವಂಡಿಯಲ್ಲಿ 209 ಸೋಂಕಿತರ ಪತ್ತೆ ಬಳಿಕ ಒಟ್ಟು ಸೋಂಕಿತರ ಸಂಖ್ಯೆ 1,472ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 170 ಮಂದಿ ಮಹಾನಗರ ಪ್ರದೇಶದವರಾಗಿದ್ದರೆ, 39ಮಂದಿ ಗ್ರಾಮೀಣ ಪ್ರದೇಶದವರು. ಮೆಟ್ರೋಪಾಲಿಟನ್‌ ಪ್ರದೇಶದಲ್ಲಿ ರವಿವಾರ ಐದು ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.

Advertisement

ಭಿವಂಡಿ ಮಹಾನಗರ ಪ್ರದೇಶದಲ್ಲಿ ರವಿವಾರ 170 ಕೋವಿಡ್ ಸೋಂಕಿತ ಹೊಸ ರೋಗಿಗಳು ಪತ್ತೆಯಾಗಿದ್ದರಿಂದ ರೋಗಿಗಳ ಸಂಖ್ಯೆ 1,045ಕ್ಕೆ ಏರಿಕೆಯಾಗಿದೆ. ಈ ಪೈಕಿ 450 ಸೋಂಕಿತರು ಗುಣ ಮುಖರಾಗಿದ್ದರೆ, 71 ಮಂದಿ ಸಾವನ್ನಪ್ಪಿದ್ದಾರೆ. ನಾಡಿನಾಕಾ ಆರೋಗ್ಯ ಕೇಂದ್ರದಲ್ಲಿ ರವಿವಾರ ಮಹಾನಗರದ 15 ಆರೋಗ್ಯ ಕೇಂದ್ರಗಳಲ್ಲಿ ಗರಿಷ್ಠ ಸೋಂಕಿತರು, ಅಂಜುರ್ಫಾಟಾ ಆರೋಗ್ಯ ಕೇಂದ್ರದಲ್ಲಿ 28 ಹೊಸ ರೋಗಿಗಳು, ಕಾಮತ್‌ಘರ್‌ ಆರೋಗ್ಯ ಕೇಂದ್ರದಲ್ಲಿ 21 ಹೊಸ ರೋಗಿಗಳು, ಇದ್ಗಾ ಆರೋಗ್ಯ ಕೇಂದ್ರದಲ್ಲಿ 19 ಹೊಸ ರೋಗಿಗಳು ಮತ್ತು ಪದ್ಮನಗರ ಆರೋಗ್ಯ ಕೇಂದ್ರದಲ್ಲಿ 17 ಹೊಸ ರೋಗಿಗಳು ಪತ್ತೆಯಾಗಿದ್ದಾರೆ. 170 ಸೋಂಕಿತರಲ್ಲಿ 57 ಮಂದಿ ಮಹಿಳೆಯರು ಮತ್ತು 104 ಮಂದಿ ಪುರುಷರಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನ 9 ಮಂದಿ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ. ಮೆಟ್ರೋಪಾಲಿಟನ್‌ ಪ್ರದೇಶದಂತೆಯೇ ಸೋಂಕಿತರ ಸಂಖ್ಯೆಯು ಗ್ರಾಮೀಣ ಪ್ರದೇಶಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಭಾನುವಾರ 39 ರೋಗಿಗಳು ಕಂಡುಬಂದಿದ್ದರಿಂದ ರೋಗಿಗಳ ಸಂಖ್ಯೆ 427ಕ್ಕೆ ಏರಿದೆ. ಈ ಪೈಕಿ 147 ಮಂದಿ ಸೋಂಕುಮುಕ್ತವಾಗಿದ್ದು. ಎಂಟು ಮಂದಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next