ಹುಮನಾಬಾದ: ಮೋದಿ ಹವಾ ಇಲ್ಲ ಸರ್ಕಾರದ ಆಟ ನಡೆದಿಲ್ಲ ಮತದಾರ ಪ್ರಭುಗಳು ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ ಎಂದು ನೂತನ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಹೇಳಿದ್ದಾರೆ.
ಮಂಗಳವಾರ ನಡೆದ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ ಜಿಲ್ಲೆಯಲ್ಲಿ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರ ಆಟ ಇಲ್ಲಿ ನಡೆದಿಲ್ಲ. ಹಣಬಲ ಕೆಲಸ ಮಾಡಿಲ್ಲ. ಮತದಾರರಿಗೆ ಸೀರೆ, ಹಣ, ನಾಣ್ಯಗಳು ಹಂಚಿರುವುದು ಎಲ್ಲರಿಗೂ ತಿಳಿದ ವಿಷಯ. ಅದರೂ ಕೂಡ ಮತದಾರ ಪ್ರಭುಗಳು ನಮ್ಮ ಕೈ ಹಿಡಿದಿದ್ದಾರೆ ಎಂದರು.
ಇದನ್ನೂ ಓದಿ: ದ.ಕ ದ್ವಿಸದಸ್ಯ ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿ,ಮಂಜುನಾಥ್ ಭಂಡಾರಿಗೆ ಜಯ
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಜಯಸಿಂಗ್, ಅಶೋಕ ಖೇಣಿ, ಅರವಿಂದ ಅರಳಿ, ಚಂದ್ರಸಿಂಗ್, ಶಾಸಕ ರಹೀಮ್ ಖಾನ್, ಮೀನಾಕ್ಷಿ, ಸಹೋದರ ಶಾಸಕ ರಾಜಶೇಖರ ಪಾಟೀಲ, ಡಾ। ಚಂದ್ರಶೇಖರ ಪಾಟೀಲ ಸೇರಿದಂತೆ ಅನೇಕರು ಹಗಲು ಇರುಳು ಶ್ರಮಿಸಿದ್ದಾರೆ. ಪುರಸಭೆ, ಪಟ್ಟಣ ಪಂಚಾಯತ, ಗ್ರಾಮ ಪಂಚಾಯತ, ನಗರಸಭೆ ಸದಸ್ಯರು ಹೆಚ್ಚಿನ ಮತಗಳು ಚಲಾಯಿಸಿ ಜಯಗಳಿಸಲು ಸಹಕಾರ ನೀಡಿದು ಅವರ ಋಣ ಅಭಿವೃದ್ಧಿ ಕಾರ್ಯಮಾಡುವ ಮೂಲಕ ತಿರಿಸುತ್ತೇನೆ ಎಂದು ಹೇಳಿದರು.
ಚುನಾವಣೆಯ ಫಲಿತಾಂಶ ಹೊರ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಅಭಿಮಾನಿಗಳು ಶಾಸಕರ ಮನೆಗೆ ಎದುರಿಗೆ ಜಮಾಯಿಸಿ ಸಂಭ್ರಮಾಚರಣೆ ಮಾಡಿದರು. ಪಟ್ಟಣದ ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.