Advertisement

ಸಾಮೂಹಿಕ ಹಲ್ಲೆ ತಡೆಯಲು ಆಗ್ರಹಿಸಿ ಪ್ರತಿಭಟನೆ

03:04 PM Jul 07, 2019 | Naveen |

ಬೀದರ: ದೇಶದಲ್ಲಿ ಧರ್ಮದ ಆಧಾರದಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣಗಳನ್ನು ತಡೆಯುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

Advertisement

ದೇಶದಲ್ಲಿ ಪ್ರತಿನಿತ್ಯ ಧರ್ಮದ ಆಧಾರದ ವಿಭಜನೆ, ಕೋಮುವಾದ, ಧರ್ಮದ ಆಧಾರದ ಗುಂಪು ಹತ್ಯೆ ಮತ್ತು ಗುಂಪು ಹಲ್ಲೆಗಳು ನಡೆಯುತ್ತಿವೆ. 4 ವರ್ಷಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಷ್ಟ್ರದ ಗೌರವ ಕುಗ್ಗುವಂತೆ ಮಾಡಿದೆ. ಮಾನವ ಹಕ್ಕುಗಳ ಸಂರಕ್ಷಣೆ ವಿಷಯದಲ್ಲಿಯೂ ಭಾರತ ಕೆಳ ಮಟ್ಟಕ್ಕೆ ಕುಸಿಯುತ್ತಿದೆ. ಅಂತಾರಾಷ್ಟ್ರೀಯ ಸಂಸ್ಥೆ ಯುಎನ್‌ಒನಲ್ಲಿ ಕೂಡ ನಮ್ಮ ದೇಶದ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಬುದ್ಧಿ ಜೀವಿಗಳು ತಮ್ಮ ಧ್ವನಿಯನ್ನು ಹೆಚ್ಚಿಸುತ್ತಿದ್ದಾರೆ. ಕೂಡಲೆ ದೇಶದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಘಟನೆಗಳಿಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರಿಗೆ ಸಲ್ಲಿಸಲಾಯಿತು. ಸದ್ಭಾವನಾ ಮಂಚ್ ಗುರುನಾಥ ಗಡ್ಡೆ, ರಾಬ್ತೆ ಮಿಲ್ಲತ್‌ನ, ಮೌಲಾನಾ ಅಬ್ದುಲ್ ವಹೀದ್‌ ಕಾಸ್ಮಿ, ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ ಬಾಬುರಾವ್‌ ಹೊನ್ನಾ, ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾದ ಮುಬಶ್ಶಿರ್‌ ಶಿಂಧೆ, ಜಮಾ ಅತೆ ಇಸ್ಲಾಮಿ ಹಿಂದ್‌ನ ರಫೀಕ್‌ ಅಹ್ಮದ್‌, ಮಹಮ್ಮದ್‌ ನಿಝಾಮುದ್ದೀನ್‌, ಮಹಮ್ಮದ್‌ ಮೌಜೋಮ್‌, ಮಹಮ್ಮದ್‌ ಅಕ್ರಮ್‌ ಅಲಿ, ಮುಸ್ಲಿಂ ಹ್ಯುಮನ್‌ ರೈಟ್ಸ್‌ನ ಅಬ್ದುಲ್ ವಹಿದ್‌ ಲಖನ್‌, ಎಂ.ಪಿ ಜೈಪೌಲ್, ಸೈಯದ್‌ ಹಾಮೇದ್‌ ಮೊಹಿಯೊದ್ದೀನ್‌ ಖಾದ್ರಿ, ಡಾ|ಚನ್ನಬಸಪ್ಪಾ ಹಾಲಹಳ್ಳಿ, ಶ್ರೀಕಾಂತ ಸ್ವಾಮಿ, ಕಂಟೆಪ್ಪಾ ಗುಮ್ಮೆ, ಸುಭಾಷ ವರ್ಮಾ, ನಬೀ ಖುರೇಷಿ, ಗುರುದ್ವಾರಾ ಪ್ರಬಂಧಕ ಕಮಿಟಿಯ ಸರ್ದಾರ ದರಬಾರಾ ಸಿಂಗ್‌, ಈದ್ಗಾ ಕಮಿಟಿಯ ಅಹ್ಮದ್‌ ಸೇs್ ಹಾಗೂ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next