Advertisement

ಮಾದಕ ವ್ಯಸನ ಅಂತಾರಾಷ್ಟ್ರೀಯ ಪಿಡುಗು

01:40 PM Oct 16, 2019 | Naveen |

ಬೀದರ: ಮಾದಕ ವ್ಯಸನವೆಂಬುದು ಇಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಿಡುಗಾಗಿ ಕಾಡುತ್ತಿದೆ. ಇದರಿಂದ ಯುವಜನರನ್ನು ಮುಕ್ತಗೊಳಿಸುವುದೇ ನಮ್ಮ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದು ನೆಹರೂ ಯುವ ಕೇಂದ್ರದ ಉಪನಿರ್ದೇಶಕ ಡಿ. ದಯಾನಂದ ಹೇಳಿದರು.

Advertisement

ನಗರದ ಬ್ರಿಮ್ಸ್‌ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವ್ಯಸನ ಮುಕ್ತ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾದಕ ವಸ್ತುಗಳಿಗೆ ಇಂದು ಯುವಜನತೆ ಹೆಚ್ಚು ಬಲಿಯಾಗುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈ ಪಿಡುಗು ಉಲ್ಬಣಗೊಂಡಿದೆ. ಆದ್ದರಿಂದ ವಿಶೇಷವಾಗಿ ಈ ಭಾಗದ ಮುಗ್ಧ ಯುವಜನತೆಯನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಹಳ್ಳಿಗಳಲ್ಲಿ ಕೆಲವರು ಮಾದಕ ವ್ಯಸನವನ್ನೇ ದಿನನಿತ್ಯದ ಕಾರ್ಯ ಎಂದು ತಿಳಿದು ಪ್ರತಿದಿನ ಬೀಡಿ, ಸಿಗರೇಟ್‌, ಮದ್ಯ ಕುಡಿದು ತಮ್ಮ ಆರೋಗ್ಯ ಮತ್ತು ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮುದಾಯ ಕೇಂದ್ರದ ನೌಕರರು ಹಳ್ಳಿಯಲ್ಲಿರುವ ಇಂತಹ ಜನತೆಯನ್ನು ವ್ಯಸನಮುಕ್ತ ಮಾಡುವ ಗುರಿ ಹೊಂದಬೇಕು. ಅದರಲ್ಲೂ ಯುವಕರನ್ನು ಸರಿದಾರಿಗೆ ತರಲು ನಿರಂತರ ಪ್ರಯತ್ನಿಸಬೇಕು ಎಂದು ತಿಳಿಸಿದರು. ಶಿವಯ್ಯ ಸ್ವಾಮಿ ಮಾತನಾಡಿ, ಮಾದಕ ವ್ಯಸನಗಳಿಗೆ ಬಲಿಯಾದ ವ್ಯಕ್ತಿ ಅದನ್ನು ಪಡೆಯುವವರೆಗೂ ಆತನಿಗೆ ಸಮಾಧಾನ ಇರುವುದಿಲ್ಲ. ಕಳ್ಳತನ ಮಾಡಿಯಾದರೂ, ಮನೆಯಲ್ಲಿಯ ವಸ್ತುಗಳನ್ನು ಮಾರಾಟ ಮಾಡಿಯಾದರೂ ಡ್ರಗ್ಸ್‌ ತೆಗೆದುಕೊಳ್ಳುತ್ತಾನೆ. ಇದರಿಂದ ತಾನು ಹಾಳಾಗುವುದಲ್ಲದೆ ಇಡೀ ಕುಟುಂಬದ ಸ್ವಾಸ್ಥ್ಯವನ್ನೇ ಹಾಳುಗೆಡವುತ್ತಾನೆ.ವಿದೇಶದಿಂದ ಭಾರತಕ್ಕೆ ಡ್ರಗ್ಸ್‌ ಕಳುಹಿಸುತ್ತಿದ್ದಾರೆ. ಭಾರತದ ಯುವಕರನ್ನು ಶಕ್ತಿಹೀನರನ್ನಾಗಿ ಮಾಡುವ ದೊಡ್ಡ ಹುನ್ನಾರ ನಡೆದಿದೆ. ಆದ್ದರಿಂದ ಗಡಿಯಲ್ಲಿ ವೀರಯೋಧರು ದೇಶವನ್ನು ಕಾಯುತ್ತಿದ್ದರೆ, ದೇಶದ ಒಳಗೆ ಆಂತರಿಕ ಶತ್ರುವಾದ ಈ ಡ್ರಗ್ಸ್‌ ಧಂದೇಕೋರರ ವಿರುದ್ಧ ನಿರಂತರ ಹೋರಾಡಬೇಕಾಗಿದೆ. ಇದರಿಂದ ಯುವಕರನ್ನು ಕಾಪಾಡಬೇಕಾಗಿದೆ ಎಂದರು.

ಡಾ| ಪಲ್ಲವಿ ಕೇಸರಿ ಮಾತನಾಡಿ, ಸಮುದಾಯ ಆರೋಗ್ಯದ ನೌಕರರು ಗ್ರಾಮಗಳಿಗೆ ತೆರಳಿ ಪ್ರಾಮಾಣಿಕತೆಯಿಂದ ದುಡಿಯಬೇಕು. ಮಾದಕ ವ್ಯಸನಕ್ಕೆ ಒಳಗಾದ ಯುವಕರಲ್ಲಿ ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ಒಬ್ಬ ವ್ಯಕ್ತಿ ಒಂದು ಸಾರಿ ವ್ಯಸನಕ್ಕೆ ಅಂಟಿಕೊಂಡರೆ ಆತ ಬಿಡುವುದು ಬಹಳ ಕಷ್ಟ. ಅದರಿಂದ ದೂರ ಉಳಿಯುವಂತೆ ಯುವಕರಿಗೆ ತಿಳಿಸಿದರು.

Advertisement

ಕಾನೂನು ಬಾಹೀರವಾಗಿ ಅನೇಕ ಜನರು ಮಾದಕ ವಸ್ತುಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಿ ಜನರನ್ನು ಹಾಗೂ ಈ ಸಮಾಜವನ್ನು ಹಾಳು ಮಾಡುತ್ತಿರುವುದು ವಿಷಾದನೀಯ. ಆದ್ದರಿಂದ ಸಮಾಜದ ಸ್ವಾಸ್ಥ್ಯ  ಕಾಪಾಡುವುದು ನಮ್ಮ ನಿಮ್ಮೆಲ್ಲರ
ಹೊಣೆಯಾಗಿದೆ ಎಂದರು.

ನೆಹರೂ ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ಪಿ.ಶ್ರೀನಿವಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂತಪ್ಪ ಡೋಣಿ, ಬ್ರಿಮ್ಸ್‌ನ ನಿರ್ದೇಶಕ ಡಾ| ಎಸ್‌.ವಿ.ಕ್ಷೀರಸಾಗರ, ಡಾ| ದಿಲೀಪ ರಾಠೊಡ ಮಾತನಾಡಿದರು. ಡಾ| ಕೀರ್ತಿ, ಪ್ರೊ| ಈರಣ್ಣ ಲೋಣಿ, ರುಕ್ಮಿಣಿ ಜಿ., ಶ್ರೀ ನವನಾಥ ಖೇಡೆ, ಡಾ| ರಾಹುಲ್‌ ಬೇದ್ರೆ, ಡಾ| ಅಶೋಕ ಶೆಳಕೆ, ಪ್ರೊ| ಶಶಿಕಾಂತ, ಗುರುನಾತ ಉದಗೀರೆ, ಪ್ರೊ| ಅಮುಲ್‌ ಕಾಂಬಳೆ, ಜೈಶ್ರೀ ಮೇತ್ರೆ ಅನೇಕರು ಉಪಸ್ಥಿತರಿದ್ದರು.

ನ್ಯಾಷನಲ್‌ ಇನ್ಸ್‌ಟಿ ಟ್ಯೂಟ್‌ ಆಫ್‌ ಸೋಸಿಯಲ್‌ ಡಿಫೆನ್ಸ್‌ ನವದೆಹಲಿ, ಸಾಮಾಜಿನ ನ್ಯಾಯ ಇಲಾಖೆ, ಯುವ ಹಾಗೂ ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಬ್ರಿಮ್ಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಕಮ್ಯುನಿಟಿ ಮೆಡಿಸೈನ್‌ ಮತ್ತು ಇಗ್ನೋ ಸ್ಟಡಿ ಸೆಂಟರ್‌ ಬ್ರಿಮ್ಸ್‌, ಕರುಣಾಮಯ ಯುವಕ ಸಂಘ ನಾವದಗೇರಿ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು

Advertisement

Udayavani is now on Telegram. Click here to join our channel and stay updated with the latest news.

Next