ಹೊಸದಿಲ್ಲಿ : ಭೀಮಾ ಕೋರೇಗಾಂವ್ ಹಿಂಸೆಗೆ ಸಂಬಂಧಿಸಿದಂತೆ ಭಾರತ ಸರಕಾರದ ವಿರುದ್ಧ ಮಾವೋವಾದಿಗಳು ನಡೆಸಿದ್ದ ಸಂಚಿನ ಎರಡನೇ ಅತೀ ದೊಡ್ಡ ಅನಾವರಣದ ಇನ್ನೊಂದು ವರದಿಯಲ್ಲಿ ಸಿಪಿಐಎಂ ನಗರ-ನಾಯಕತ್ವದ ಉನ್ನತ ಕಾಮ್ರೇಡ್‌ಗಳು ಇಬ್ಬರು ಪ್ರಮುಖ ಕಾಂಗ್ರೆಸ್ ನಾಯಕರೊಂದಿಗೆ ಅನೇಕ ಸಭೆ ನಡೆಸಿರುವುದು ಇದೀಗ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಮಾವೋ ಉನ್ನತ ಕಾಮ್ರೇಡ್‌ಗಳು 2017ರ ನವೆಂಬರ್‌ನಿಂದ 2018ರ ಮೇ ವರೆಗಿನ ಅವಧಿಯಲ್ಲಿ ಕೆಲವು ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದಾಗಿ ಈ ವರದಿಯು ತಿಳಿಸಿದೆ.
ದಿನಗಳ ಹಿಂದಷ್ಟೇ ಗುಪ್ತಚರ ದಳಕ್ಕೆ ದೊರಕಿದ್ದ ಮಾಹಿತಿಗಳ ಪ್ರಕಾರ ಮಾವೋವಾದಿಗಳು ಭಾರತ ಸರಕಾರದ ವಿರುದ್ಧ ನಡೆಸಿದ ಸಂಚಿನ ಭಾಗವಾಗಿ ಅನೇಕ ಸಂಘಟನೆಗಳೊಂದಿಗೆ ಮ್ಯಾನ್‌ಮಾರ್‌ನಲ್ಲಿ ಶಸ್ತ್ರಾಸ್ತ್ರ, ಮದ್ದುಗುಂಡು ಮತ್ತು ತರಬೇತಿಯ ಪಡೆಯುವ ನಿಟ್ಟಿನಲ್ಲಿ ರಹಸ್ಯ ಸಭೆಗಳನ್ನು ನಡೆಸಿದ್ದುದಾಗಿ ಬಹಿರಂಗವಾಗಿತ್ತು.
ಅದಾಗಿ ಇದೀಗ ಹೊಸ ವರದಿಯಲ್ಲಿ ಮಾವೋ ಉನ್ನತ ಕಾಮ್ರೇಡ್‌ಗಳು ಕಾಂಗ್ರೆಸ್‌ನ ಕೆಲವು ನಾಯಕರೊಂದಿಗೆ 2018ರ ಮೇ ತಿಂಗಳ ವರೆಗೂ ನಿರಂತರ ಸಂಪರ್ಕದಲ್ಲಿದ್ದರೆನ್ನುವುದು ಬಹಿರಂಗವಾಗಿದೆ.
ಕಾಂಗ್ರೆಸ್ ಮತ್ತು ಸಿಪಿಐಎಂ ನ ಅನೇಕ ನಾಯಕರ ನಡುವಿನ ಮಹತ್ವದ ರಹಸ್ಯ ಸಭೆಗಳು ಮುಂಬಯಿ ಮತ್ತು ದಿಲ್ಲಿಯಲ್ಲಿ ನಡೆದಿದ್ದು ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ನಡೆಸುವುದಕ್ಕೆ ಕಾನೂನು ಮತ್ತು ಹಣಕಾಸು ನೆರವು ಪಡೆಯುವುದು ಈ ಸಭೆಗಳ ಉದ್ದೇಶವಾಗಿತ್ತು ಎಂದು ವರದಿ ತಿಳಿಸಿದೆ.
ಆದರೆ ಈ ಮಾತುಕತೆಗಳು ಸರಕಾರವನ್ನು ಉರುಳಿಸುವ ಅಥವಾ ಅದರ ವಿರುದ್ಧ ಸಶಸ್ತ್ರ ಹೋರಾಟವನ್ನು ಕೈಗೊಳ್ಳುವ ಸಂಬಂಧದ್ದಾಗಿರಲಿಲ್ಲ ಎಂದು ವರದಿಯು ಸ್ಪಷ್ಟೀಕರಿಸಿದೆ.