Advertisement

ಸಹರಣಪುರ ಹಿಂಸೆಯ ಮಾಸ್ಟರ್‌ ಮೈಂಡ್‌, ಭೀಮ್‌ ಆರ್ಮಿ ಮುಖ್ಯಸ್ಥ ಸೆರೆ

05:24 PM Jun 08, 2017 | Team Udayavani |

ಶಿಮ್ಲಾ : ಉತ್ತರ ಪ್ರದೇಶದ ಸಹರಣ್‌ಪುರ ಜಿಲ್ಲೆಯಲ್ಲಿ ಈಚೆಗೆ ಸಂಭವಿಸಿದ್ದ ಹಿಂಸೆಯ “ಮಾಸ್ಟರ್‌ ಮೈಂಡ್‌’ ಎನಿಸಿಕೊಂಡಿದ್ದ ಭೀಮ ಆರ್ಮಿಯ ಮುಖ್ಯಸ್ಥ  ಚಂದ್ರಶೇಖರ್‌ ನನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಹಿಮಾಚಲ ಪ್ರದೇಶದ ಡಾಲ್‌ಹೌಸಿಯಲ್ಲಿ  ಇಂದು ಗುರುವಾರ ಬಂದಿಸಿದರು. 

Advertisement

ಕಳೆದ ಮೇ 9ರಂದು ಪಶ್ಚಿಮ ಉತ್ತರ ಪ್ರದೇಶ ಜಿಲ್ಲೆಯ ಸಹರಣಪುರ ಜಿಲ್ಲೆಯಲ್ಲಿ ಸ್ಫೋಟಗೊಂಡಿದ್ದ ಜಾತಿ ಹಿಂಸೆಯಲ್ಲಿ ದಲಿತ ಹಕ್ಕುಗಳ ಸಂಘಟನೆಯ ಮುಖ್ಯಸ್ಥ, 30ರ ಹರೆಯದ ಲಾಯರ್‌, ಭೀಮ್‌ ಆರ್ಮಿ ಮುಖ್ಯಸ್ಥ, ಚಂದ್ರಶೇಖರ್‌ ಶಾಮೀಲಾಗಿದ್ದ. 

ಚಂದ್ರಶೇಖರ್‌ ಮತ್ತು ಆತನ ಇಬ್ಬರು ನಿಕಟವರ್ತಿಗಳ ಬಂಧನಕ್ಕೆ ಪೂರಕವಾಗುವ ಮಾಹಿತಿ ನೀಡುವವರಿಗೆ 12,000 ರೂ. ಇನಾಮನ್ನು ಉತ್ತರ ಪ್ರದೇಶ ಪೊಲೀಸರು ಪ್ರಕಟಿಸಿದ್ದರು. 

ಹೊಸದಿಲ್ಲಿ ಜಂತರ್‌ ಮಂತರ್‌ನಲ್ಲಿ ನಡೆದಿದ್ದ ಬೃಹತ್‌ ರಾಲಿಯ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ ಚಂದ್ರಶೇಖರ್‌, ಸಹರಣಪುರ ಹಿಂಸಾ ಪ್ರಕರಣಕ್ಕೆ ಸಂಬಂಧಿಸಿ ತಾನು ಕೋರ್ಟ್‌ ಮುಂದೆ ಹಾಜರಾವುದಾಗಿ ಹೇಳಿಕೊಂಡಿದ್ದ. 

Advertisement

Udayavani is now on Telegram. Click here to join our channel and stay updated with the latest news.

Next