Advertisement

ಬಿಹಾರದಿಂದ ಬಂದ ಐವರಿಗೆ ಕ್ವಾರಂಟೈನ್‌

01:19 PM Jun 10, 2020 | Naveen |

ಭೀಮಸಮುದ್ರ: ಬಿಹಾರದಿಂದ ಗ್ರಾಮಕ್ಕೆ ಆಗಮಿಸಿದ ಕುಟುಂಬದವರನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಇದಕ್ಕೆ ಅಕ್ಕಪಕ್ಕದ ಮನೆಯವರು ವಿರೋಧ ವ್ಯಕ್ತಪಡಿಸಿದಾಗ ಆರೋಗ್ಯ ಇಲಾಖೆ ಅಧಿಕಾರಿಗಳು ಅವರಿಗೆ ಆರೋಗ್ಯ ಶಿಕ್ಷಣ ನೀಡಿ ಜಾಗೃತಿ ಮೂಡಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಶಿಕ್ಷಣಾಧಿಕಾರಿ ಎನ್‌.ಎಸ್‌. ಮಂಜುನಾಥ, ಜನರು ಭಯದಿಂದ ಹೊರಬರಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಸಮುದಾಯದ ಸಹಕಾರ ಅತ್ಯಗತ್ಯ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ಕುಟುಂಬಗಳಿಗೆ ಜೀವಿಸುವ ಮತ್ತು ವಾಸಿಸುವ ಹಕ್ಕು ಇರುತ್ತದೆ. ನಾವೂ ಬದುಕಿ ಬೇರೆಯ ವರಿಗೂ ಬದುಕಲು ಬಿಡೋಣ ಎಂದರು.

ಕೋವಿಡ್ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಗ್ಲೌಸ್‌, ಮಾಸ್ಕ್ ಧರಿಸಿ ಕೈಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿ. ಬೇರೆಯವರನ್ನು ಹೋಂ ಕ್ವಾರಂಟೈನ್‌ ಮಾಡುವಾಗ ಪ್ರತಿರೋಧ, ಅಡ್ಡಿಪಡಿಸುವುದನ್ನು ಮಾಡಬೇಡಿ. ನಾನು ಕೋವಿಡ್ನಿಂದ ಸುರಕ್ಷಿತವಾಗಿರಬೇಕು, ನನ್ನಿಂದ ಸಮುದಾಯದಲ್ಲಿ ಕೋವಿಡ್ ಹರಡಬಾರದು. ನಿಯಂತ್ರಣ ಹೋರಾಟದಲ್ಲಿ ಆರೋಗ್ಯ ಇಲಾಖೆಗೆ ಸಮುದಾಯಕ್ಕೆ ಯಾವ ರೀತಿಯ ಸಹಕಾರ ನೀಡಬಹುದು ಎಂಬ ಬಗ್ಗೆ ಯೋಚಿಸಿ ಎಂದು ಮನವಿ ಮಾಡಿದರು.

ಬಿಹಾರದಿಂದ ಆಗಮಿಸಿದ ಐದು ಜನರ ಆರೋಗ್ಯ ತಪಾಸಣೆ ನಡೆಸಿ ಗಂಟಲು ದ್ರವವನ್ನು ಸಂಗ್ರಹಿಸಲಾಯಿತು. ಡಾ| ಸಾದಿಕ್‌ವುಲ್ಲಾ, ಪಿಡಿಒ ಬಸಣ್ಣ, ಗ್ರಾಮಲೆಕ್ಕಾಧಿಕಾರಿ ಬಸವರಾಜ್‌, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಖಾಸಿಂ ಸಾಬ್‌, ಆರೋಗ್ಯ ಸಹಾಯಕರಾದ ಮಾರುತಿ, ಪ್ರಸಾದ್‌, ಗೀತಾ, ಪ್ರಯೋಗಶಾಲಾ ತಂತ್ರಜ್ಞರಾದ ಮೀನಾಕ್ಷಿ, ಮಂಜುಳಾ, ಆಶಾ ಕಾರ್ಯಕರ್ತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next