Advertisement

ಹೈ.ಕ.ದಲ್ಲಿ ಐಎಎಸ್‌-ಕೆಎಎಸ್‌ ಕೇಂದ್ರ ಆರಂಭಿಸಿ

10:40 AM Jul 31, 2019 | Team Udayavani |

ಬೀದರ: ಹೈ.ಕ. ಭಾಗದಲ್ಲಿ ಬಹಳಷ್ಟು ಪ್ರತಿಭೆಗಳು ಇವೆ. ಸರಕಾರಿ ನೌಕರರ ಸಂಘವು ಈ ಭಾಗದ ಯುವಕರಿಗಾಗಿ ಐಎಎಸ್‌, ಕೆಎಎಸ್‌ ಸೇರಿದಂತೆ ಇತರೆ ತರಬೇತಿ ಕೇಂದ್ರಗಳನ್ನು ತೆರೆದು ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಸಿ. ಚಂದ್ರಶೇಖರ ಸಲಹೆ ನೀಡಿದರು.

Advertisement

ಪಟ್ಟಣದ ಶಿಕ್ಷಣ ಇಲಾಖೆ ಕಚೇರಿಯ ಎಸ್‌ಎಸ್‌ಎ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಮರು ಆಯ್ಕೆಗೊಂಡ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಿಗಾಗಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಪ್ರತಿಭಾವಂತ ಯುವಕರಿಗೆ ಸೂಕ್ತ ಮಾರ್ಗದರ್ಶನ ದೊರೆತರೆ ಜಿಲ್ಲೆಯ ಯುವಕರು ಕೂಡ ರಾಜ್ಯ ಹಾಗೂ ದೇಶದ ವಿವಿಧ ಉನ್ನತ ಹುದ್ದೆಗಳನ್ನು ಪಡೆಯಬಹುದಾಗಿದೆ. ನಮ್ಮ ಭಾಗದ ಯುವಕರಿಗೆ 371(ಜೆ) ಸೌಲಭ್ಯ ಇದ್ದು, ಸೂಕ್ತವಾಗಿ ಬಳಸಿಕೊಳ್ಳಬೇಕು. ಈ ಭಾಗದ ಪ್ರತಿಭೆಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಹೊಂದಿ ಉನ್ನತ ಸ್ಥಾನ ಹೊಂದಲು ನೌಕರರ ಸಂಘ ಸಹಕರಿಸಬೇಕು. ಇಲ್ಲಿಯ ಜನರು ಪರಿಶ್ರಮ ಜೀವಿಗಳು, ಮುಗ್ಧರು ಇದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ಹುರಿದುಂಬಿಸುವ ಕಾರ್ಯ ಆಗಬೇಕಾಗಿದೆ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ನೌಕರ ಸಂಘವು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.

ಜಿಲ್ಲಾ ನೌಕರರ ಸಂಘ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಮಾತನಾಡಿ, ಸರಕಾರಿ ನೌಕರರು ಕೇವಲ ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡದೇ ಸಮಾಜದ ಅಭಿವೃದ್ಧಿಯಲ್ಲಿ ಸಮಾಜ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನೌಕರರ ಸಂಘವು ಕಳೆದ ಅವಧಿಯಲ್ಲಿ ಸ್ವಚ್ಛ ಭಾರತ ಹಾಗೂ ಶೌಚಾಲಯ ನಿರ್ಮಾಣದ ಕಾರ್ಯದಲ್ಲಿ ಕೆಲವು ಗ್ರಾಮಗಳನ್ನು ಸಂಪೂರ್ಣ ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಿದೆ. 30 ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮಾಡು ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಿ 8000 ಶೌಚಾಲಯಗಳನ್ನು ನಿರ್ಮಾಣ ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ 10ನೇ ತರಗತಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲೆಯ ಕೆಲವು ಸರಕಾರಿ ಮತ್ತು ಸರಕಾರಿ ಅನುದಾನಿತ ಪ್ರೌಢಶಾಲೆಗಳನ್ನು ಸಂಘವು ದತ್ತು ತೆಗೆದುಕೊಂಡು, ವಿಶೇಷ ತರಗತಿಗಳನ್ನು ನಡೆಸಿ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದರು.

ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಮಾತನಾಡಿದರು. ನಿವೃತ್ತ ನೌಕರರ ಸಂಘದ ಗೌರವ ಅಧ್ಯಕ್ಷ ರಾಜೇಂದ್ರ ಜೊನ್ನಿಕೇರಿ, ನೂತನ ಗೌರವ ಅಧ್ಯಕ್ಷ ರಮೇಶ ಮಠಪತಿ, ಕೋಶಾಧ್ಯಕ್ಷ ಅಶೋಕರೆಡ್ಡಿ, ರಾಜ್ಯ ಪರಿಷತ್‌ ಸದಸ್ಯ ಪ್ರಕಾಶ ಮಡಿವಾಳ, ನಿರ್ದೇಶಕರಾದ ಶಿವಕುಮಾರ ಬಾವಗೆ, ರಾಜಕುಮಾರ ಪಾಟೀಲ, ರಾಜಕುಮಾರ ಹೊಸದೊಡ್ಡೆ, ಅಬ್ದುಲ ಸತ್ತಾರ, ಪ್ರಭುಲಿಂಗ ತೂಗಾಂವಕರ್‌, ಮನೋಹರ ಕಾಶಿ ಅವರನ್ನು ಸನ್ಮಾನಿಸಲಾಯಿತು.

Advertisement

ಗಿರಿಜಾ, ಶಿವಕುಮಾರ ಬಾವಗೆ, ಯೋಗೇಂದ್ರ ಯದಲಾಪುರೆ, ಎನ್‌.ಎಸ್‌. ಕಟ್ಟಿ, ಬಸವರಾಜ ಜಕ್ಕಾ, ಪ್ರಕಾಶ ಟಾಳೆ, ಅರವಿಂದ ಉಪ್ಪೆ, ಎಚ್. ವಿಠಲ, ಶಿವಲಿಂಗ ಬಿರಾದಾರ, ಮಹೆಬೂಬ ದರ್ಗಾ, ರಾಜಕುಮಾರ, ಮಲ್ಲಿಕಾರ್ಜುನ ಡೋಣಗಾಪೂರೆ, ಅನ್ಸಾರಿ ಬೇಗ್‌, ರೇವಣಪ್ಪಾ ಪಾಟೀಲ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next