ಬೀದರ: ನಾಡಹಬ್ಬ ದಸರಾವನ್ನು ಜಿಲ್ಲಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ವಿವಿಧೆಡೆ ದೇವಸ್ಥಾನಗಳಲ್ಲಿ ರವಿವಾರ ವಿಶೇಷ ಪೂಜೆಗಳು ನಡೆದವು. ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು.
ನಗರದ ಸರ್ಕಾರಿ ಆಸ್ಪತ್ರೆ ಸಮೀಪದ ದೇವಿ ದೇವಸ್ಥಾನ ಹಾಗೂ ಕುಂಬರವಾಡ ಸೇರಿದಂತೆ ವಿವಿಧೆಡೆ ಇರುವ ದೇವಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು. ಅಲ್ಲದೆ, ಸಾರ್ವಜನಿಕರು ಕೂಡ ದಸರಾ ಪ್ರಾರಂಭೋತ್ಸವ ನಿಮಿತ್ತ ತಮ್ಮ ಮನೆಗಳಲ್ಲಿ ಘಟ ಸ್ಥಾಪನೆ ಕಾರ್ಯಕ್ರಮ ನೆರೆವೇರಿಸಿದರು. ಮನೆ-ಮನೆಗಳಲ್ಲಿ ಘಟಸ್ಥಾಪನೆ ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ದಸರಾ ಹಬ್ಬದಲ್ಲಿ ದೇವಿ ಪ್ರತೀಕವಾಗಿ ಘಟ ಸ್ಥಾಪನೆ ಮಾಡಲಾಗುತ್ತದೆ. ಘಟ ಸ್ಥಾಪನೆ ಎಂದರೆ ಹುತ್ತದ ಮಣ್ಣು ಅಥವಾ ಹೊಲದಲ್ಲಿನ ಉತ್ತಮ ಮಣ್ಣು ತಂದು ನವ ಧಾನ್ಯಗಳನ್ನು ಅದರಲ್ಲಿ ಬೆರೆಸಿ ಬಳಿಕ ಅದರ ಮೇಲೆ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿ ಎಲೆ ಇಡಲಾಗುತ್ತದೆ. ಕುಡಿಕೆ ನಡುವೆ ತಾಯಿ ವಿಗ್ರಹ ಪ್ರತಿಷ್ಠಾಪಿಸಿ 9 ದಿನಗಳ ಕಾಲ ಶ್ರದ್ಧೆ-ಭಕ್ತಿಯಿಂದ ಪೂಜೆ ಸಲ್ಲಿಸಿ ಆರಾ ಧಿಸುವ ವಾಡಿಕೆ ಇಲ್ಲಿದೆ.
ಮೈದಾ ಹಿಟ್ಟಿಗೆ ಸಕ್ಕರೆ ಸೇರಿಸಿ ಕೈ, ಕಾಲುಂಗರ, ತಾಳಿ, ಬಳೆ, ಎಲೆ ಅಡಿಕೆ, ಬಾಚಿಣಕೆ ಚಿತ್ರ ಮಾಡಿ ಎಣ್ಣೆಯಲ್ಲಿ ಕರಿದು ಪೂಜಾ ಸ್ಥಳದ ಮೇಲೆ ಕಟ್ಟಲ್ಲಾಗುತ್ತದೆ. ವಿಶೇಷವಾಗಿ ನವರಾತ್ರಿ 9 ದಿನಗಳ ಕಾಲ ನಿರಂತರ ದೀಪ ಉರಿಸುವ ಸಂಪ್ರದಾಯ ಪರಂಪರೆಯಿಂದ ನಡೆದುಕೊಂಡು ಬರುತ್ತಿದ್ದು, ಇಂದಿನ ಜನರು ಕೂಡ ಅದೇ ಪರಂಪರೆ ಮುಂದುವರಿಸಿದ್ದಾರೆ.
ಘಟಸ್ಥಾಪನೆ ಮಾಡಿದ 9ನೇ ದಿನಕ್ಕೆ ಎತ್ತರ ಬೆಳೆದು ನಿಂತಿರುವ ಸಸಿಯನ್ನು ಹತ್ತನೇ ದಿನಕ್ಕೆ ನೀರಿರುವ ಪ್ರದೇಶಗಳಲ್ಲಿ ವಿಸರ್ಜನೆ ಮಾಡುವ ಪದ್ಧತಿ ನಡೆದುಕೊಂಡು ಬಂದಿದೆ.
ಜಿಲ್ಲೆಯಲ್ಲಿನ ಜನರು ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ.9 ದಿನಗಳ ಕಾಲ ನಿರಂತರ ದೀಪ ಉರಿಸುವ ನಿಟ್ಟಿನಲ್ಲಿ ಬೇಕಾಗುವ ಎಣ್ಣೆ ಮಾರಾಟದಲ್ಲಿ ಹೆಚ್ಚಿನ ಬೀದರ: ದಸರಾ ಹಬ್ಬದ ಘಟಸ್ಥಾಪನೆ ನಿಮಿತ್ತ ಜನರು ಮಾರುಕಟ್ಟೆಯಲ್ಲಿ ಹೂವು ಖರೀದಿಸಿದರು. ಬೇಡಿಕೆ ಕಂಡು ಬಂತು.