Advertisement

ಅನಧಿಕೃತ ಲೇಔಟ್ ಮಾಲೀಕರಿಗೆ ನೋಟಿಸ್‌

10:45 AM Aug 24, 2019 | Naveen |

ಬೀದರ: ಹುಮನಾಬಾದ ತಾಲೂಕಿನ ಮೂರು ಪುರಸಭೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ಮಾಣಗೊಂಡ ಅನಧಿಕೃತ ಲೇಔಟ್‌ಗಳ ಮಾಲೀಕರಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಹಶೀಲ್ದಾರ್‌ ಅವರು ನೋಟಿಸ್‌ ನೀಡುವ ಪ್ರಕ್ರಿಯೆ ಆರಂಭಿಸಿದ್ದಾರೆ.

Advertisement

ಸದ್ಯ ಬೀದರ ತಾಲೂಕಿನ ವಿವಿಧ ಅನಧಿಕೃತ ಲೇಔಟ್‌ಗಳ ವಿರುದ್ಧ ಜಿಲ್ಲಾಡಳಿ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಅನಧಿಕೃತ ಲೇಔಟ್‌ಗಳ ಮಾಹಿತಿ ನೀಡುವಂತೆ ಜಿಲ್ಲಾಡಳಿತ ಆಯಾ ತಾಲೂಕಿನ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. ತಹಶೀಲ್ದಾರ್‌ರ ಆದೇಶದ ಮೇರೆಗೆ ವಿವಿಧ ಗ್ರಾಮೀಣ ಭಾಗದ ಕಂದಾಯ ಅಧಿಕಾರಿಗಳು ಭೂ ಮಾಲೀಕರಿಗೆ ನೋಟಿಸ್‌ ನೀಡುವ ಕೆಲಸ ನಿರ್ವಹಿಸುತ್ತಿದ್ದಾರೆ.

ಹುಮನಾಬಾದ, ಚಿಟಗುಪ್ಪ, ದುಬಲಗುಂಡಿ, ಮನ್ನಾಎಖೇಳ್ಳಿ, ಹಳ್ಳಿಖೇಡ (ಬಿ) ಸೇರಿದಂತೆ ವಿವಿಧ ಪ್ರಮುಖ ಕಡೆಗಳಲ್ಲಿ ಹೆಚ್ಚು ಅಕ್ರಮ ಲೇಔಟ್‌ಗಳು ರಚನೆಗೊಂಡು, ನೋಟರಿ ಮೂಲಕ ಸಾರ್ವಜನಿಕರಿಗೆ ಮಾರಾಟ ಮಾಡಿರುವುದು ತಿಳಿದುಬಂದಿದ್ದು, ಅವುಗಳ ಲೇಔಟ್‌ಗಳ ಸಂಖ್ಯೆ, ಅಥವಾ ಲೇಔಟ್‌ಗಳ ಮಾಲೀಕ ಹೆಸರುಗಳು ಕಂದಾಯ ಅಧಿಕಾರಿಗಳ ಪಟ್ಟಿಯಲ್ಲಿ ಸೇರದಿರುವುದು ಅನೇಕ ಅನುಮಾನ ಹುಟ್ಟುವಂತೆ ಮಾಡಿದೆ. ಈ ಕುರಿತು ತಹಶೀಲ್ದಾರ್‌ ನಾಗಯ್ನಾ ಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಹುಮನಾಬಾದ ಪಟ್ಟಣದಲ್ಲಿನ ವಿವಿಧೆಡೆ ನಿರ್ಮಾಣಗೊಂಡ ಅನಧಿಕೃತ ಲೇಔಟ್‌ಗಳ ಕುರಿತು ಖುದ್ದು ಪರಿಶೀಲನೆ ನಡೆಸಲಾಗಿದೆ. ಅವುಗಳ ಆಸ್ತಿ ಸಂಖ್ಯೆಗಳನ್ನು ಅನಧಿಕೃತ ಪಟ್ಟಿಗೆ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಭೂ ಮಾಲೀಕರಿಗೂ ನೋಟಿಸ್‌: ಕರ್ನಾಟಕ ಭೂ ಕಂದಾಯ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಕೃಷಿ ಭೂಮಿಗಳನ್ನು ಕೃಷಿಯೇತರ ಭೂಮಿಯನ್ನಾಗಿಸಿ ಪರಿವರ್ತಿಸಿಕೊಂಡು ಕಾನೂನು ಉಲ್ಲಂಘನೆ ಮಾಡಿದ ಹಾಗೂ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸದ ಭೂ ಮಾಲೀಕರಿಗೂ ತಾಲೂಕು ದಂಡಾಧಿಕಾರಿಗಳು ನೋಟಿಸ್‌ ನೀಡುತ್ತಿದ್ದಾರೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 192-ಎ ಕಾಯ್ದೆಯನ್ನು ಉಲ್ಲಂಘಿಸಿ ನೂರಾರು ಎಕರೆ ಪ್ರದೇಶದಲ್ಲಿ ಲೇಔಟ್‌ಗಳನ್ನು ನಿರ್ಮಿಸಿ ಮಾರಾಟ ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗುತ್ತಿದೆ.

ಯಾವ ಗ್ರಾಮಕ್ಕೆ ಎಷ್ಟು ನೋಟಿಸ್‌: ಹಳ್ಳಿಖೇಡ(ಕೆ) 5 ಜನರಿಗೆ, ಮೊಳಕೇರಾ 3 ಜನರಿಗೆ, ಚಿತ್ತಕೋಟಿ 4 ಜನರಿಗೆ, ಗಡವಂತಿ ಗ್ರಾಮದ 3 ಜನರಿಗೆ, ಬೋರಂಪಳ್ಳಿ 6 ಜನರಿಗೆ, ನಂದಗಾಂವ 19 ಜನರಿಗೆ, ಸಿಂಧನಕೇರಾ ಇಬ್ಬರಿಗೆ, ಹಣಕುಣಿ 12 ಜನರಿಗೆ, ಕಪ್ಪರಗಾಂವ 3 ಜನರಿಗೆ, ದುಮ್ಮನಸೂರ 7 ಜನರಿಗೆ, ಮಾಣಿಕನಗರ ಇಬ್ಬರಿಗೆ, ಕಲ್ಲೂರ 5 ಜನರಿಗೆ, ಹುಡಗಿ 27 ಜನರಿಗೆ, ಹಿಲಾಲಪೂರ 14 ಜನರಿಗೆ, ಮರಖಲ್ 16 ಜನರಿಗೆ, ಶಕ್ಕರಗಂಜ ಗ್ರಾಮದ 10 ಜನರಿಗೆ, ಮದಗಾಂವ 4 ಜನರಿಗೆ, ಅಲ್ಲೂರ 8 ಜನರಿಗೆ, ಮಲ್ಕಾಪೂರ 5 ಜನರಿಗೆ, ಬೇನಚಿಂಚೋಳ್ಳಿ 10 ಜನರಿಗೆ, ಕಬೀರಾಬಾದ 13 ಜನರಿಗೆ, ಹಳ್ಳಿಖೇಡ(ಬಿ) 24 ಜನರಿಗೆ, ನಾಮದಾಪೂರ 3 ಜನರಿಗೆ, ಸಿತಾಳಗೇರಾ 4 ಜನರಿಗೆ, ನಿಂಬೂರ 12 ಜನರಿಗೆ, ಅಮೀರಾಬಾದ 13 ಜನರಿಗೆ, ಸೇಡೋಳ ಗ್ರಾಮದ 6 ಜನರಿಗೆ, ಜಲಸಿಂಗಿ 3 ಜನರಿಗೆ, ವರವಟ್ಟಿ(ಕೆ) 3 ಜನರಿಗೆ, ಚೀನಕೇರಾ 8 ಜನರಿಗೆ, ಘಾಟಬೋರಳ 6 ಜನರಿಗೆ, ಘೋಡವಾಡಿ 3 ಜನರಿಗೆ, ಹಂದಿಕೇರಾ 28 ಜನರಿಗೆ, ಹುಣಸಗೇರಾ 5 ಜನರಿಗೆ, ಹುಣಸನಾಳ 5 ಜನರಿಗೆ, ಕುಮಾರ ಚಿಂಚೋಳಿ 18 ಜನರಿಗೆ, ಕನಕಟ್ಟಾ 26 ಜನರಿಗೆ, ಸುಲ್ತಾನಬಾದ 12 ಜನರು, ಚಂದನಹಳ್ಳಿ 3 ಜನರಿಗೆ, ದುಬಲಗುಂಡಿ 13 ಜನರಿಗೆ, ಮುಗನಾರ್‌ ಗ್ರಾಮದ 21 ಜನರಿಗೆ, ಚಿಟಗುಪ್ಪ ಪಟ್ಟಣದ 39 ಜನರು, ಬೇಳಕೇರಾ 5 ಜನರಿಗೆ, ಶಾಮತಾಬಾದ 3 ಜನರಿಗೆ, ಇಟಗಾ 3 ಜನರಿಗೆ, ತಾಳಮಡಗಿ ಇಬ್ಬರು, ಕಂದಗೂಳ ಇಬ್ಬರು, ಹಿಪ್ಪರ್ಗಾ ಮೂರು ಜನ, ಕೊಡಂಬಲ 26 ಜನರು, ಮಾಡಗೂಳ ಇಬ್ಬರು, ರಾಮಪೂರ 9 ಜನರು, ವಳಖೀಂಡಿ 3 ಜನ, ಬೇಮಳ ಖೇಡಾ 75ಕ್ಕೂ ಅಧಿಕ, ಬೋರಾಳ 3 ಜನ, ಕರಕನಳ್ಳಿ 11 ಜನ, ಚಾಂಗಲೇರಾ 35 ಜನ, ಉಡಮನಳ್ಳಿ 5 ಜನ, ಮೀನಕೇರಾ 65 ಜನ ಹಾಗೂ ಮನ್ನಾಎಖೇಳ್ಳಿ ಗ್ರಾಮದಲ್ಲಿ ಸುಮಾರು 700ಕ್ಕೂ ಅಧಿಕ ಜನರಿಗೆ ನೋಟಿಸ್‌ ನೀಡಲು ಕಂದಾಯ ಅಧಿಕಾರಿಗಳು ಪಟ್ಟಿ ಸಿದ್ಧಪಟಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಆದೇಶದಂತೆ ತಾಲೂಕಿನ ವಿವಿಧೆಡೆ ನಿರ್ಮಾಣಗೊಂಡಿರುವ ಅನಧಿಕೃತ ಲೇಔಟ್‌ಗಳ ಕುರಿತು ಪಟ್ಟಿ ತಯಾರಿಸಲಾಗಿದ್ದು, ಅವುಗಳನ್ನು ಪರಿಶೀಲಿಸಿ ನೋಟಿಸ್‌ ನೀಡಲಾಗುತ್ತಿದೆ. ಸೂಕ್ತ ದಾಖಲೆಗಳನ್ನು ನೀಡಿದ ಭೂ ಮಾಲೀಕರ ಭೂಮಿಯನ್ನು ಕರ್ನಾಟಕ ಸರ್ಕಾರದ ಹೆಸರಲ್ಲಿ ಸೇರಿಸಲು ಆದೇಶ ಇದೆ. ಇನ್ನು ಪಟ್ಟಣದ ಕೆಲವು ಸರ್ವೇ ಸಂಖ್ಯೆಗಳಲ್ಲಿ ಅನಧಿಕೃತ ಲೇಔಟ್‌ಗಳು ನಿರ್ಮಾಣಗೊಂಡಿರುವ ಬಗ್ಗೆ ಮಾಹಿತಿ ಇದ್ದು, ಅವುಗಳನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದೆ.
ನಾಗಯ್ಯ ಸ್ವಾಮಿ,
 ತಹಶೀಲ್ದಾರ್‌ ಹುಮನಾಬಾದ

ಸೂಕ್ತ ದಾಖಲೆಗಳು ಇರುವ ಲೇಔಟ್‌ಗಳಿಗೆ ಮಾತ್ರ ಆನ್‌ಲೈನ್‌ ಖಾತಾ ನಕಲು ನೀಡಲಾಗುತ್ತಿದೆ. ಇತರೆ ನಿವೇಶನಗಳಿಗೆ ವಿದ್ಯುತ್‌ ಹಾಗೂ ನೀರು ಪೂರೈಕೆಗಾಗಿ ಎನ್‌ಒಸಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಈ ಪ್ರಮಾಣ ಪತ್ರ ಕೇವಲ ತೆರಿಗೆ ಸಂಗ್ರಹಕ್ಕೆ ಮಾತ್ರವಾಗಿದ್ದು, ಎನ್‌ಒಸಿ ಪಡೆದವರು ಭೂಮಿ ಮಾಲೀಕರಾಗುವುದಿಲ್ಲ.
ಸಂತೋಷ ಹಳ್ಳಿಖೇಡ್‌,
 ಮನ್ನಾಎಖೇಳ್ಳಿ ಗ್ರಾಪಂ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next