Advertisement

ಭಿರಡಿ ಗ್ರಾಪಂಗೆ ಬೀಗ-ಪ್ರತಿಭಟನೆ

02:27 PM Feb 27, 2020 | Suhan S |

ರಾಯಬಾಗ: ತಾಲೂಕಿನ ಭಿರಡಿ ಗ್ರಾಮದಲ್ಲಿ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳಲ್ಲಿ ಅನರ್ಹ ಫಲಾನುಭವಿಗಳು ವಾಸವಾಗಿದ್ದು, ಕೂಡಲೇ ಅವರನ್ನು ಸ್ಥಳಾಂತರಿಸಿಬೇಕೆಮದು ಒತ್ತಾಯಿಸಿ ಅರ್ಹ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಭಿರಡಿ ಗ್ರಾಪಂಗೆ ಬೀಗ ಹಾಕಿ ಸರ್ಕಾರ ನೀಡಿದ ದಾಖಲೆಗಳನ್ನು ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು.

Advertisement

2005ರಲ್ಲಿ ಕೃಷ್ಣಾ ನದಿಯ ಪ್ರವಾಹದಲ್ಲಿ ಮನೆಗಳು ಮುಳುಗಡೆಯಾದ ಸಂತ್ರಸ್ತರಿಗೆಭಿರಡಿ ಗ್ರಾಮದ ರಿ.ಸನಂ.21ರಲ್ಲಿ ಸುಮಾರು ನಾಲ್ಕು ಎಕರೆ ಜಾಗದಲ್ಲಿ 132 ಅರ್ಹ ಪಲಾನುಭವಿಗಳಿಗೆ ಸರ್ಕಾರ ಮನೆ ನಿರ್ಮಿಸಿಕೊಟ್ಟಿತ್ತು. ಮನೆಗಳನ್ನು ಅರ್ಹ ಪಲಾನುಭಾವಿಗಳಿಗೆ ವಿತರಿಸುವ ಮುಂಚೆ ಆ ಮನೆಗಳಲ್ಲಿ ಅನಧಿಕೃತವಾಗಿ ಬೇರೆ ಕುಟುಂಬಗಳು ವಾಸವಾಗಿದ್ದಾರೆ. ಅನಧಿಕೃತವಾಗಿ ಮಂಜೂರಾದ ಅರ್ಹ ಫಲಾನುಭವಿಗಳಿಗೆ ಈ ಮನೆಗಳನ್ನು ಹಂಚಿದ್ದರ ಕೂರಿತು ಕಳೆದ ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದರೂ ಕೂಡಾ ಸಂಬಂಧಿಸಿದ ಗ್ರಾಮ ಪಂಚಾಯತಿ ಹಾಗೂ ತಾಲೂಕಾ ಪಂಚಾಯತಿಯವರು ಮತ್ತು ತಹಶೀಲ್ದಾರರು ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವೇ ಅರ್ಹ ಫಲಾನುಭವಿಗಳಿಗೆ ಮನೆ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಪ್ರಕಾಶ ವಡ್ಡರ ಹಾಗೂ ಉಪತಹಶೀಲ್ದಾರ್‌ ಪರಮಾನಂದ ಮಂಗಸೂಳಿ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. 2005ರ ಗ್ರಾಪಂ ಪಟ್ಟಿಯ ಪ್ರಕಾರ ಮಂಜೂರಾದ ಮನೆಗಳನ್ನು ಅರ್ಹ ಪಲಾನುಭವಿಗಳಿಗೆ ನೀಡಬೇಕೆಂದು ಗ್ರಾಮಸ್ಥರು ಹಾಗೂ ಅರ್ಹ ಫಲಾನುಭವಿಗಳು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ್‌ ಪರಮಾನಂದ ಮಂಗಸೂಳೆ ಮಾತನಾಡಿ, ಶೀಘ್ರವೇ 2005ರಲ್ಲಿ ಸರ್ಕಾರದಿಂದ ಸಂತ್ರಸ್ತರಿಗಾಗಿ ಮಂಜೂರಾದ ಈ ಮನೆಗಳಲ್ಲಿ ಯಾರು ಇದ್ದಾರೆ ಎಂದು ದಾಖಲೆಗಳನ್ನು ಪರಿಶೀಲಿಸಿ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ಚಿದಾನಂದ ತೇಲಿ, ಬಸವರಾಜ ತಿಗಡಿ, ವಸಂತ ಘೇನಾನಿ, ಶಂಕರ ಪಾಟೀಲ, ಲಕ್ಷ್ಮೀಬಾಯಿ ತೇಲಿ, ಶಾರವ್ವ ನಾವಿ, ಮಂಗಲ ಬಿಸನಕೊಪ್ಪ, ಕಸ್ತೂರಿ ಬನಹಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next