Advertisement

ಅಂಗಡಿಗಳ ತೆರವಿಗೆ ಗ್ರಾಪಂನಿಂದ ಗಡುವು

01:09 PM Sep 19, 2019 | Naveen |

ಭೀಮಸಮುದ್ರ: ಇಲ್ಲಿನ ಗ್ರಾಮ ಪಂಚಾಯತ್‌ ವತಿಯಿಂದ ರಸ್ತೆ ಅಗಲೀಕರಣ ಮಾಡಲು ನಿರ್ಧರಿಸಲಾಗಿದ್ದು, ಗ್ರಾಪಂ ಜಾಗದಲ್ಲಿರುವ ಬೀದಿಬದಿಯ ಅಂಗಡಿಗಳ ಮಾಲೀಕರಿಗೆ ಬಗ್ಗೆ ಬುಧವಾರ ಗ್ರಾಪಂನಿಂದ ನೋಟಿಸ್‌ ನೀಡಲಾಯಿತು. ಇನ್ನು ನಾಲ್ಕೈದು ದಿನಗಳಲ್ಲಿ ಅಂಗಡಿಗಳನ್ನು ತೆರವುಗೊಳಿಸುವಂತೆ ಅಂಗಡಿ ಮಾಲೀಕರಿಗೆ ಗ್ರಾಪಂ ಅಧ್ಯಕ್ಷ ಟಿ.ಜಿ. ಅರುಣ್‌ಕುಮಾರ್‌ ಗಡುವು ನೀಡಿದರು.

Advertisement

ನಂತರ ಮಾತನಾಡಿದ ಗ್ರಾಪಂ ಅಧ್ಯಕ್ಷರು, ಸುಮಾರು 10-15 ವರ್ಷಗಳಿಂದ ಗ್ರಾಪಂ ಬೊಕ್ಕಸಕ್ಕೆ ಹಣ ಸಂಗ್ರಹವಾಗುತ್ತಿಲ್ಲ. ಗ್ರಾಮ ಪಂಚಾಯತ್‌ ಜಾಗದಲ್ಲಿ ತಮಗೆ ತಿಳಿದಂತೆ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಕಳೆದ 2-3 ವರ್ಷದಿಂದ ಅಂಗಡಿ ವ್ಯಾಪಾರಿಗಳು ಹಾಗೂ ರಸ್ತೆ ಪಕ್ಕದಲ್ಲಿ ಅಂಗಡಿಗಳನ್ನು ಇಟ್ಟಿರುವ ಅಂಗಡಿಕಾರರಿಗೆ ನೋಟಿಸ್‌ ನೀಡುತ್ತಾ ಬರಲಾಗಿದೆ. ಆದರೂ ಅಂಗಡಿ ಖಾಲಿ ಮಾಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತ್‌ಗೆ ಸೇರಿದ ಜಾಗಗಳು ಇರುವುದಿಲ್ಲ. ಹಾಗಾಗಿ ಅಂಗಡಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಲಂಬಾಣಿಹಟ್ಟಿಯಲ್ಲಿರುವ ಗೊಲ್ಲರಹಟ್ಟಿಯಲ್ಲಿ ಜಾಗದ ಸಮಸ್ಯೆ ಇದ್ದು, ರಸ್ತೆ ಅಗಲೀಕರಣ ಮಾಡುವ ಉದ್ದೇಶವಿದೆ. ಆದರೆ ಇಲ್ಲಿ 3-4 ಜನರು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂಬ ದೂರು ವ್ಯಕ್ತವಾಗಿತ್ತು. ತೊಂದರೆ ನೀಡುತ್ತಿರುವವರಿಗೆ ನೋಟಿಸ್‌ ನೀಡಿ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಪಿಡಿಒ, ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‌ಐ ಎಚ್.ವಿ. ಲೋಕೇಶ್‌ ಹಾಗೂ ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next