Advertisement

ಮೈದುಂಬಿ ಹರಿಯುತ್ತಾ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಭೀಮತೀರ್ಥ ಜಲಪಾತ

06:52 PM Jul 10, 2023 | Team Udayavani |

ಪಣಜಿ: ಹರ್ವಳೆ-ಸಾಖಳಿಯ ಶ್ರೀ ರುದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಭೀಮತೀರ್ಥ ಜಲಪಾತವು ಭೀಕರ ಸ್ವರೂಪವನ್ನು ಪಡೆದುಕೊಂಡಿದೆ. ದೇಶೀಯ ಪ್ರವಾಸಿಗರೊಂದಿಗೆ ಸ್ಥಳೀಯರು ಈ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದಾರೆ. ಬೃಹದಾಕಾರದಲ್ಲಿ ಧುಮ್ಮಿಕ್ಕುವ ಜಲಪಾತ ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಿದೆ.

Advertisement

ಕಳೆದ 15 ದಿನಗಳಿಂದ ಗೋವಾ ರಾಜ್ಯಾದ್ಯಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜಲಪಾತ ಮೈದುಂಬಿಕೊಂಡಿದೆ.  ಜಲಪಾತ ಎಲ್ಲೆ ಮೀರಿ ಧುಮ್ಮಿಕ್ಕುತ್ತಿದೆ. ಇದರಿಂದಾಗಿ  ಪ್ರವಾಸಿಗರನ್ನು ಈ ಜಲಪಾತದ ಸಮೀಪ ತೆರಳು ನಿಷೇಧ ಹೇರಲಾಗಿದೆ.

ಭಾನುವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತಕ್ಕೆ ಭೇಟಿ ನೀಡಿದ್ದು, ನಿರೀಕ್ಷೆಗೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಲಪಾತ ವೀಕ್ಷಣೆಗೆ ಹರಿದುಬಂದಿದ್ದರು.  ಜಲಪಾತ ದೇಶಿ ಹಾಗೂ ವಿದೇಶಿ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಅನೇಕ ಜನರು ಸೆಲ್ಫಿ ತೆಗೆದುಕೊಳ್ಳುವಲ್ಲಿ ಮಗ್ನರಾಗಿರುವುದು ಕಂಡುಬರುತ್ತಿದೆ.

ಭೀಮತೀರ್ಥ ಜಲಪಾತವನ್ನು ಆನಂದಿಸುವಾಗ ಪ್ರತಿಯೊಬ್ಬರೂ ತಮ್ಮ ಕಾಳಜಿಯನ್ನು ತೆಗೆದುಕೊಳ್ಳಬೇಕು. ನೀರಿನ ಆಳ ಗೊತ್ತಿಲ್ಲದವರು ಧುಮುಕಬಾರದು. ಜಲಪಾತದ ಪ್ರದೇಶದಲ್ಲಿ ಕಸ ಹಾಕಬೇಡಿ ಮತ್ತು ಅದನ್ನು ಕಸದ ಬುಟ್ಟಿಗೆ ಎಸೆಯಬೇಡಿ. ಈ ಸ್ಥಳದ ಪವಿತ್ರತೆಯನ್ನು ಕಾಪಾಡಿ ಎಂದು ಶ್ರೀ ರುದ್ರೇಶ್ವರ ದೇವಸ್ಥಾನ ಸಮೀತಿ ಸಂಗೇಶ್ ಕುಂಡಯಿಕರ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next