Advertisement

ಭೀಮಾ ಕೋರೇಗಾಂವ್‌: ಮುಗಿದ ಗೃಹ ಬಂಧನ; ಅರುಣ್‌, ವೆರ್ನನ್‌ ಅರೆಸ್ಟ್‌

07:36 PM Oct 26, 2018 | Team Udayavani |

ಮುಂಬಯಿ : ಭೀಮಾ ಕೋರೇಗಾಂವ್‌ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆ.28ರಿಂದ ಗೃಹ ಬಂಧನದಲ್ಲಿ ಇರುವ ಮಾನವ ಹಕ್ಕು ಕಾರ್ಯಕರ್ತರಾದ ಅರುಣ್‌ ಮತ್ತು ವೆರ್ನನ್‌ ಅವರನ್ನು  ಪುಣೆ ಪೊಲೀಸರು ಇಂದು ಶುಕ್ರವಾರ ಬಂಧಿಸಿದರು.

Advertisement

ಪುಣೆ ಸೆಶನ್ಸ್‌ ಕೋರ್ಟ್‌ ಇಂದು ಶುಕ್ರವಾರ ಮೂವರು ಮಾನವ ಹಕ್ಕು ಕಾರ್ಯಕರ್ತರಾದ ಅರುಣ್‌ ಫೆರೀರಾ, ಸುಧಾ ಭಾರದ್ವಾಜ್‌ ಮತ್ತು ವೆರ್ನನ್‌ ಗೊನ್ಸಾಲ್‌ವಿಸ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಬಾಂಬೆ ಹೈಕೋರ್ಟ್‌ ಅರುಣ್‌ ಮತ್ತು ವೆರ್ನನ್‌ ಅವರ ಗೃಹ ಬಂಧನವನ್ನು ವಿಸ್ತರಿಸಲು ನಿರಾಕರಿಸಿದುದನ್ನು ಅನುಸರಿಸಿ ಪುಣೆ ಪೊಲೀಸರು ವೆರ್ನನ್‌ ಅವರನ್ನು ಮುಂಬಯಿಯಲ್ಲೂ ಅರುಣ್‌ ಅವರನ್ನು ಮಹಾರಾಷ್ಟ್ರದ ಥಾಣೆಯಲ್ಲೂ ಬಂಧಿಸಿದರು. 

ಡಿಫೆನ್ಸ್‌ ವಕೀಲರು ಪುಣೆಯ ಸೆಶನ್ಸ್‌ ಕೋರ್ಟ್‌ ನಲ್ಲಿ  ಗೊನ್ಸಾಲ್ವಿಸ್‌ ಮತ್ತು ಫೆರೀರಾ ಅವರ ಗೃಹ ಬಂಧನದ ಅವಧಿಯನ್ನು ಇನ್ನೂ ಏಳು ದಿನಗಳಿಗೆ ವಿಸ್ತರಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಇವರ ಗೃಹ ಬಂಧನದ ಅವಧಿ ಇಂದಿಗೆ ಮುಗಿದಿತ್ತು. ಈ ವಿದ್ಯಮಾನವನ್ನು ಅನುಸರಿಸಿ ಪೊಲೀಸರು ಗೊನ್ಸಾಲ್ವಿಸ್‌ ಮತ್ತು ಫೆರೀರಾ ಅವರನ್ನು ಬಂಧಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next