Advertisement

ದುಸ್ಥಿತಿಯಲ್ಲಿ ಶುದ್ಧೀಕರಣ ಘಟಕ

12:28 PM Jul 25, 2019 | Naveen |

ಬೀಳಗಿ: ಪಟ್ಟಣದ ಹೊರವಲಯದಲ್ಲಿ ನಿರ್ಮಿ ಸಲಾಗಿರುವ ಕೋಟ್ಯಂತರ ವೆಚ್ಚದ ಒಳಚರಂಡಿ ಯೋಜನೆಯ ಮಲೀನ ನೀರು ಶುದ್ಧೀಕರಣ ಘಟಕದ ಪ್ರದೇಶ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ದುಃಸ್ಥಿತಿಗೆ ತಲುಪಿದೆ.

Advertisement

ಕೊಳವೆ ಮಾರ್ಗ ಕಳಪೆ: 17.30 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಒಳಚರಂಡಿ ಕಾಮಗಾರಿ ಮಾಡಲಾಗಿದೆ. ಒಳಚರಂಡಿ ಕಾಮಗಾರಿ ಒಟ್ಟು ಕೊಳವೆ ಮಾರ್ಗ 25,344 ಮೀಟರ್‌ಗಳಾಗಿದೆ. ಒಟ್ಟು 1,189 ಆಳಗುಂಡಿಗಳಿದ್ದು, 11 ಸಾವಿರ ಮೀಟರ್‌ ಉದ್ದದ ಕೊಳವೆ ಮಾರ್ಗಗಳಿದ್ದು, 2,356 ಮನೆಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೆ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ.

ಕೇವಲ ಒಂದೇ ವರ್ಷದೊಳಗೆ ಒಳಚರಂಡಿ ಯೋಜನೆಯ ಮಲೀನ ನೀರು ಶುದ್ಧೀಕರಣ ಘಟಕದ ಪ್ರದೇಶದಲ್ಲಿ ಮುಳ್ಳುಕಂಟಿ ಬೆಳೆದು ನಿಂತಿವೆ. ಶುದ್ಧೀಕರಣ ಘಟಕ ನಿರ್ವಹಣೆಗೆ ತೆರಳಲು ರಸ್ತೆಯೇ ಇಲ್ಲದಂತಾಗಿದೆ. ಅಲ್ಲದೆ, ಶುದ್ಧೀಕರಣ ಘಟಕದ ಬಳಿ ಒಳಚರಂಡಿ ಮಲೀನ ನೀರು ಸರಬರಾಜಾಗುವ ಕೊಳವೆ ಮಾರ್ಗ ಹಲವೆಡೆ ಒಡೆದಿರುವ ಪರಿಣಾಮ, ಕೊಳವೆ ಮಾರ್ಗ ಸೋರಿಕೆಯಾಗುತ್ತಿದೆ. ಮೂರು ದಶಲಕ್ಷ ಲೀಟರ್‌ ಸಾಮರ್ಥ್ಯದ ಮಲೀನ ಶುದ್ಧೀಕರಣ ಘಟಕದ ಸ್ಥಿತಿ ಕೇಳುವರಿಲ್ಲದಂತಾಗಿದೆ. ಮಲೀನ ನೀರು ಶುದ್ಧೀಕರಣ ಘಟಕ ನಿರ್ವಹಣೆಯಿಲ್ಲದೆ ಹೂಳು ತುಂಬಿಕೊಂಡಿದ್ದು, ಹಸಿರು ಪಾಚಿ (ಆಪು) ಬೆಳೆದು ನಿಂತಿದೆ.

17.30 ಕೋಟಿ ಕಾಮಗಾರಿ: ತಾಲೂಕು ಕೇಂದ್ರವಾಗಿರುವ ಬೀಳಗಿ ನಗರದ ಜನಸಂಖ್ಯೆ 20 ಸಾವಿರ ಗಡಿ ದಾಟಿದೆ. 2028ರ ಮಧ್ಯಮ ವರ್ಷಕ್ಕೆ 27 ಸಾವಿರ ಹಾಗೂ 2043 ರ ಅಂತಿಮ ವರ್ಷಕ್ಕೆ 37 ಸಾವಿರ ಜನಸಂಖ್ಯೆ ಹೊಂದಬಹುದೆನ್ನುವ ದೂರದೃಷ್ಟಿಯಿಂದ ಪಟ್ಟಣಕ್ಕೆ ಒಳಚರಂಡಿ ಯೋಜನೆ ಅಗತ್ಯತೆಯಿದೆ. ಸಾರ್ವಜನಿಕರಿಂದ ಕಳಪೆ ಕಾಮಗಾರಿಯ ಆರೋಪ ಎದುರಿಸುತ್ತಲೆ ಒಳಚರಂಡಿ ಕಾಮಗಾರಿ ಕೂಡ ಮುಗಿದು ಹೋಗಿದೆ. ಆದರೆ, ಇದೀಗ ಮಲೀನ ನೀರು ಶುದ್ಧೀಕರಣ ಘಟಕದ ಬಳಿ ಕೊಳವೆ ಮಾರ್ಗ ಸೋರಿಕೆಯಾಗುತ್ತಿರುವುದನ್ನು ಗಮನಿಸಿದರೆ, ಸಾರ್ವಜನಿಕರು ಈ ಹಿಂದೆ ಮಾಡಿರುವ ಕಳಪೆ ಕಾಮಗಾರಿ ಆರೋಪಕ್ಕೆ ಪುಷ್ಠಿ ನೀಡುತ್ತದೆ.

ಕೂಡಲೆ ಕ್ರಮಕ್ಕೆ ಮುಂದಾಗಿ: ಒಳಚರಂಡಿ ಯೋಜನೆ ಮುಗಿದು ವರ್ಷ ಕೂಡ ಪೂರ್ಣಗೊಂಡಿಲ್ಲ. ಆಗಲೇ ಮಲೀನ ನೀರು ಸರಬರಾಜು ಕೊಳವೆ ಮಾರ್ಗ ಸೋರಿಕೆಯಾಗುತ್ತಿದೆ. ಶುದ್ಧೀಕರಣ ಘಟಕದ ಪ್ರದೇಶ ಮುಳ್ಳುಕಂಟಿ ಬೆಳೆದಿದೆ. ಕೊಳವೆ ಮಾರ್ಗ ರಿಪೇರಿ ಮಾಡಬೇಕು. ಘಟಕದ ಪ್ರದೇಶ ಸ್ವಚ್ಛಗೊಳಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next