Advertisement

ಭಾರತೀಯ ಸೇನೆಗೆ “ಭೀಷ್ಮ’ಬಲ

02:00 AM May 08, 2019 | Team Udayavani |

ಹೊಸದಿಲ್ಲಿ: ಭಾರತೀಯ ಪಡೆಗಳನ್ನು ಆಧುನೀಕರಣ ಗೊಳಿಸುವತ್ತ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ, ಭಾರತೀಯ ಸೇನೆಗೆ ರಷ್ಯಾ ನಿರ್ಮಿತ ಟಿ-90 ಮಾದರಿಯ 464 ಟ್ಯಾಂಕರ್‌ಗಳ ಆಧುನೀಕರಿಸಲ್ಪಟ್ಟ ತಂತ್ರಜ್ಞಾನವನ್ನು ಖರೀದಿಸಿ ಸ್ವದೇಶೀಯವಾಗಿ ಅವುಗಳನ್ನು ಉತ್ಪಾದಿಸಲು ನಿರ್ಧರಿಸಿದೆ. ಒಟ್ಟು 13,448 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದ್ದು, ಹೊಸ ಟ್ಯಾಂಕರ್‌ಗಳು 2022ರಿಂದ 2025ರೊಳಗೆ ಭಾರತಕ್ಕೆ ಲಭ್ಯವಾಗಲಿವೆ. ಭಾರತದಲ್ಲಿ ಈ ಮಾದರಿಯ ಟ್ಯಾಂಕರ್‌ಗಳಿಗೆ “ಭೀಷ್ಮ’ ಎಂದು ಹೆಸರಿಡಲಾಗಿದೆ.

Advertisement

ಟಿ-90 ಮಾದರಿಯ ಟ್ಯಾಂಕರ್‌ಗಳನ್ನು ತಯಾರಿಸಲು 2006-07ರಲ್ಲೇ ರಷ್ಯಾ, ಭಾರತಕ್ಕೆ ಪರವಾನಿಗೆ ನೀಡಿದ್ದು, ಈಗ ರಷ್ಯಾವು ಆ ಟ್ಯಾಂಕರ್‌ಗಳನ್ನು ಆಧುನೀಕರಣಗೊಳಿಸಿದೆ. ಹಾಗಾಗಿ ಈ ಹೊಸ ತಂತ್ರಜ್ಞಾನವನ್ನು ಹಳೆ ಒಪ್ಪಂದದ ಅಡಿಯಲ್ಲೇ ಭಾರತ ಪಡೆಯಲಿದೆ.
ತಂತ್ರಜ್ಞಾನ ಹಸ್ತಾಂತರಗೊಂಡ ಅನಂತರ ಎಲ್ಲ ಹೊಸ ಟ್ಯಾಂಕರ್‌ಗಳನ್ನು ಚೆನ್ನೈ ಬಳಿಯ ಅವದಿಯಲ್ಲಿರುವ ಇಂಡಿ ಯನ್‌ ಆರ್ಡನನ್ಸ್‌ ಫ್ಯಾಕ್ಟರಿ ಯಲ್ಲಿ ತಯಾರಿಸಲಾಗುತ್ತದೆ. ರಷ್ಯಾ ದಿಂದ ಈಗಾಗಲೇ ಟಿ-90 ಮಾದರಿಯ 1,654 ಯುದ್ಧ ಟ್ಯಾಂಕರ್‌ಗಳು ಭಾರ ತೀಯ ಸೇನೆಯಲ್ಲಿದ್ದು, ಅದಕ್ಕೆ ಹೆಚ್ಚುವರಿಯಾಗಿ ಆಧುನೀಕೃತ ಟಿ-90 ಟ್ಯಾಂಕರ್‌ಗಳು ಸೇರ್ಪಡೆಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next