Advertisement

ಗಮನ ಸೆಳೆದ ವೈವಿಧ್ಯಮಯ ಕರುಗಳ ಪ್ರದರ್ಶನ

03:49 PM Feb 09, 2020 | Naveen |

ಬೀದರ: ರಾಜ್ಯಮಟ್ಟದ ಪಶುಮೇಳ ನಿಮಿತ್ತ ನಗರದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ವೈವಿಧ್ಯಮಯ ಕರುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

Advertisement

ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕಾರ್ಯದರ್ಶಿ ಎ.ಬಿ.ಇಬ್ರಾಹಿಂ ಅವರು ರಿಬ್ಬನ್‌ ಕತ್ತರಿಸುವ ಮೂಲಕ ಕರುಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. 0-6 ತಿಂಗಳು ಹಾಗೂ 6ರಿಂದ 12 ತಿಂಗಳ ವರೆಗಿನ ಕರುಗಳಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮಹಾರಾಷ್ಟ್ರದ ಲಾತೂರ್‌, ಹೈದ್ರಾಬಾದ್‌ ಸೇರಿದಂತೆ ಜಿಲ್ಲೆಯ ಚೌಳಿ, ಬೆಲ್ದಾಳ, ತಳವಾಡ, ಹಸೆಗಾಂವ್‌, ಅಲ್ಲಾಪೂರ, ಢೋಣಗಾಪೂರ, ಭೋಸಗಾ, ಚಿಂತಾಕಿ, ಕಾಡವಾದ, ಬಾವಗಿ, ಬಗದಲ್‌, ಚಿಂತಾಕಿ, ಪಾಶಾಪೂರ, ನೆಮತಾಬಾದ್‌, ಫತ್ತೆಪೂರ, ಕಮಠಾಣಾ, ಬೆಳ್ಳೂರ್‌, ಚಿಟ್ಟಾ ಸೇರಿದಂತೆ ನಾನಾ ಗ್ರಾಮಗಳ ರೈತರು ತಮ್ಮ ಕರುಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದ ಉದ್ಘಾಟನೆ ವೇಳೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತ ಎಸ್‌.ಆರ್‌.ನಟೇಶ್‌, ನಿರ್ದೇಶಕ ಡಾ| ಎಂ.ಟಿ.ಮಂಜುನಾಥ ಹಾಗೂ ಇತರರು ಉಪಸ್ಥಿತರಿದ್ದರು. ರಾಜ್ಯ ಮಟ್ಟದ ಪಶುಮೇಳದಲ್ಲಿ ಪಶುಗಳಿಗೆ ರಸಮೇವು ತಯಾರಿಕೆ, ಜಾನುವಾರುಗಳಿಗೆ ಲಸಿಕೆ, ಜಂತುನಾಶಕ, ಔಧೋಪಚಾರ ಮಾಡುವುದು, ಕುರಿ ಮತ್ತು ಆಡುಗಳ ಲಸಿಕಾ ವಿಧಾನಗಳು ಸೇರಿದಂತೆ ಪಶು ಸಾಕಾಣಿಕೆಯ ಬಗ್ಗೆ ಜನರಿಗೆ ತಿಳಿಸಲಾಯಿತು. ಅಲ್ಲದೇ ಅವುಗಳ ವಿಶೇಷತೆಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಯಿತು.

ಜಾನುವಾರು ಸಂಶೋಧನಾ ಮಾಹಿತಿ ಕೇಂದ್ರದಿಂದ ದೇವಣಿ ತಳಿ ಸೇರಿದಂತೆ ವಿವಿಧ ಪ್ರಭೇದಗಳಾದ ವಾನ್ಸೆರಾ, ಬಾಲಾಂಕ್ಸ ಹಾಗೂ ಶೇಮೇರಾ ಎತ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು. ದೇವಣಿ ತಳಿಯ ಎತ್ತುಗಳು ಉಳುಮೆಯನ್ನು ಕಡಿಮೆ ಅವಧಿಯಲ್ಲಿ ಮಾಡುತ್ತವೆ. ಅಧಿಕ ಭಾರ ಹೊರುವ ಸಾಮರ್ಥ್ಯ ಹೊಂದಿವೆ ಎಂದು ತಿಳಿಸುತ್ತಿರುವುದು ಕಂಡುಬಂದಿತು.

Advertisement

ಹೈದರಾಬಾದ್‌ನಿಂದ ತರಲಾಗಿದ್ದ ಕೋಣಗಳು ಜನರ ಗಮನ ಸೆಳೆದವು. ಒಂದು ದಿನಕ್ಕೆ 40 ತೂಕದ ಆಹಾರ ಸ್ವೀಕರಿಸಿ, 65 ಲೀಟರ್‌ ಹಾಲು ನೀಡುವ ಎಮ್ಮೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸೂನಾಮಿ ತಳಿಯು ಒಂದು ದಿನಕ್ಕೆ 26 ಲೀಟರ್‌ ಹಾಲು ನೀಡುತ್ತದೆ ಎಂದು ಅದರ ಮಾಲೀಕ ಮುಕಮುತ್‌ ಅವರು ಹೇಳಿದರು.

ಜಿಲ್ಲೆಯ ವಿವಿಧ ಹಸುಗಳು ಮೇಳದಲ್ಲಿ ಜನರನ್ನು ಆಕರ್ಷಿಸಿದವು. ನಾಡಿನ ನಾನಾ ಭಾಗಗಳಿಂದ ಬಂದಿರುವ ವಿವಿಧ ತಳಿಯ ಆಕಳು, ಎಮ್ಮೆ, ಕೋಣ, ಕೋಳಿ, ಹಂದಿ ಮತ್ತು ಕುದರೆಯ ಬಗ್ಗೆ ಕುತೂಹಲದಿಂದ ಜನರು ಮಾಹಿತಿ ಪಡೆದುಕೊಂಡರು. ನನ್ನ
8 ವರ್ಷದ ಕೋಣವು ದಿನಕ್ಕೆ 24 ಮೊಟ್ಟೆ, 1.500 ತೂಕದ ಆಹಾರವನ್ನು ಸೇವಿಸುತ್ತದೆ ಎಂದು ಕೋಣದ ಮಾಲೀಕ ಶಾರೂಖ್‌ ಖಾನ್‌ ತಿಳಿಸಿದರು.

ಉಡುಪಿಯಿಂದ ಬಂದ 7 ವರ್ಷದ ಹೊಂಗಲ ಹಾಗೂ 8 ವರ್ಷದ ಆಕ್ರೆಂಜ್‌ ಕೋಣಗಳಿಗೆ ಜೋಳದ ಮೇವು, ಖಜೂರ್‌, ಬೆಣ್ಣೆ, ತುಪ್ಪ ತಿನ್ನಿಸುತ್ತೇವೆ ಎಂದು ತಿಳಿಸಿಸಿದರು. ಇವು ರಾಜ್ಯಮಟ್ಟದಲ್ಲಿ ಚಾಂಪಿಯನ್‌ನಲ್ಲಿ ಜಯ ಸಾಧಿಸಿವೆ. ಈ ಕೋಣವನ್ನು ಮಾರಾಟ ಮಾಡುವುದಿಲ್ಲ ಎಂದು ಸಲ್ಮಾನ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next