Advertisement
ಇದೇನು ಭೀಮಾ ನದಿಯೋ ಅಥವಾ ಮರಳು ಭೂಮಿಯೋ? ಎನ್ನುವ ಅನುಮಾನ ಮೂಡಿಸುತ್ತಿದೆ. ಕೋನಾ ಹಿಪ್ಪರಗಾ ಬ್ಯಾರೇಜ್ ಕಂ ಬ್ರಿಡ್ಜ್ ಬಳಿ ನೀರು ಸಂಗ್ರಹಿಸಿ ದೂರದ ಕಲಬುರಗಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ. ಅಲ್ಲದೆ ಕೋಳಕೂರ ಮಾರ್ಗವಾಗಿ ಅಲ್ಲಲ್ಲಿ ಅಲ್ಪಸ್ವಲ್ಪ ನೀರಿನ ಸಂಗ್ರಹಣೆ ಇದ್ದು, ಅದೇ ಹರಿವು ಕಟ್ಟಿಸಂಗಾವಿ ಗ್ರಾಮದ ಹತ್ತಿರ ಅಲ್ಲಲ್ಲಿ ತೆಗ್ಗುಗಳಲ್ಲಿ ಸಂಗ್ರಹವಾಗಿದೆ. ಈ ನೀರು ಜಾನುವಾರುಗಳ ದಾಹ ನೀಗಿಸಲು ಸಾಕಾಗುತ್ತದೆ. ಬೆಳೆದ ಬೆಳೆಗಳು ಬಾಡಿ ಹೋಗಿವೆ.
Related Articles
ಆಸೆಯನ್ನೇ ಬಿಟ್ಟಿದ್ದಾರೆ. ಬೋರವೆಲ್ ಮತ್ತು ಟ್ಯಾಂಕರ್ ನೀರಿಗೆ ಮೊರೆಹೋಗುತ್ತಿದ್ದು, ಮೋಟಾರು ಸೈಕಲ್‌ಗಳ ಮೇಲೆ ಕೊಡಗಳನ್ನು ಕಟ್ಟಿಕೊಂಡು ನೀರು ತರುತ್ತಿದ್ದಾರೆ.
Advertisement
ಅರಣ್ಯ ಇಲಾಖೆ ಗಿಡಮರ ಬೆಳೆಸುವಲ್ಲಿ ವಿಫಲವಾಗಿ ಸಂಪೂರ್ಣ ರಕ್ಷಿತ ಅರಣ್ಯ ಪ್ರದೇಶ ನಶಿಸಿಹೋಗಿದೆ. ನೀರಾವರಿ ಯೋಜನೆಗಳು ಜಾರಿಯಾಗಿಲ್ಲ. ಕಾಲುವೆಗಳು ಹಾಳಾಗಿವೆ. ನೀರಿನ ಸಂಗ್ರಹಣೆ ಮತ್ತು ಅಂತರ್ಜಲ ಸಂರಕ್ಷಣೆ ಬರಗಾಲ ಕಾಮಗಾರಿ, ಉದ್ಯೋಗ ಖಾತ್ರಿ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದೆ ಅರ್ಧಮರ್ಧ ಕೆಲಸ ಗಳಿಂದಾಗಿ ನೀರಿನ ಮೂಲಗಳು ಬರಿದಾಗಿವೆ. ಇಷ್ಟಾದರೂ ಜನಪ್ರತಿನಿಧಿಗಳು ಮತ್ತು ಸರಕಾರಿ ಅಧಿಕಾರಿಗಳು ಸಮಸ್ಯೆ ಬಂದಾಗಲೇ ಪರಿಹರಿಸಲು ಸನ್ನದ್ಧರಾಗುತ್ತಿದ್ದಾರೆ.
ಸಮಸ್ಯೆಗೆ ಬೆನ್ನು ತೋರುತ್ತಿರುವ ಪ್ರತಿನಿಧಿಗಳು ಪುರಸಭೆ ಸದ್ಯ ಆರರಿಂದ ಎಂಟು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸುತ್ತಿದೆ. 23ವಾರ್ಡ್ ಜನರು ಜನಪ್ರತಿನಿಧಿ ಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅರಣ್ಯ ಇಲಾಖೆ ಗಾಢ ನಿದ್ದೆಯಲ್ಲಿದೆ. ಮರಗಿಡಗಳು ಕಣ್ಮರೆಯಾಗಿವೆ. ಪುರಸಭೆಯಲ್ಲಿಯೂ ಜನಪ್ರತಿನಿಧಿ ಗಳ ಆಯ್ಕೆ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಗೊಂದಲ ನ್ಯಾಯಾಲಯದ ಮೆಟ್ಟಿಲು ಏರಿದ್ದು ಚುನಾಯಿತ ಪ್ರತಿನಿಧಿ ಸದಸ್ಯರು ಪಟ್ಟಣದ ಸಮಸ್ಯೆಗಳತ್ತ ಬೆನ್ನು ತೋರಿಸುತ್ತಿದ್ದಾರೆ
ಮರೆಪ್ಪ ಬೇಗಾರ