Advertisement
ಭಾಲ್ಕಿಯಲ್ಲಿ ಶನಿವಾರ ಹಮ್ಮಿ ಕೊಂಡ ಮಾಜಿ ಸಚಿವ ಭೀಮಣ್ಣ ಖಂಡ್ರೆಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ “ಲೋಕನಾಯಕ’ ಅಭಿನಂದನ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರತಿ ವ್ಯಕ್ತಿ ಹುಟ್ಟಿದ ಮೇಲೆ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಹುಟ್ಟು-ಸಾವಿನ ಮಧ್ಯೆ ಸಮಾಜದ ಪರ ಕೆಲಸ ಮಾಡುವವರನ್ನು ಜನ ಸ್ಮರಿಸುತ್ತಾರೆ. ಅಂಥ ಸಾರ್ಥಕ ಬದುಕು ಖಂಡ್ರೆ ಅವರದ್ದಾಗಿದೆ ಎಂದು ಬಣ್ಣಿಸಿದರು.
ಲಾಗಿದೆ. ಖಂಡ್ರೆಯವರ ಒಡನಾಡಿಗಳು, ಅವರ ಸಮಾಜ ಸೇವೆ, ಸಾಧನೆಗಳು ಮತ್ತು ಬಸವತತ್ವ ಪ್ರಚಾರ ಹೀಗೆ ಹಲವು ವಿಷಯಗಳನ್ನು ಲೇಖನಗಳ ಮೂಲಕ ಪರಿಚಯಿಸಿದ್ದಾರೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾರ್ಯಕ್ರಮ ಉದ್ಘಾಟಿಸಿದರು. ಸುತ್ತೂರು ಶ್ರೀಗಳು, ಸಿರಿಗೆರೆ ಶ್ರೀಗಳು, ತುಮಕೂರು ಶ್ರೀಗಳು, ಶ್ರೀಶೈಲ ಜಗದ್ಗುರುಗಳು, ಭಾಲ್ಕಿಯ ಡಾ| ಬಸವಲಿಂಗ ಪಟ್ಟದ್ದೇವರು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ವೀರಪ್ಪ ಮೊಯ್ಲಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋರು ಚನ್ನಬಸಪ್ಪ, ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಸಚಿವರಾದ ಎಚ್.ಕೆ ಪಾಟೀಲ, ಕೆ.ಎಚ್ ಮುನಿಯಪ್ಪ, ಎಂ.ಬಿ. ಪಾಟೀಲ, ಕೆ.ಜೆ. ಜಾರ್ಜ್, ಎಚ್.ಸಿ ಮಹಾದೇವಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ಕೆ.ಎನ್. ರಾಜಣ್ಣ, ಶರಣಬಸಪ್ಪ ದರ್ಶನಾಪುರ, ಡಾ| ಶರಣಪ್ರಕಾಶ ಪಾಟೀಲ, ಜಮೀರ್ ಅಹ್ಮದ್ ಖಾನ್, ರಹೀಮ್ ಖಾನ್, ಆರ್.ಬಿ.ತಿಮ್ಮಾಪುರ, ಎನ್.ಎಸ್.
ಭೋಸರಾಜು ಇನ್ನಿತರರು ಪಾಲ್ಗೊಂಡಿದ್ದರು.
Related Articles
ರಾಜಕಾರಣಿಗಳು ಅರವತ್ತು-ಎಪ್ಪತ್ತು ವರ್ಷ ಬದುಕುವುದೇ ಕಷ್ಟ. ಆದರೆ ಹೋರಾಟಮಯ ಜೀವನದ ಮೂಲಕ ಶತಾಯುಷಿಗಳಾಗಿ ರಾಜಕೀಯದ ಗುರಿ ಸಾ ಧಿಸಿದ ಡಾ| ಭೀಮಣ್ಣ ಖಂಡ್ರೆ ಅವರು ಮಹಾನ್ ವ್ಯಕ್ತಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದರು.
Advertisement
ಹಲವು ಸಾಮಾಜಿಕ ಕಾರ್ಯಕ್ರಮ ಮತ್ತು ರಾಜಕೀಯ ಕೆಲಸಗಳ ಮೂಲಕ ಖಂಡ್ರೆಯವರು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಸಮಾಜದವರನ್ನು ಒಗ್ಗೂಡಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದನ್ನು ಪೂರ್ಣಗೊಳಿಸುವವರೆಗೆ ಸುಮ್ಮನೆ ಕೂಡದಂತಹ ಛಲವಾದಿ ವ್ಯಕ್ತಿತ್ವ ಅವರದ್ದು ಎಂದರು.ಖಂಡ್ರೆಯವರು ಇನ್ನೂ ಸು ದೀರ್ಘ ಕಾಲ ಆರೋಗ್ಯವಂತರಾಗಿ ಬದುಕಲಿ, ಅವರಿಂದ ಮತ್ತಷ್ಟು ಸಮಾಜ ಸೇವಾ ಕಾರ್ಯಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.