Advertisement

ಶಿವಾಜಿ ವ್ಯಕ್ತಿತ್ವ ಎಲ್ಲರಿಗೂ ಮಾರ್ಗದರ್ಶಿ

11:46 AM Feb 20, 2020 | |

ಬೀದರ: ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ ಮತ್ತು ಸಾಹಸ ಗುಣಗಳು, ವ್ಯಕ್ತಿತ್ವ ಎಲ್ಲರಿಗೂ ಮಾರ್ಗದರ್ಶಿ ಎಂದು ಜಿಪಂ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ತಿಳಿಸಿದರು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಶಿವಾಜಿ ಸಾಧನೆ ಹಿಂದೆ ಅವರ ತಾಯಿ ಜೀಜಾಬಾಯಿ ಪಾತ್ರವೇ ಹೆಚ್ಚು. ರಾಮಾಯಣ, ಮಹಾಭಾರತ, ಸಂಸ್ಕೃತಿ ಬಗ್ಗೆ ನೀಡಿದ ಪಾಠಗಳನ್ನು ಶಿವಾಜಿಯವರು ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ತಿಳಿಸಿದರು.

ಮಹಾರಾಷ್ಟ್ರದ ಪರಭಾಣಿಯ ಕೇಶವ ಖಟಿಂಗ್‌ ಉಪನ್ಯಾಸಕರಾಗಿ ಮಾತನಾಡಿ, ಶಿವಾಜಿ ಮಹಾರಾಜರ ಸಾಧನೆಗಳು ಕೇವಲ ಮರಾಠಿ ಮತ್ತು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿರದೇ ಇಡೀ ವಿಶ್ವದಾದ್ಯಂತ ಹರಡಿವೆ. ಅವರು ಯುದ್ಧ ಕೌಶಲ್ಯಗಳನ್ನು ಕರ್ನಾಟಕದಲ್ಲಿಯೇ ಪಡೆದಿದ್ದರು ಎಂದರು.

ಧಾರ್ಮಿಕ ಸಹಿಷ್ಣು: ಶಿವಾಜಿ ಎಂದಿಗೂ ಜಾತಿ, ಧರ್ಮ ಮತ್ತು ಭಾಷೆಗಾಗಿ ಹೋರಾಡಿಲ್ಲ. ಅವರ ಹೋರಾಟ ಎಲ್ಲ ಜನಾಂಗದವರಿಗೆ ಸಂಬಂಧಿ ಸಿತ್ತು. ಶಿವಾಜಿ ಅಂಗ ರಕ್ಷಕರು, ವಕೀಲರು ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಮುಸ್ಲಿಮರನ್ನು ನೇಮಕ ಮಾಡಿದ್ದರು. ಇದು ಅವರಲ್ಲಿದ್ದ ಧಾರ್ಮಿಕ ಭಾವನೆ ಎತ್ತಿ ತೋರಿಸುತ್ತದೆ ಎಂದು ವಿವರಿಸಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯ, ಪದವಿಗಳನ್ನು ಸುಲಭವಾಗಿ ಗೆಲ್ಲಬಹುದು. ಆದರೆ, ಜನರ ಮನಸ್ಸು ಗೆಲ್ಲುವುದು ಕಷ್ಟಕರ. ಎಲ್ಲವನ್ನು ಶಿವಾಜಿ ಮಹಾರಾಜರು ಜಯಿಸಿ ತೋರಿಸಿದ್ದರು. ಅವರ ಹೋರಾಟ ಯಾವುದೇ ಧರ್ಮದ ವಿರುದ್ಧವಾಗಿರದೇ ಅಸತ್ಯ ಮತ್ತು ಅಧರ್ಮದ ವಿರುದ್ಧವಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಮಾಜದ ಮುಖಂಡರಾದ ರಘುನಾಥರಾವ್‌ ಜಾಧವ್‌, ಮುರುಳೀಧರರಾವ್‌ ಕಾಳೆ, ಆರ್‌.ಎಂ. ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ್‌ ಶಿಂಧೆ ಸ್ವಾಗತಿಸಿದರು. ಪ್ರಾಂಶುಪಾಲ ಚನ್ನಬಸವ ಹೇಡೆ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next