Advertisement

ಭೀಮಾಶಂಕರ ಮಠ ಲೋಕಾರ್ಪಣೆ ಇಂದು

04:09 PM Feb 12, 2018 | |

ತಾಳಿಕೋಟೆ: ದೇಶದಲ್ಲಿ ಸಂತರು ಅನೇಕ ಪವಾಡಗಳ ಮೂಲಕ ವಿಜ್ಞಾನಕ್ಕೆ ಸವಾಲೆಸೆದು ತಮ್ಮ ಅಧ್ಯಾತ್ಮಿಕ ಸಿದ್ದಿಗಳ ಮೂಲಕ ಸಮಾಜಕ್ಕೆ ಒಳ್ಳೆ ದಾರಿ ತೋರಿಸಿದ್ದಾರೆ. ಇಂತಹ ಶಿವಯೋಗಿಗಳ, ಸಂತರ ಚರಿತ್ರೆಗಳನ್ನು ಕೇಳಿದರೆ ಇಂದಿಗೂ ಉತ್ತರಿಸಲಾಗದಂತಹ ವಿಸ್ಮಯಕಾರಿ ಸಂಗತಿಗಳು ಗೋಚರಿಸುತ್ತವೆ.

Advertisement

ಅಂತಹ ನಾತ ಸಂಪ್ರದಾಯಕ್ಕೆ ಒಳಪಟ್ಟ ಆನಾಥ, ಮಶ್ಚೇಂದ್ರನಾಥ, ಗೋರಕನಾಥ, ಗ್ರಹಿಣನಾಥ, ರಾಮನಾಥ ಮಠಕ್ಕೆ ಸೇರಿದ ತಾಳಿಕೋಟೆ ಸಮಿಪದ ಕೂಚಬಾಳದ ಭೀಮಾಶಂಕರ ಮಠ ವೈವಿದ್ಯಮಯಕ್ಕೆ ಹೆಸರಾದಂತಹ ಮಠವಾಗಿದೆ ಎಂದರೆ ತಪ್ಪಾಗಲಾರದು.

ನಾತ ಸಂಪ್ರದಾಯದ ತ್ರಿವಿಕ್ರಮಾನಂದರು ಇಡಿ ಪ್ರಪಂಚಕ್ಕೆ ಯೋಗ ಕೊಟ್ಟವರು ಅನೇಕ ಪವಾಡಗಳ ಮೂಲಕ ಅನೇಕ ಸಿದ್ಧಿಗಳ ಮೂಲಕ, ಪುರಾಣ ಪ್ರವಚನ, ಶಾಸ್ತ್ರಗಳ ಮೂಲಕ ಅಧ್ಯಾತ್ಮಿಕ ಜ್ಞಾನವನ್ನು ರಾಜ್ಯಾದ್ಯಂತ ಪಸರಿಸಿ ಉಣಬಡಿಸಿ ಬೆಳಗಿಸಿದವರು. ರಾಮನಾಥರ ಮೂಲಕ ತಾಳಿಕೋಟೆ ಸಮೀಪದ ಕೂಚಬಾಳ ಗ್ರಾಮವನ್ನು ಸೇರಿ ಸುಮಾರು 8 ಭಾಗಗಳಲ್ಲಿ ಭಕ್ತಾದಿಗಳಿಗೆ ಅಧ್ಯಾತ್ಮಿಕ ರಸದೌತಣ ಪರಿಚಯಿಸಿಕೊಟ್ಟಿದ್ದಾರೆ.

ಅದೇ ನಾತ ಸಂಪ್ರದಾಯಕ್ಕೆ ಸೇರಿದ ವಂಶಸ್ಥರಾದ ಸದ್ಗುರು ಭೀಮಾಶಂಕರ ಸ್ವಾಮಿಗಳು ಕೂಚಬಾಳ ಗ್ರಾಮದಲ್ಲಿ ನೆಲೆಸಿ ತಮ್ಮ ಸಿದ್ದಿ ಪವಾಡ, ಶಾಸ್ತ್ರ ಪ್ರವಚನಗಳ ಮೂಲಕ ಲೋಕಕಲ್ಯಾಣ ಮಾಡಿದ್ದರಿಂದ ಅವರ ನೆಲೆಸಿದ ಸ್ಥಳದಲ್ಲಿಯೇ ಭೀಮಾಶಂಕರ ಮಠವನ್ನು ಸುಮಾರು 130 ವಷಗಳ ಹಿಂದೆ ನಿರ್ಮಿಸಲಾಗಿದೆ. ಯೋಗಿಗಳು ಶಿವನ ಆಜ್ಞೆ ಮೇಲೆಯೆ ಪವಾಡ ಸದೃಶ್ಯಗಳ ಮೂಲಕ ಸಮಾಜದಲ್ಲಿ
ಅಧ್ಯಾತ್ಮಿಕ ನೆಲೆಗಟ್ಟನ್ನು ಸ್ಥಾಪಿಸಿದ್ದರಿಂದ ಇಂದಿಗೂ ಶಿವಲಿಂಗದ ಮೂಲಕವೇ ಭೀಮಾಶಂಕರ ಯೋಗಿಗಳನ್ನು ಎಲ್ಲ ಜನರು ಕಾಣುವುದರೊಂದಿಗೆ ಆರಾಧಿಸುತ್ತಾರೆ.

ಹಿಂದಿನ ಪೀಠಾಧಿಪತಿ ನಿಜಾನಂದ ಮಹಾಸ್ವಾಮಿಗಳು ಬರೆದ ಪದ್ಯವನ್ನು ಆಲಿಸಿ ಗುರು ಗೋವಿಂದಭಟ್ಟರು ಮತ್ತು ಶಿಷ್ಯರಾದ ಸಂತ ಶಿಶುನಾಳ ಶರೀಫರು ಕೂಚಬಾಳ ಗ್ರಾಮದ ಮಠಕ್ಕೆ ಭೇಟಿ ನೀಡಿ ಮೂರು ದಿನ ಅಧ್ಯಾತ್ಮಿಕ ರಸದೌತಣ ಸವಿದುಕೊಂಡು ಹೋಗಿದ್ದಾರೆ.

Advertisement

ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ನಾತ ಸಂಪ್ರದಾಯಕ್ಕೆ ಸೇರಿದ ಉತ್ತರ ಪ್ರದೇಶದ ಗೋರಕಪುರದ ಗೋರಕನಾಥ ಮಠದ ಪೀಠಾಧಿಪತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನಾತ ಸಂಪ್ರದಾಯಕ್ಕೆ ಕೂಚಬಾಳದ ಭೀಮಾಶಂಕರ ಮಠ ಪರಿಚಯಿಸಲ್ಪಟ್ಟ ಮಠ.

ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿದ ನಾತ ಸಂಪ್ರದಾಯಕ್ಕೆ ಸೇರಿದ ಭಿಮಾಶಂಕರ ಮಠವನ್ನು ಗ್ರಾಮದ ಸದ್ಭಕ್ತ ಮಂಡಳಿಯಿಂದ ಜೀರ್ಣೋದ್ಧಾರವಾಗಿದೆ. ಶ್ರೀಮಠದ ಲೋಕಾರ್ಪಣೆಗೆ ಹುಣಸಿಹೊಳೆ ಕಣ್ವಮಠದ ವಿದ್ಯಾವಾರಿತೀರ್ಥ ಶ್ರೀಪಾದಂಗಳವರು, ಸಿಂದಗಿ
ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮೀಜಿ, ಗಂವ್ಹಾರ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಸೋಪಾನನಾಥ ಮಹಾಸ್ವಾಮಿಗಳನ್ನೊಳಗೊಂಡು ನಾಡಿನ ಅನೇಕ ಹರಗುರು ಚರಮೂರ್ತಿಗಳ ಸಂತರ ಸಮ್ಮುಖದಲ್ಲಿ ಫೆ. 12ರಂದು ಶ್ರೀಮಠದ ಲೋಕಾರ್ಪಣೆಗೆ ಮಠದ ಇಂದಿನ ಪೀಠಾಧಿ ಪತಿ ಪದ್ಮನಾಭ ಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಎಸ್‌. ಪಾಟೀಲ (ಕೂಚಬಾಳ) ಸಹಕಾರದೊಂದಿಗೆ ಸಾಮೂಹಿಕ ವಿವಾಹ ಜರುಗಲಿವೆ.

ಲೋಕಾರ್ಪಣೆಗೆ ಗಣ್ಯರ ದಂಡು: ಶ್ರೀಮಠದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ಶಾಸಕರಾದ ಗೋವಿಂದ ಕಾರಜೋಳ, ರಮೇಶ ಭೂಸನೂರ, ಅರುಣ ಶಹಾಪುರ, ಹನುಮಂತ ನಿರಾಣಿ, ಮಾಜಿ ಶಾಸಕರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌. ಕೆ. ಬೆಳ್ಳುಬ್ಬಿ, ವಿಠ್ಠಲ ಕಟಕದೊಂಡ, ದೊಡ್ಡಪ್ಪಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಪ್ರಭು ದೇಸಾಯಿ, ಜಿಪಂ ಸದಸ್ಯೆ ಜ್ಯೋತಿ ಅಸ್ಕಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಭಾಗವಹಿಸಲಿದ್ದಾರೆ.

ಜಿ. ಟಿ. ಘೋರ್ಪಡೆ

Advertisement

Udayavani is now on Telegram. Click here to join our channel and stay updated with the latest news.

Next