Advertisement
ಬೀದರ ತಾಲೂಕು ಹೊಕ್ರಾಣಾ(ಕೆ) ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ ಬಸಮ್ಮ ರಾಜಯ್ಯ ಕಳೆದ 2015ರಲ್ಲಿ ಕರ್ತವ್ಯ ನಿರತ ಸಂದರ್ಭದಲ್ಲಿ ಮೃತ್ತಪಟ್ಟಿದ್ದು, ಮರಣ ಪರಿಹಾರ ನೀಡುವಂತೆ ಅವರ ಮಗಳು ಸಂತೋಷಿ ಅನೇಕ ಬಾರಿ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಸೂಕ್ತ ದಾಖಲೆಗಳು ಕೂಡ ನೀಡಿದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
Related Articles
Advertisement
ಅಂಗನವಾಡಿ ಸಹಾಯಕಿಯ ಮರಣ ಪರಿಹಾರಕ್ಕಾಗಿ ಕಳೆದ ನಾಲ್ಕು ವರ್ಷಗಳಿಂದ ಮೃತ ಮಹಿಳೆ ತಾಯಿ, ಮಗಳು ಬೀದರ್ ಶಿಶು ಅಭಿವೃದ್ಧಿ ಇಲಾಖೆಗೆ ಅಲ್ಲೆದಾಡುತಿದ್ದಾರೆ.
ಬೀದರ ತಾಲೂಕು ಹೊಕ್ರಾಣಾ(ಕೆ) ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸಿದ ಬಸಮ್ಮ ರಾಜಯ್ಯ ಕಳೆದ 2015ರಲ್ಲಿ ಕರ್ತವ್ಯ ನಿರತ ಸಂದರ್ಭದಲ್ಲಿ ಮೃತ್ತಪಟ್ಟಿದ್ದು, ಮರಣ ಪರಿಹಾರ ನೀಡುವಂತೆ ಅವರ ಮಗಳು ಸಂತೋಷಿ ಅನೇಕ ಬಾರಿ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ ಸೂಕ್ತ ದಾಖಲೆಗಳು ಕೂಡ ನೀಡಿದರು ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ನಿರಂತರ ನೂರಾರು ರೂ. ಖರ್ಚು ಮಾಡಿ ಬೀದರ ನಗರಕ್ಕೆ ಬರುತ್ತಿದ್ದು, ಅಧಿಕಾರಿಗಳು ಉದ್ದೇಶ ಪೂರ್ವಕ ಅರ್ಜಿ ವಿಲೇವಾರಿ ಮಾಡುತ್ತಿಲ್ಲ. ಯಾವ ಕಾರಣಕ್ಕೆ ಅರ್ಜಿ ವಿಲೇವಾರಿ ಮಾಡುತ್ತಿಲ್ಲ ಎಂದು ಕೂಡ ಪತ್ರ ಬರೆದರು ಇಂದಿಗೂ ಅಧಿಕಾರಿಗಳು ಉತ್ತರ ನೀಡಿಲ್ಲ. ಇಲಾಖೆ ಒಬ್ಬ ಸಿಬ್ಬಂದಿ ಹಣದ ಬೇಡಿಕೆ ಇಟ್ಟಿದ್ದು, ಹಣ ನೀಡಲು ನನ್ನಿಂದ ಸಾಧ್ಯ ಆಗುತ್ತಿಲ್ಲ. ಗ್ರಾಮದ ಜನರು ಸ್ವಾಮಿಗಳು ಎಂದು ನಮ್ಮ ಕಾಲಿಗೆ ಬೀಳುತ್ತಾರೆ. ಆದರೆ, ನಾನು ನಮ್ಮ ಅಜ್ಜಿ ಇಬ್ಬರು ಅಧಿಕಾರಿಗಳ ಕಾಲಿಗೆ ಬಿದ್ದರು ಕೂಡ ಅಧಿಕಾರಿಗಳಿಗೆ ಕರುಣೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಕಳೆದ ಜನವರಿ ತಿಂಗಳಲ್ಲಿ ಪತ್ರ ಬರೆದಿದ್ದು, ಇಂದಿಗೂ ಕೂಡ ಅಧಿಕಾರಿಗಳಿಂದ ಉತ್ತರ ಬಂದಿಲ್ಲ. ಮರಣ ಪರಿಹಾರ ಹಣದಷ್ಟು ಈಗಾಗಲೇ ನಾವುಗಳು ಸಂಚಾರದಲ್ಲಿ ಹಾಕಿದ್ದೇವೆ. ಬಡವರ ಧ್ವನಿ ಕೇಳುವರು ಯಾರು ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆ ಎದುರಿಗೆ ಧರಣಿ ನಡೆಸುವುದಾಗಿ ಮೃತ ಮಹಿಳೆ ಮಗಳು ಸಂತೋಷಿ ತಿಳಿಸಿದ್ದಾರೆ.
ಈ ಕುರಿತು ಬೀದರ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಚ್ಚೆಂದರ ವಾಘಮಾರೆ ಅವರನ್ನು ಸಂಪರ್ಕಿಸಿದ್ದು, ಮರಣ ಪರಿಹಾರಕ್ಕಾಗಿ ಬೆಂಗಳೂರಿಗೆ ವರದಿ ಕಳುಹಿಸಲಾಗಿದೆ. ಆದರೆ, ಈ ವರೆಗೂ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಪರಿಹಾರ ಧನಕ್ಕಾಗಿ ಸಿಬ್ಬಂದಿ ಹಣ ಕೇಳಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.